ಮಂಡ್ಯದ ಹಳ್ಳಿಯೊಂದರ ಗ್ರಾಮ ಪಂಚಾಯಿತಿ ಸದಸ್ಯನಾಗುವ ಅಯೋಗ್ಯ

ಅಯೋಗ್ಯ ಚಿತ್ರದ ಹಾಡೊಂದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಈ ನಿಟ್ಟಿನಲ್ಲಿ ಸಿನಿಮಾ ನೋಡಲೇ ಬೇಕು ಎಂದು ಹೋಗುವ ಅಭಿಮಾನಿಗಳಿಗೆ ಕಾಮಿಡಿ ಮೂಲಕವೇ ಇಡೀ ಚಿತ್ರ ಸಾಗುತ್ತದೆ.

ಇದೊಂದು ಪಕ್ಕಾ ಲೋಕಲ್  ಹಳ್ಳಿ ಸಿನಿಮಾವಾಗಿದೆ. ಸಿನಿಮಾ ಪೂರ್ತಿ ಹಳ್ಳಿಯಲ್ಲಿಯೇ ನಡೆದು ಹೋಗಿತ್ತದೆ. ಓರ್ವ ಗ್ರಾಮ ಪಂಚಾಯಿತಿ ಸದಸ್ಯ  ತನ್ನ ಅಧಿಕಾರವನ್ನು ಬಳಕೆ ಮಾಡಿಕೊಳ್ಳುವ ಪರಿ ಹಾಗೂ ಕಥಾನಾಯಕನ ಕನಸು ಈಡೇರಿಸಿಕೊಳ್ಳುವ  ಕಥೆಯನ್ನು ಇಟ್ಟುಕೊಂಡು ಮಾಡಿದ ಈ ಚಿತ್ರದಲ್ಲಿ ಕೆಲವೊಂದು ಪ್ರೇಮ ಸನ್ನಿವೇಶಗಳು  ಪ್ರೇಕ್ಷಕರನ್ನು ಮನರಂಜಿಸುತ್ತವೆ.

     ಗ್ರಾಮ ಪಂಚಾಯ್ತಿ ಸದಸ್ಯನಾಗುವ ಕನಸು ಮಂಡ್ಯದ ಒಂದು ಹಳ್ಳಿಯ ಯುವಕನದ್ದಾಗಿರುತ್ತದೆ.  ಸಿದ್ದೇಗೌಡ  ಅಲಿಯಾಸ್ ಸತೀಶ್ ನೀನಾಸಂಗೆ ಸಣ್ಣ ವಯಸ್ಸಿನಿಂದ ‘ಗ್ರಾಮ ಪಂಚಾಯ್ತಿ ಸದಸ್ಯ’ ಆಗಬೇಕು ಎಂಬ ಕನಸ್ಸಿರುತ್ತದೆ. ಚಿಕ್ಕವಯಸ್ಸಿನಲ್ಲಿ ತನ್ನ ತಾಯಿಗೆ ಆದ ಅವಮಾನ ಹಾಗೂ ಊರಿಗೆ ಒಳ್ಳೆಯದು ಮಾಡುವ ದೃಷ್ಟಿಯಿಂದ ಈ ಯುವಕ ಚುನಾವಣೆಗೆ ನಿಲ್ಲುವ ಆಸೆ ಇಟ್ಟುಕೊಂಡಿರುತ್ತಾನೆ. ಶೌಚಾಲಯವೂ ಇಲ್ಲದ ಊರಿನಲ್ಲಿ ಹುಟ್ಟಿದ ಸಿದ್ದೇಗೌಡ ಆ ಊರನ್ನು ಉದ್ಧಾರ ಮಾಡಬೇಕು ಎಂದು ಹೊರಡುತ್ತಾನೆ. ಚಿತ್ರದ  ಕ್ಲೈಮಾಕ್ಸ್ ತನಕ ಸಿದ್ದೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾನೋ ಇಲ್ವೋ ಎಂಬುದು ಕುತೂಹಲಕಾರಿ ವಿಷಯವಾಗಿದೆ.

      ನಾಯಕನಟನಿಗೆ ವಿರುದ್ಧವಾಗಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ರವಿಶಂಕರ್. ಈತನು ತನ್ನ ತಂದೆಯ ನಂತರ ರಾಜಕೀಯದಲ್ಲಿ ಪಳಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಇರುತ್ತಾನೆ. ಸದಸ್ಯನಾಗಿ ಗ್ರಾಮದ ಅಭಿವೃದ್ಧಿ ಮಾಡಬೇಕಾದ ಬಚ್ಚೇಗೌಡ ಅಲಿಯಾಸ್ ರವಿಶಂಕರ್ ಅಲ್ಲಿನ ಜನರನ್ನು ಜೀತದಾಳುಗಿಂತ ಕೀಳು ಮಟ್ಟದಲ್ಲಿ ಕಾಣುತ್ತಾನೆ. ಊರಿನ ಎಲ್ಲಾ ಜನರು ಬಚ್ಚೇಗೌಡನಿಗೆ ಹೆದರಿದರೆ ಸಿದ್ದೇಗೌಡ ಮಾತ್ರ ಹೆದರದೆ ಮಂಡ್ಯದ ಗಂಡು ನಾನು ಎಂದು ತನ್ನ ಪುಷ್ಠಿಯ ಮೈಕಟ್ಟನ್ನು ತೋರುತ್ತಾನೆ.

        ಚಿಕ್ಕಂದಿನಿಂದಲೂ ಪಂಚಾಯತಿ ಸದಸ್ಯನಾಗಬೇಕೆಂಬ  ಆಸೆಯಿಟ್ಟುಕೊಂಡಸಿದ್ದೇಗೌಡರಿಗೆ ತನ್ನ ತಾಯಿ ಮದುವೆ ಮಾಡಬೇಕು ಎಂಬ ವಿಚಾರವನ್ನು ಮುಂದಿಡುತ್ತಾಳೆ. ಆದರೆ ಸಿದ್ದೇಗೌಡನಿಗೆ ಯಾವುದೇ ಕೆಲಸ ಇರುವುದಿಲ್ಲ. ಯಾವುದೇ ಆಸ್ತಿ ಪಾಸ್ತಿ ಇರುವುದಿಲ್ಲ. ಸಾಕಷ್ಟು ಕಡೆ ಹೆಣ್ಣು ನೋಡಲು ಹೋದರು ಯಾರು ಇವನನ್ನು ಒಪ್ಪುವುದಿಲ್ಲ. ಕೊನೆಯೆ ಪಕ್ಷದಲ್ಲಿ  ಅನಾಥಾಶ್ರಮದ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಮದುವೆ ದಲ್ಲಾಳಿಯಾದ ಶಾಮಣ್ಣ ಹೇಳುತ್ತಾನೆ. ಮಂಡ್ಯಕ್ಕೆ ಹೋಗಿ ಆ ಹುಡುಗಿಯನ್ನು ನೋಡುವ ಬದಲಾಗಿ ಶಾಮಣ್ಣರ ಮಗಳಾದ ನಂದಿನಿ ಅಲಿಯಾಸ್ ರಚಿತಾರಾಂರನ್ನು ನೋಡಿ ಮನಸೋಲುತ್ತಾನೆ. ಆದರೆ ಈತನಿಗೆ ನಂದಿನಿ ಬಗ್ಗೆ ಗೊತ್ತಿರುವುದಿಲ್ಲ. ಕೊನೆಗೆ ಶಾಮಣ್ಣರ ಸಲಹೆಗಳನ್ನು ಪಡೆದುಕೊಂಡು ನಂದಿನಿಯನ್ನು ಪ್ರೀತಿ ಮಾಡುವಂತೆ ಮಾಡಿಕೊಳ್ಳುತ್ತಾನೆ. ಚಿತ್ರದ  ಎರಡನೇ ಭಾಗದಲ್ಲಿ ರಚಿತಾರಾಂ ಗೆ ಮದುವೆ ಮಾಡಲು ಹೊರಟಾಗಿ ರಚಿತಾರಾಂ ಸತೀಶ್ ನ್ನು ಪ್ರೀತಿ ಮಾಡಿದ್ದು ಗೊತ್ತಾಗುತ್ತೆ. ಆದರೆ ಈ ಮದುವೆಗೆ  ಒಪ್ಪದ ಶಾಮಣ್ಣರಿಗೆ ಅಲ್ಲಿಯ ಜನರು ಹೇಳುವ ಮಾತುಗಳಿಗೆ ಮಾರು ಹೋಗಿ ಮದುವೆ ಮಾಡಿಸುತ್ತಾನೆ.

      ಮದುವೆಗೆ ಮುಂಚಿತವಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ಮಾಡಿಕೊಂಡ ಸಿದ್ದೇಗೌಡನ ನಾಮ ಪತ್ರ ಸಲ್ಲಿಸದಂತೆ ಬಚ್ಚೇಗೌಡ ತಡೆಯಲು ಪ್ರಯತ್ನಿಸುತ್ತಾನೆ. ಅದನ್ನು ಮೀರಿ ನಾಮಪತ್ರ ಸಲ್ಲಿಸಿ ಕೊನೆಗೆ ಹಲವು ಗಿಮಿಕ್ ಗಳನ್ನು ಮಾಡುವ ಮೂಲಕ ಮತದಾನವು ಸುಗಮವಾಗಿ ನಡೆಯುವಂತೆ ಮಾಡುತ್ತಾನೆ. ಕೊನೆಯದಾಗಿ ಸಿದ್ದೇಗೌಡನೇ ಪಂಚಾಯಿತಿ ಸದಸ್ಯನಾಗಿ ಗೆಲುವು ಸಾಧಿಸುತ್ತಾನೆ.

         ಇದರಲ್ಲಿ ಎಲ್ಲವೂ ಓಕೆ ಅನಿಸಿದರೂ ಕ್ಲೈಮಾಕ್ಸ್ ಅಲ್ಲಿ ಇನ್ನೂ ಬೇಕಾದೀತು ಅನಿಸುತ್ತದೆ. ಚಿತ್ರ ನೋಡಲು ಬರುವ ಜನರು ಕಾಮಿಡಿ ಮಾತ್ರ ಚೆನ್ನಾಗಿದೆ.  ಹಾಡೊಂದು ಚೆನ್ನಾಗಿದೆ. ಆದರೆ ಕ್ಲೈಮಾಕ್ಸ್ ನಲ್ಲಿ ಇಂಟ್ರೆಸ್ಟಿಂಗ್ ಎಂದು ಏನೂ ಅನಿಸುವುದಿಲ್ಲ. ಸಾಮಾನ್ಯವಾಗಿ ಕ್ಲೈಮಾಕ್ಸ್ ಮುಗಿದುಹೋಗುತ್ತದೆ. ಇದರಿಂದ ಚಿತ್ರ  ಆರಂಭದಿಂದ  ಬಂದ ಕ್ಯೂರಿಯಾಸಿಟಿ ಕಳೆದುಹೋಗುತ್ತದೆ.

      ಅಯೋಗ್ಯ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದು,  ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಉತ್ತಮವಾಗಿದೆ ಎಂದು ಹೇಳಬಹುದು. ಸಂಭಾಷಣೆಯನ್ನು  ಮಂಜು ಮಾಸ್ತಿ, ಶರತ್ ಚಕ್ರವರ್ತಿ ನೀಡಿದ್ದಾರೆ.  ಈ ಚಿತ್ರದಲಲ್ಲಿ ಪ್ರಮುಖರಾಗಿ ಸತೀಶ್ ನೀನಾಸಂ, ರಚಿತಾ ರಾಮ್, ಶಿವರಾಜ್ .ಕೆ .ಆರ್ .ಪೇಟೆ, ಸುಂದರ್ ರಾಜ್, ತಬಲ ನಾಣಿ, ಕುರಿ ಪ್ರತಾಪ್, ಸಾಧು ಕೋಕಿಲ ಮತ್ತು ಇತರರು  ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಸಂಕಲನದಲ್ಲಿ ಇನ್ನಷ್ಟು ಎಫೆಕ್ಟಿವ್ ಆಗಿ ಮಾಡಬೇಕಿತ್ತು ಎಂಬುದು ಹಲವರ ಮಾತಾಗಿದೆ.

Recent Articles

spot_img

Related Stories

Share via
Copy link
Powered by Social Snap