ಪಾರ್ಶ್ವವಾಯು ವಿನಿಂದ ದೂರವಿರಬೇಕಾ.? ಹಾಗಾದ್ರೆ ಮೊಟ್ಟೆ ಸೇವಿಸಿ..!

     

     ಮಧ್ಯ ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ನಿತ್ಯ ಮೊಟ್ಟೆ ಸೇವಿಸುವುದರಿಂದ ಪಾರ್ಶ್ವವಾಯು ರೋಗದಿಂದ ದೂರವಿರಬಹುದು ಎಂಬ ಕುತೂಹಲಕಾರಿ ವಿಷಯವನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ.

      ಅಮೆರಿಕದ ಖ್ಯಾತ ಆಹಾರ ವಿಜ್ಞಾನಿ ಹಾಗೂ ಎಪಿಡ್ ಸ್ಟ್ಯಾಟ್ ಇನ್ಸ್ ಟಿಟ್ಯೂಟ್ ನ ಹಿರಿಯ ಪ್ರಾಧ್ಯಾಪಕ ಡಿ.ಅಲೆಕ್ಸಾಂಡರ್ ಅವರು ಈ ಬಗ್ಗೆ ಸುಧೀರ್ಘ ಸಂಶೋಧನೆ ನಡೆಸಿದ್ದು, ಇದೀಗ ಅದರ ವರದಿಯನ್ನು ಹೊರಹಾಕಿದ್ದಾರೆ. ಅಲೆಕ್ಸಾಂಡರ್ ಅವರ ನೂತನ ವರದಿಯಂತೆ ವ್ಯಕ್ತಿಯೋರ್ವ ನಿತ್ಯ ಒಂದೊಂದು ಮೊಟ್ಟೆ ಸೇವಿಸುತ್ತಾ ಹೋದರೆ ಅಂತಹ ವ್ಯಕ್ತಿಗೆ ಪಾರ್ಶ್ವವಾಯು ರೋಗ ಹತ್ತರಿ ಕೂಡ ಸುಳಿಯದು ಎಂದು ತಿಳಿಸಿದ್ದಾರೆ. 

      ಅಲೆಕ್ಸಾಂಡರ್ ಅವರು 1982 ರಿಂದ ಸುಧೀರ್ಘ ಅಧ್ಯಯನ ಕೈಗೊಂಡು ತಮ್ಮ ವರದಿಯನ್ನು ನೀಡಿದ್ದಾರೆ. ಅದರಂತೆ ಈ ಸುಧೀರ್ಘ ಅವಧಿಯಲ್ಲಿ ಯಾವ ವ್ಯಕ್ತಿಗಳು ನಿತ್ಯ ಮೊಟ್ಟೆ ಸೇವಿಸುತ್ತಾ ಬಂದಿದ್ದಾರೆಯೋ ಅವರು ಪಾರ್ಶ್ವವಾಯು ರೋಗದಿಂದ ಮುಕ್ತರಾಗಿರುವುದನ್ನು ಕಂಡುಕೊಂಡಿದ್ದಾರಂತೆ.

Related image

     ಆದರೆ ಮೊಟ್ಟೆ ತಿನ್ನದ ಹಾಗೂ ಅಪರೂಪಕ್ಕೊಮ್ಮೆ ಮೊಟ್ಟೆ ಸೇವಿಸುತ್ತಿದ್ದವರಲ್ಲಿ ಈ ಖಾಯಿಲೆಯ ಪರಿಣಾಮ ಹೆಚ್ಚಿನದಾಗಿ ಕಂಡು ಬಂದಿದೆಯಂತೆ. ಅಲೆಕ್ಸಾಂಡರ್ ಈ ವಿಶಿಷ್ಠ ಸಂಶೋಧನೆಗಾಗಿ ಒಟ್ಟು 3,08,000 ಮಂದಿಯನ್ನು ಬಳಕೆ ಮಾಡಿಕೊಂಡಿದ್ದು, ಈ ಪೈಕಿ ಮೊಟ್ಟೆ ಸೇವಿಸದ 2,76,000 ಮಂದಿಯಲ್ಲಿ ಪಾರ್ಶವಾಯು, ಹೃದಯ ಸಮಸ್ಯೆ ಹಾಗೂ ಮೆದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವಿಯೆಂದು ತಾನು ಹೊರಹಾಕಿದ ವರದಿಯಲ್ಲಿ ಹೇಳಿದ್ದಾರೆ.

      ಮೊಟ್ಟೆಯಲ್ಲಿರುವ ವಿಶಿಷ್ಠ ಮತ್ತು ಯಥೇಚ್ಛ ಪ್ರೊಟೀನ್ ಗಳು ಮಾನವನ ದೇಹ ಮತ್ತು ಮೆದುಳಿನ ಆರೋಗ್ಯವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆಯಂತೆ. ಪ್ರಮುಖವಾಗಿ ಮೊಟ್ಟೆ ಮಾನವನ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಇ ಮತ್ತು ಎ ಅಂಶಗಳನ್ನು ಪೂರೈಸುತ್ತದೆ. ಇದಲ್ಲದೆ ಮೊಟ್ಟೆಯ ಹಳದಿ ಭಾಗ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್, ಜೀಕ್ಸಾಂಥಿನ್ ಅಂಶಗಳನ್ನು ಪೂರೈಸುತ್ತದೆ ಎಂದು ವರದಿ ಮೂಲಕ ತಿಳಿಸಿದ್ದಾರೆ.Related image

      ನಿತ್ಯ ಮೊಟ್ಟೆ ತಿನ್ನುವುದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ಶೇ.12ರಷ್ಟು ದೂರವಿಡಬಹುದು ಎಂದು ಅಲೆಕ್ಸಾಂಡರ್ ಹೇಳಿದ್ದಾರೆ. ಅಲೆಕ್ಸಾಂಡರ್ ಪ್ರಕಾರ ನಿತ್ಯ ಒಂದು ಮೊಟ್ಟೆ ತಿಂದರೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಲಕ್ಷ ಹೊಡೆಯುವುದು ಅಥ್ವಾ ಪಾರ್ಶ್ವವಾಯು ಕಾಯಿಲೆ ಬಾರದಂತೆ ನೋಡಿಕೊಳ್ಳಬಹುದಾಗಿದೆ. ನೀವು ಕೂಡ ಪ್ರತಿ ನಿತ್ಯ ೊಂದು ಮೊಟ್ಟೆಯನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ .

Recent Articles

spot_img

Related Stories

Share via
Copy link
Powered by Social Snap