ಬಿಡುಗಡೆಗೆ ತಯಾರಾದ ಅರವಿಂದ ಸಮೇತ ವೀರ

ಹೈದರಾಬಾದ್ 

ಅರವಿಂದ ಸಮೇತ ವೀರ ರಾಘವ ಇದು ಎನ್ ಟಿಆರ್ ಅಭಿನಯದ ಚಿತ್ರ. ಅಕ್ಟೋಬರ್ 11ರಂದು ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದೆ.

ಮಾಟಲ ಮಾಂತ್ರಿಕುಡು ಎಂದೇ ಪ್ರಸಿದ್ದವಾದ ತ್ರಿವಿಕ್ರಮ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಹಾಡುಗಳು ಎಲ್ಲರನ್ನು ಮನರಂಜಿಸಿವೆ. ಎನ್ ಟಿಆರ್ ಮತ್ತು ಪೂಜಾಹೆಗ್ಡೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಅಭಿಮಾನಿಗಳ  ಎಕ್ಸ್ ಪೆಕ್ಟೇಶನ್ ತುಂಬಾನೆ ಇದೆ. ತ್ರಿವಿಕ್ರಮ್  ಎನ್ ಟಿ ಆರ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲ ಚಿತ್ರ  ಇದಾಗಿದ್ದು ಟ್ರೈಲರ್ ಮೂಲಕವೇ ಸಿನಿಮಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಈ ಸಿನಿಮಾದಲ್ಲಿ ಎನ್ ಟಿ ಆರ್ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಕ್ಯಾರೆಕ್ಟರೈಜೇಷನ್ ಹೊಸದಾಗಿ ಮೂಡಿ ಬಂದಿದೆ. ಎನ್ ಟಿ ಆರ್ ಡೈಲಾಗ್ಸ್ ಅಭಿಮಾನಿಗಳಿಗೆ ಮತ್ತಷ್ಟು ಆಸಕ್ತಿ ತರಿಸುತ್ತದೆ. ಮುಖ್ಯವಾಗಿ ಕ್ಲೈಮಾಕ್ಸ್ ಸೀನ್ ಅದ್ಭುತವಾಗಿದೆ ಎಂದು ಸೆನ್ಸಾರ್ ಮೂಲಗಳು ಹೇಳುತ್ತಿವೆ. ಎನ್ ಟಿ ಆರ್ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಉತ್ತಮವಾಗಿ ಮೂಡಿ ಬಂದಿವೆ ಎನ್ನಲಾಗಿದೆ.

ದಸರಾ ಗಿಫ್ಟ್ 

ಅರವಿಂದ ಸಮೇತ ಚಿತ್ರವು ಅಭಿಮಾನಿಗಳಿಗೆ ಈ ವರ್ಷದ ದಸರಾ ಗಿಫ್ಟ್ ಎಂದರೆ ತಪ್ಪಾಗಲಾರದು. ಎನ್ಟಿಆರ್ ಸ್ಟೈಲಿಷ್ ಲುಕ್ ನೊಂದಿಗೆ ಮಾಸ್ ಸ್ಟೋರಿ, ಹೈಪರ್ ಆಕ್ಷನ್ , ರಾಕಿಂಗ್ ಮ್ಯೂಸಿಕ್ ಹಾಗೂ ಸ್ಟ್ರಾಂಗ್ ಕ್ಯಾರೆಕ್ಟರ್ ಆಗಿದ್ದು, ತ್ರಿವಿಕ್ರಮ್ ರವರ ಡೈಲಾಗ್ ಗಳು ತಮನ್ ನೀಡಿದ ಸಂಗೀತ ಒಟ್ಟಾರೆಯಾಗಿ ದಸಾರ ಗಿಫ್ಟ್ ಬ್ಲಾಕ್ ಬಸ್ಟರ್ ಆಗಲಿದೆ ಎಂಬುದು ಅಭಿಮಾನಿಗಳ ಮಾತಾಗಿದೆ.

Recent Articles

spot_img

Related Stories

Share via
Copy link
Powered by Social Snap