ಪ್ರವಾಹಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್

ಹರಿಹರ:

      ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು. ತಾಲೂಕಿನ ವಿವಿಧೆಡೆ ನದಿಯ ನೀರಿನಿಂದ ಜಲಾವೃತಗೊಂಡ ಸ್ಥಳಗಳಾದ ಸ್ಥಳಗಳನ್ನು ಪರಿಶೀಲಿಸಿ ಜಿಲ್ಲಾಡಳಿತಕ್ಕೆ ಮುಂಜಾಗೃತ ಕ್ರಮಗಳನ್ನು ತಗೆದುಕೊಳ್ಳುವಂತೆ ಸೂಚನೆ ನೀಡಿದ ಸಚಿವ ಎಸ್.ಆರ್. ಶ್ರೀನಿವಾಸ್.

      ಬುಧವಾರ ನಗರಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಹರಿಹರ ತಾಲೂಕಿನ ದೀಟೂರು, ಸಾರಥಿ, ಗಂಗಾನಗರಕ್ಕೆ ಭೇಟಿ ನೀಡಿ, ತುಂಗಭದ್ರಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಸ್ಥಳಗಳಿಗೆ ಬೇಟಿ ನೀಡಿದ ಅವರು ಹವಮಾನ ಇಲಾಖೆ ಸೂಚನೆಯಂತೆ ಮಳೆಯ ಪ್ರಮಾಣ ಹೆಚ್ಚಾಗುವುದರಿಂದ ಇನ್ನು ನದಿನೀರನ ಪ್ರಮಾಣ ಹೆಚ್ಚಾಗುವ ನೀರಕ್ಷೆ ಇದ್ದು, ಮುಂಜಾಗೃತವಾಗಿ ನದಿ ಪಾತ್ರದ ಗ್ರಾಮಗಳಲ್ಲಿ ಸೂಕ್ತ ಕ್ರಮಗಳನ್ನು ತಗೆದುಕೋಲ್ಳುವಂತೆ ಜಿಲ್ಲಾಧಿಕರಿಗಳಿಗೆ ಸೂಚಿಸಿದರು.

      ನಂತರ ನಗರದಲ್ಲಿ ತುಂಗಭದ್ರಾ ನದಿಗೆ ನೂತನವಾಗಿ ನಿರ್ಮಿಸಿರುವ ಸೇತುವೆ ಹಾಗೂ ನೀರಿನ ಪ್ರಮಾಣವನ್ನು ವೀಕ್ಷಿಸಿದರು. ತದನಂತರ ತಾಲೂಕಿನ ದೀಟೂರು ಗ್ರಾಮಕ್ಕೆ ಪ್ರವೇಶಿಸುವ ಮುನ್ನವೇ, ರಸ್ತೆಯ ಎರಡು ಬದಿಯಲ್ಲಿ ನೀರಿನಿಂದ ಜಲಾವೃತಗೊಂಡಿದ್ದ ಭತ್ತದ ಗದ್ದೆಗಳನ್ನು ಅವಲೋಕಿಸಿದರು. ಅಲ್ಲಿಂದ ಸಾರಥಿ ಗ್ರಾಮಕ್ಕೆ ಭೇಟಿ ನೀಡಿ, ಸಾರಥಿ ಮತ್ತು ಚಿಕ್ಕಬಿದರಿ ಗ್ರಾಮಕ್ಕೆ ಕೊಂಡಿಯಾಗಿದ್ದ ಸೇತುವೆ ನದಿಯು ನೀರಿನಿಂದ ಜಲಾವೃತಗೊಂಡಿರುವುದನ್ನು ಪರಿಶೀಲಿಸಿದರು.

      ನಂತರ ಪತ್ರಕರ್ತರೊಡನೆ ಮಾತನಾಡಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು, ತಾಲೂಕಿನಲ್ಲಿ ಜಲಾವೃತಗೊಂಡಿರುವ ಪ್ರದೇಶಗಳನ್ನು ಈಗಾಗಲೆ ನಾನು ಅವಲೋಕಿಸಿದ್ದೇನೆ. ಪ್ರವಾಹಕ್ಕೆ ಒಳಗಾದ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ನಾನು ಕೊಡಿಸುತ್ತೇನೆ. ರೈತರ ಬೆಳೆಗಳು ತುಂಬಾ ಹಾನಿಯಾಗಿವೆ, ಇವರಿಗೆ ಸೂಕ್ತ ಪರಿಯಾರವನ್ನು ನೀಡಲಾಗುವುದು. ಹೊಸ ಸೇತುವೆ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.=

      ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ತಾಲೂಕಿನ ಸಾರಥಿಯಿಂದ ಚಿಕ್ಕಬಿದರಿ ಗ್ರಾಮಕ್ಕೆ ತೆರಳು ಮಧ್ಯೆದಲ್ಲಿರುವ ಸೇತುವೆಗೆ ಆರು ಕೋಟಿ ರೂ ಹಾಗೂ ಕೊಕ್ಕನೂರಿನಿಂದ ಕಡರನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ಮಧ್ಯೆದಲ್ಲಿರುವ ಸೇತುವೆ ಕಾಮಗಾರಿಗೆ ಎರಡು ಕೋಟಿ ರೂ ಮಂಜೂರಾತಿಯನ್ನು ಮಾಜಿ ಶಾಸಕ ಬಿ.ಪಿ ಹರೀಶ್ ಅವರ ಅವಧಿಯಲ್ಲಿಯೇ ಮಾಡಲಾಗಿತ್ತು. ಕಾರಣಾಂತರಗಳಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ನದಿಯಲ್ಲಿನ ನೀರಿನ ಪ್ರಮಾಣ ಇಳಿದ ತಕ್ಷಣ, ಟೆಂಡರ್ ಕರೆದು, ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

      ತಾಲೂಕಿನಲ್ಲಿ ವಿವಿಧೆಡೆ ನದಿಯ ನೀರಿನಿಂದ ರೈತರು ಹಮಗಾಮಿನಲ್ಲಿ ಭತ್ತದ ನಾಟಿ ಮಾಡಿದ್ದು ನಂದಿ ಪಾತ್ರದ ಭತ್ತದ ಗದ್ದೆಗಳು ಜಲಾವೃತಗೊಂಡಿದರೊ, ಇದರ ಬಗ್ಗೆ ಯಾವುದೇ ಪ್ರತಿಕ್ರೀಯೆ ನೀಡದೆ, ರೈತರ ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಕೇಳಲು ನೂತನ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗದಿರುವುದು ರೈತರಲ್ಲಿ ಬೇಸರ ಮೂಡಿಸಿತ್ತು.

      ಈ ವೇಳೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಜಿಲ್ಲಾ ಪಂಚಾಯಿತಿ ಸಿ.ಇ.ಓ ಅಶ್ವತಿ, ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಚೇತನ್, ಉಪಜಿಲ್ಲಾಧಿಕಾರಿ ಕುಮಾರಸ್ವಾಮಿ, ತಹಸೀಲ್ದಾರ್ ರೆಹಾನ್ ಪಾಷಾ, ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ ಹರೀಶ್, ಎಚ್.ಎಸ್ ಶಿವಶಂಕರ್, ತಾ.ಪಂ ಮಾಜಿ ಸದಸ್ಯ ಎಚ್.ಎಚ್ ಬಸವರಾಜ್, ಶಂಕರ್ ಖಟವ್ಕಾರ್, ರೇವಣಸಿದ್ದಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap