ಪುಲಮಾಚಿ-ಆರ್ ಗೊಲ್ಲಹಳ್ಳಿಯ ಗುಂಪುಗಳ ಹೊಡೆದಾಟ : ಪ್ರಕರಣ ದಾಖಲು.

ಮಿಡಿಗೇಶಿ

        ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಪುಲಮಾಚಿ ಗ್ರಾಮದ ಶಿವಕುಮಾರ ಮತ್ತು ಈತನ ತಾಯಿ ಚಿಕ್ಕೀರಮ್ಮ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ಮಾರ್ಗಮಧ್ಯೆ ಐದು ಜನರ ಗುಂಪೊಂದು ಮದ್ಯಪಾನ ಮಾಡುತ್ತಾ ಕುಳಿತುಕೊಂಡಿದ್ದರು. ಇವರನ್ನು ಕಂಡ ಶಿವಕುಮಾರ ಯಾರಿರಬಹುದೆಂದು ಅನುಮಾನದಿಂದ ದ್ವಿಚಕ್ರವಾಹನ ನಿಲ್ಲಿಸಿದಾಗ, ರೆಡ್ಡಿಹಳ್ಳಿ ಗೊಲ್ಲರಹಟ್ಟಿಯ ಮಹಾಲಿಂಗನು ಏಕಾಏಕಿ ಶಿವಕುಮಾರನಿಗೆ ಮದ್ಯದ ಬಾಟಲಿನಿಂದ ಹೊಡೆದು ಬಡಿದು, ಕಾಲುಗಳಿಂದ ತುಳಿದು, ಈತನ ಜೊತೆಯಲ್ಲಿದ್ದ ಮೂರು ಜನರು ಸಹ ಹೊಡೆದು, ಬಡಿದು, ತಾಯಿ ಚಿಕ್ಕೀರಮ್ಮಳು ಗಲಾಟೆ ಬಿಡಿಸಲು ಮುಂದೆ ಬಂದಾಗ ಆಕೆಗೂ ಹೊಡೆದು, ಕಾಲಿನಿಂದ ಮಹಾಲಿಂಗನು ಒದ್ದಿರುತ್ತಾನೆ.

       ಆಕೆಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆಂದು ಮಿಡಿಗೇಶಿ ಪೋಲೀಸ್‍ರವರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರುವ ಶಿವಕುಮಾರ್ ಹೇಳಿಕೆ ನೀಡಿರುತ್ತಾರೆ. ಅಷ್ಟೆ ಅಲ್ಲದೆ ಪುಲಮಾಚಿ ಹಾಗೂ ಆರ್ ಗೊಲ್ಲರಹಟ್ಟಿಯವರು ಕಿತ್ತಾಡುವಾಗ ಶಿವಕುಮಾರನ ಬಳಿಯಿದ್ದ 9500 ರೂ., 26 ಗ್ರಾಂ ತೂಕದ ಬಂಗಾರದ ಕೊರಳ ಚೈನು ಹಾಗೂ ಒಂದು ಉಂಗುರ ಕಳೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿರುತ್ತದೆ. ಸದರಿ ದೂರಿನನ್ವಯ ಮಹಾಲಿಂಗಯ್ಯ ಹಾಗೂ ಈತನ ಜೊತೆಯಲ್ಲಿನ ಮೂರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap