ಭಲಿಷ್ಟ ಭಾರತದ ನಿರ್ಮಾಣ ದೇಶ ಭಕ್ತರ ತ್ಯಾಗದಿಂದ ಸಾಧ್ಯ

ಹಾನಗಲ್ಲ :

      ಬಲಿಷ್ಠ ಭಾರತ ನಿರ್ಮಾಣವಾಗಬೇಕಾದರೆ ಈದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ದೇಶ ಭಕ್ತರ ತ್ಯಾಗ ಬಲಿದಾನಗಳನ್ನು ಅರಿತುಕೊಂಡು ನಡೆಯಬೇಕಿದೆ. ಸಿಕ್ಕ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರದಿಂದ ಬಳಸಬಾರದು ಎಂಬ ಅರಿವು ಎಲ್ಲರಿಗೂ ಅತ್ಯಗತ್ಯವಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ನುಡಿದರು.

      ಬುಧವಾರ ಹಾನಗಲ್ಲಿನ ಕ್ರೀಡಾಂಗಣದಲ್ಲಿ ನಡೆದ 72 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತ ಇಂದು ನಾಲ್ಕಾರು ರಾಷ್ಟ್ರಗಳಲ್ಲಿ ಒಂದು ರಾಷ್ಟ್ರವಾಗಿ, ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳಿಂದ ಮೆಚ್ಚುಗೆ ಪಡೆದಿದೆ. ಬದ್ಧತೆ ಇರುವ ವ್ಯಕ್ತಿ ಈ ದೇಶದ ಪ್ರಧಾನಿಯಾದರೆ ಎಲ್ಲವೂ ಸಾಧ್ಯ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ಬ್ರಷ್ಠಾಚಾರ ಮುಕ್ತ, ಭಯಮುಕ್ತ, ಆತಂಕವಾದ ಮುಕ್ತ ಭಾರತ ನಿರ್ಮಾಣದಿಂದ ಹತ್ತು ಹಲವು ದಿಟ್ಟ ನಿರ್ಧಾರ ಕೈಗೊಂಡ ಫಲ ಇಂದು ಭಾರತ ಜಾಗತಿಕ ಮಟ್ಟದಲ್ಲಿ ಮೇಲೇರಲು ಸಾಧ್ಯವಾಗಿದೆ ಎಂದ ಅವರು, ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಆರ್ಥಿಕವಾಗಿ ದುರ್ಬಲಗೊಂಡಿದ್ದರೂ ನೈತಿಕವಾಗಿ ಶ್ರೀಮಂತವಾಗಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಭಾರತ ಆರ್ಥಿಕವಾಗಿ ಶ್ರೀಮಂತವಾಗಿದ್ದು ನೈತಿಕವಾಗಿ ದುರ್ಬಲರಾಗುತ್ತಿರುವುದು ವಿಷಾದದ ಸಂಗತಿ. ಹಣ ಮತ್ತು ಅಧಿಕಾರ ಎರಡು ಇದ್ದರೆ ಏನೆಲ್ಲ ಮಾಡಬಹುದು ಎನ್ನುವ ಮನೋಭಾವ ಹೋಗಬೇಕಾಗಿದೆ ಎಂದರು.

      ಇತ್ತೀಚಿನ ದಿನಗಳಲ್ಲಿ ಇನ್ನೇನು ಮೂರನೇ ಮಹಾ ಯುದ್ಧ ನಡೆದೇ ತೀರುತ್ತದೆ ಎಂದು ಮಾಧ್ಯಮದಲ್ಲಿ ಸುದ್ದಿಯಾಗಿದ್ದನ್ನು ನಾವೆಲ್ಲ ಕೇಳಿದ್ದೇವೆ. ಯುದ್ಧಕ್ಕೆ ಕ್ಷಣಗಣನೆಯೂ ನಡೆದಿತ್ತು. ಯುದ್ಧದ ಎಲ್ಲ ಸಿದ್ಧತೆಗಳು ಆಗಿದ್ದವು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಎಲ್ಲ ದೇಶಗಳ ಜೊತೆ ಉತ್ತಮ ಸಂಪರ್ಕ, ಸಂಬಂಧಗಳನ್ನು ಹೊಂದಿರುವ ಕಾರಣ, ರಷ್ಯ, ಅಮೇರಿಕಾದಂತಹ ಬಲಿಷ್ಠ ರಾಷ್ಟ್ರಗಳು ಭಾರತದ ಮೇಲೆ ಯುದ್ಧಕ್ಕಿಳಿದರೆ ನಿಮ್ಮ ರಾಷ್ಟ್ರಗಳು ಜಗತ್ತಿನ ಭೂಪಟದಲ್ಲಿ ಉಳಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದವು. ಪರಿಣಾಮ ಸೈನ್ಯ ವಾಪಸಾಗಿ ಯುದ್ಧದ ಭೀತಿಯಿಂದ ಹೊರಬಂದಿದ್ದೇವೆ. ಇದೆಲ್ಲ ಬದ್ಧತೆ ಇರುವ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ ಎಂದು ಸಿ.ಎಂ.ಉದಾಸಿ ನಡೆದಿರುವ ಘಟನೆಗಳನ್ನು ನೆನಪಿಸಿದರು.

      ಅರಣ್ಯ ನಾಶಕ್ಕೆ ಕಾರಣ ಹುಡುಕಿ ಅರಣ್ಯ ರಕ್ಷಿಸುವ ನಿಟ್ಟಿನಲ್ಲಿ ದೇಶಾದ್ಯಂತ 5 ಕೋಟಿ ಅಡುಗೆ ಅನೀಲವಮ್ಮಿ ನಾಲ್ಕು ವರ್ಷದಲ್ಲಿ ಪ್ರಧಾನಿ ಮೋದಿ ವಿತರಿಸಿದ್ದಾರೆ. ಅರಣ್ಯ ಉಳಿಸಿ ಬೆಳಸಬೇಕು ಎಂಬ ಅರಿವು ಇನ್ನಾದರು ಬಾರದೆ ಹೋದಲ್ಲಿ, ಪರಿಸರದ ಮೇಲಿನ ದುಶ್ಪರಿಣಾಮದಿಂದ ಮುಂದಿನ ಪೀಳಿಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಅರಣ್ಯ ರಕ್ಷಿಸುವಲ್ಲಿ ಜನಜಾಗ್ರತಿ ಮೂಡಿಸುವ ಅಗತ್ಯ ಇಂದು ಅವಶ್ಯವಾಗಿದೆ ಎಂದು ಅರಣ್ಯ ನಾಶದಿಂದಾಗುವ ದುಶ್ಪರಿಣಾಮಗಳ ಕುರಿತು ಉದಾಸಿ ಎಚ್ಚರಿಕೆ ನೀಡಿದರು.

      ತಾಲೂಕು ತಹಶಿಲ್ದಾರ ಶಕುಂತಲಾ ಚೌಗಲಾ ಮಾತನಾಡಿ, ದೇಶ ಭಕ್ತರ ತ್ಯಾಗ ಬಲಿದಾನಗಳ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಕರಿ ಮಡಿಲಲ್ಲಿ ಮಳೆ ಗಾಳಿ ಬಿಸಿಲೆನ್ನದೆ, ಬಂಧು ಬಾಂದವರನ್ನು, ಹೆಂಡತಿ ಮಕ್ಕಳನ್ನು ಬಿಟ್ಟು, ನಮ್ಮೆಲ್ಲರಿಗೆ ಅಭಯ ಹಸ್ತ ನೀಡಿ ರಕ್ಷಿಸುತ್ತಿರುವ ವೀರ ಯೋಧರನ್ನು ಸ್ಮರಿಸುವ ದಿನವಾಗಲಿ. ಸ್ವಾತಂತ್ರ್ಯಾ ನಂತರ ದೇಶದ ಸ್ಥಿತಿ ದಯನೀಯವಾಗಿತ್ತು. ಕಡು ಬಡತನ, ಹಸಿವಿನಿಂದ ಬಳಲಿದ ರಾಷ್ಟ್ರವಾಗಿತ್ತು.ಕಳೆದ ಏಳು ದಶಕದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಭಾರತವನ್ನು ಅತ್ಯುನ್ನತ ಸ್ಥಾನಕ್ಕೆ ತರಲಾಗಿದೆ. ವಿಶ್ವ ಇಂದು ಭಾರತದತ್ತ ನಿಬ್ಬೆರಗಾಗಿ ನೋಡುತ್ತಿದೆ. ದೇಸವನ್ನು ಮುನ್ನಡೆಸುವ ಜೊತೆಜೊತೆಗೆ ಸದೃಢವಾಗಿ ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದರು.

      ತಾಲೂಕು ಪಂಚಾಯತಿ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಪುರಸಭೆ ಅಧ್ಯಕ್ಷ ಎ ಹಸಿನಾಬಿ ನಾಯ್ಕನವರ, ಮಾಜಿ ಅಧ್ಯಕ್ಷೆ ಯಲ್ಲವ್ವ ಕಂಚಿಗೊಲ್ಲರ, ಸದಸ್ಯ ರವಿರಾಜ ಕಲಾಲ, ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap