ಪಿಡಿಓ ನಿರ್ಲಕ್ಷ್ಯ : ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್

ಎಂ ಎನ್ ಕೋಟೆ :

  ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮ ಪಂಚಾಯಿತಿಯ ವರ್ಗ 1ರ ಖಾತೆಯಲ್ಲಿ ಪತ್ರಿಕೆಯವರಿಗೆ 3090ರೂ.ಗಳ ಚೆಕ್ ನೀಡಿದ್ದು ಬ್ಯಾಂಕ್‍ಗೆ ಹೋದಾಗ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿರುವ ಘಟನೆ ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

  ಲಕ್ಷಾಂತರ ರೂ.ಗಳ ವ್ಯವಹಾರ ಮಾಡುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಪತ್ರಿಕೆಗೆ ನೀಡಿರುವ ಬಿಲ್‍ಗೆ ಹಣವಿಲ್ಲದೆ ಅಧಿಕಾರಿಗಳ ಮುಂದಾಲೋಚನೆ ಇಲ್ಲದೆ ಚೆಕ್ ನೀಡಿರುವುದು ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಯಾರಿಗೆ ಆಗಲಿ ಸರ್ಕಾರಿ ಚೆಕ್‍ನ್ನು ನೀಡಬೇಕಾದರೆ ವರ್ಗ 1ರ ಖಾತೆಯಲ್ಲಿ ಹಣವಿದೆ ಎಂಬುದು ಖಾತರಿ ಮಾಡಿಕೊಂಡು ಚೆಕ್ ನೀಡಬೇಕು. ಆದರೆ ಪಿಡಿಓ ಬೇಜವಬ್ದಾರಿಯಿಂದ ಖಾಸಗಿ ಪತ್ರಿಕೆಯ ಏಜೆಂಟ್ ಉಮೇಶ್‍ರವರಿಗೆ ಚೆಕ್ ನೀಡಿದ್ದು, ಅವರು ಬ್ಯಾಂಕ್ ಹೋಗಿ ಚೆಕ್ ಹಾಕಿದಾಗ ಬ್ಯಾಂಕ್‍ನಲ್ಲಿ ಚೆಕ್ ಬೌನ್ಸ್ ಆಗಿದೆ. ಹಣವಿಲ್ಲದ ಕಾರಣ 500ರೂ.ಗಳ ದಂಢ ಕಟ್ಟಿ ಚೆಕ್ ನ್ನು ವಾಪಸ್ ಪಡೆದಿರುವ ಘಟನೆ ನಡೆದಿದೆ.

ಪತ್ರಿಕೆಯ ಏಜೆಂಟ್ ಉಮೇಶ್ ಮಾತನಾಡಿ ನನಗೆ ಅವಮಾನವಾಗಿದೆ. ಬ್ಯಾಂಕಿನಲ್ಲಿ ಎಲ್ಲರ ಎದುರು ಫೈನ್ ಕಟ್ಟಿ ಚೆಕ್‍ನ್ನು ವಾಪಸ್ ಪಡೆದಿದ್ದೇನೆ. ಇಂತಹ ಬೇಜವಬ್ದಾರಿ ಪಿಡಿಓ ಮಂಜುನಾಥ್ ವಿರುದ್ದ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ದೂರಕಿಸಿ ಕೊಡಬೇಕು. ಅವರ ಮೇಲೆ ಮಾನನಷ್ಠ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

  ತಾಲ್ಲೂಕು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯ ಮಾತನಾಡಿ ಚೆಕ್ ನೀಡಬೇಕಾದರೆ ಖಾತೆಯಲ್ಲಿ ಹಣವನ್ನು ಖಚಿತಪಡಿಸಿಕೊಂಡು ಚೆಕ್ ನೀಡಬೇಕು. ಆದರೆ ಪಿಡಿಓ ನಿರ್ಲಕ್ಷ್ಯದಿಂದ ಚೆಕ್ ಬೌನ್ಸ್ ಆಗಿದೆ. ನಾನು ಪಿಡಿಓ ವಿರುದ್ದ ಕ್ರಮ ಕೈಗೊಳುತ್ತೇನೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap