ನಿಜಾಮ್ ಮ್ಯೂಸಿಯಂನಲ್ಲಿ ಕಳ್ಳತನ

ಹೈದರಾಬಾದ್: 

               ಹೈದರಾಬಾದ್ ನ  ನಿಜಾಮ್ ಮ್ಯೂಸಿಯಂನಲ್ಲಿ ಕಳ್ಳತನವಾಗಿದ್ದು, ಸೋಮವಾರ ಬೆಳಗ್ಗೆ ಪ್ರಕಣ ಬೆಳಕಿಗೆ ಬಂದಿದೆ. ವಿಶೇಷ ಭದ್ರತೆ ಇರುವ ಮ್ಯೂಸಿಯಂ ಎಂದೇ ಹೆಸರಾಗಿದ್ದ ನಿಜಾಮ್ ಮ್ಯೂಸಿಯಂ ನಲ್ಲಿ 20 ವರ್ಷಗಳಿಗಿಂತ ಹಳೆಯದಾದ ಬೆಲೆಬಾಳುವ 2 ಕೆ.ಜಿ. ತೂಕದ ಚಿನ್ನದ ಟಿಫಿನ್‌ ಬಾಕ್ಸ್‌, ಟೀ ಕಪ್​ ಸಾಸರ್ ಮತ್ತು ಸ್ಪೂನ್‌ಗಳು ಕಳುವಾಗಿದೆ ಎಂದು ಹೇಳಲಾಗಿದೆ.

               ಕಳ್ಳರು ಸೆ.2ರ ರಾತ್ರಿ ಮೊದಲನೇ ಮಹಡಿಯಲ್ಲಿದ್ದ ಕಬ್ಬಿಣದ ಸರಳು ಮತ್ತು ವೆಂಟಿಲೇಟರ್‌ ಅನ್ನು ಮುರಿದು ಹಗ್ಗದ ಮೂಲಕ ಸಿನಿಮಿಯ ರೀತಿಯಲ್ಲಿ  ಒಳನುಗ್ಗಿ ಮಾಣಿಕ್ಯ, ವಜ್ರ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿರುವ ಟಿಫಿನ್‌ ಬಾಕ್ಸ್‌ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದಾರೆ. ಈ ಕುರಿತು ಸೆಕ್ಯುರಿಟಿ ಗಾರ್ಡ್‌ಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

              ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮ್ಯೂಸಿಯಂ ಒಳಗಿನವರಿಂದಲೇ ಕಳ್ಳತನವಾಗಿರುವ ಕುರಿತು ಅನುಮಾನವಿದ್ದು  ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap