ಮುಂಬೈ:
ಹಾಲಿವುಡ್ ನಲ್ಲಿ ಭಾರತದ ಛಾಪನ್ನು ಎತ್ತಿ ಹಿಡಿದ ನಟಿ ಪ್ರಿಯಾಂಕಾ ಛೋಪ್ರಾ ಹಾಲಿವುಡ್ ನ ಕ್ವಾಂಟಿಕೊ ಸರಣಿಯಲ್ಲಿ ನಟಿಸುವ ಮೂಲಕ ಈ ಹೆಗ್ಗಲಿಕೆಗೆ ಪಾತ್ರರಾಗಿದ್ದ ಅವರಿಗೆ ಅಮೇರಿಕಾದಲ್ಲಿ ರೆಡಿಯೋಜಾಕಿಯಾಗಿದ್ದ ನಿಕ್ ಜೊನಾಸ್ ಗೂ ಪ್ರೇಮಾಂಕುರವಾಗಿ ಅವರು ಮದುವೆ ವರೆಗೂ ಬಂದಿದ್ದಾರೆ ನಾಳೆ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನತ್ತ ಇಡೀ ಬಾಲಿವುಡ್ ಕಣ್ಣಿಟ್ಟಿದೆ. ಪ್ರತಿದಿನ ಪ್ರಿಯಾಂಕಾ ಮತ್ತು ನಿಕ್ ಬಗ್ಗೆ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಆಗಸ್ಟ್ 18 ರಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಸ್ಪೆಷಲ್ ಪಾರ್ಟಿ ಅರೇಂಜ್ ಮಾಡಿದ್ದಾರೆ. ಇದೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸದ್ಯ ನಿಕ್ ಜೊನಾಸ್ ತಮ್ಮ ಕುಟುಂಬದ ಜೊತೆಗೆ ಭಾರತಕ್ಕೆ ಆಗಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ