ನೇತ್ರದಾನದ ಮೂಲಕ ಅಂಧರಿಗೆ ಬೆಳಕು ನೀಡಲು ಸಾಧ್ಯ

ತುಮಕೂರು:

          ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಹಲವಾರು ಕಾರಣಗಳಿಂದ ದೃಷ್ಠಿಹೀನರಾಗುತ್ತಿದ್ದಾರೆ. ಅಂತವರ ಪಾಲಿಗೆ ನೇತ್ರದಾನದ ಮೂಲಕ ಬೆಳಕು ನೀಡಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ತಮ್ಮ ಕಣ್ಣುದಾನ ಮಾಡಲು ಮುಂದಾಗಬೇಕು, ಮರಣದ ನಂತರ ಸುಮಾರು 6 ಗಂಟೆಯೊಳಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ನೇತ್ರ ಚಿಕಿತ್ಸಕರಾದ ಪ್ರೊ. ಡಾ.ಪ್ರಸನ್ನಶಂಕರ್‍ಬಾಬುರವರು ತಿಳಿಸಿದರು.
           ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ನೇತ್ರ ಚಿಕಿತ್ಸ ವಿಭಾಗದ ರಾಷ್ಟ್ರೀಯ ನೇತ್ರ ಪಾಕ್ಷಿಕ ಕಾರ್ಯಕ್ರಮ ವನ್ನು ಶ್ರೀದೇವಿ ಆಡಿಟೋರಿಯಂನಲ್ಲಿ ಸೆ. 7 ರಂದು ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜುರವರು ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ನೇತ್ರದಾನದ ಬಗ್ಗೆ ಅರಿವು ಕೈಗೊಳ್ಳುವುದು ಮುಖ್ಯವಾದ ಕಾರ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಎಂ.ಆರ್. ಹುಲಿನಾಯ್ಕರ್, ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್.ಪಾಟೀಲ್‍ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.
             ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯರವರು ಮಾತನಾಡುತ್ತಾ ನೇತ್ರದಾನದ ಬಗ್ಗೆ ಅರಿವು ಮತ್ತು ಜಾಗೃತಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶ್ರೀದೇವಿ ಶೈಕ್ಷಣಿಕ ಅಭಿವೃದ್ಧಿಯ ಹಾಗೂ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಾಲಿನಿ ಎಂ, ರವರು ಮಾತನಾಡುತ್ತಾ ನೇತ್ರದಾನ ಎಂಬುದು ಅತ್ಯಂತ ಮುಖ್ಯವಾದ ದಾನವಾಗಿದೆ. ನೇತ್ರದಾನದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನೇತ್ರದಾನದ ಬಗ್ಗೆ ಸ್ವವಿಸ್ತಾರವಾಗಿ ತಿಳಿಸಿಕೊಟ್ಟರು.
                ಶ್ರೀದೇವಿ ವೈದ್ಯಕೀಯ ಸಮುದಾಯದ ಮುಖ್ಯಸ್ಥರಾದ ಡಾ.ಎಂ.ಎಂ.ಅಂಗಡಿರವರು ಮಾತನಾಡುತ್ತಾ ಮರಣಾನಂತರ ನೇತ್ರಗಳನ್ನು ದಾನ ಮಾಡುವುದರಿಂದ ಅಂಧರಿಬ್ಬರಿಗೆ ಬೆಳಕು ನೀಡಲು ಸಾಧ್ಯ ಎಂದು ತಿಳಿಸುತ್ತಾ ಆರ್ಥಿಕವಾಗಿ ಸಬಲರಲ್ಲದಿರುವವರು ನೇತ್ರದಾನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ನೇತ್ರ ಚಿಕಿತ್ಸಾಕರಾದ ಡಾ.ರವಿಪ್ರಕಾಶ್‍ರವರು ಮಾತನಾಡುತ್ತಾ ದೇಶದಲ್ಲಿ ಸುಮಾರು 50 ಸಾವಿರ ಅತಿ ಕಡಿಮೆ ಕಣ್ಣುಗಳು ಸಂಗ್ರಹವಾಗುತ್ತೀವೆ. ಮಕ್ಕಳಲ್ಲಿ ದೃಷ್ಟಿದೋಷಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ನೇತ್ರ ತಜ್ಞರಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ವಿವರಿಸುತ್ತಾ ನೇತ್ರದಾನ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.
            ಕಾರ್ಯಕ್ರಮದಲ್ಲಿ ನೇತ್ರ ಚಿಕಿತ್ಸಾಕರರಾದ ಡಾ.ರವಿಪ್ರಕಾಶ್‍ರವರು ಸನ್ಮಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನೇತ್ರದಾನದ ಬಗ್ಗೆ ಕಿರುನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಲರಾಜು, ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಡಾ. ಲಾವಣ್ಯ, ಶ್ರೀದೇವಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯ, ಶ್ರೀದೇವಿ ವೈದ್ಯಕೀಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಾಲಿನಿ ಎಂ, ನೇತ್ರ ಚಿಕಿತ್ಸ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಶಂಕರ್‍ಬಾಬು, ಡಾ.ರವಿಪ್ರಕಾಶ್, ಡಾ.ಅಂಗಡಿ, ಡಾ.ಪ್ರವೀಣ್, ಡಾ.ಲತಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap