ಮಣ್ಣಿನ ಫಲವತ್ತತೆಗಾಗಿ ಹಸಿರೆಲೆ ಗೊಬ್ಬರ ಬಳಸಿ

ದಾವಣಗೆರೆ:

     ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತರು ಹಸಿರೆಲೆ ಗೊಬ್ಬರ ಬಳಸಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ರೇವಣಸಿದ್ದನಗೌಡ್ರು ರೈತರಿಗೆ ಕರೆ ನೀಡಿದರು.

     ತಾಲೂಕಿನ ಎಲೆ ಬೇತೂರು ಗ್ರಾಮದದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಣ್ಣಿನ ಆರೋಗ್ಯ ಕಾರ್ಡು ಮತ್ತು ಕಬ್ಬು ಬೆಳೆಯಲ್ಲಿ ಉಚಿತ ದ್ವಿದಳ ಧಾನ್ಯ ಬೆಳೆಯಲು ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಮಣ್ಣು ಆರೋಗ್ಯ ಅಭಿಯಾನದಡಿಯಲ್ಲಿ ರೈತರು ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಬೇಕಾದರೆ, ರಾಸಾಯನಿಕ ಗೊಬ್ಬರ ಕಡಿಮೆ ಬಳಸಬೇಕು. ಮಣ್ಣಿನ ಫಲವತ್ತತೆ ಕಾಯದುಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳು ಹಸಿರೆಲೆ ಗೊಬ್ಬರಗಳಾದ ಡೈಂಪಾ, ಸೆಣಬು ಹಾಗೂ ಲಘು ಪೋಷಕಾಂಶಗಳನ್ನು ಬಳಸಬೇಕು. ಇವುಗಳಿಂದ ಉತ್ತಮ ಇಳುವರಿ ತಗೆಯಲು ಸಾದ್ಯವಾಗಲಿದೆ. ಮುಂದಿನ ದಿನಗಳಲ್ಲಿ ಮಣ್ಣಿನ ಕಾರ್ಡ್ ಇರುವವರಿಗೆ ಮಾತ್ರ ಗೊಬ್ಬರ ಸಿಗಲಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ಮಣ್ಣಿ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

       ಕಬ್ಬಿನಲ್ಲಿ ಮಿಶ್ರ ಬೆಳೆಯಾಗಿ ದ್ವಿದಳ ಧಾನ್ಯಗಳಾದ ಅಲಸಂದಿ ಬೆಳೆದರೆ ರೈತರಿಗೆ ಇಲಾಖೆಯಿಂದ ಉಚಿತವಾಗಿ ಅಲಸಂದಿ ಬಿತ್ತನೆ ಬೀಜ, ಸಾವಯವ ಗೊಬ್ಬರ, ಲಘು ಪೋಷಕಾಂಶಗಳನ್ನು ವಿತರಿಸಲಾಗುವುದು ಎಂದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಮಾಜಿ ಸದಸ್ಯ ಬಿ.ಕರಿಬಸಪ್ಪ ವಹಿಸಿದ್ದರು. ತಾ.ಪಂ. ಸದಸ್ಯ ಬಿ.ಸಂಗಜ್ಜನಗೌಡ ಕಾರ್ಯಕ್ರಮ ಉದ್ಘಾಟಿಸಿದರು.

        ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಠದ ಬಸವರಾಜಯ್ಯ, ಸೋಸೈಟಿ ಅಧ್ಯಕ್ಷ ಹೆಚ್.ಎಸ್.ಚೇತನಕುಮಾರ್, ಹಳಳಿಕೇರಿ ಬಸಪ್ಪ, ಅಂಚಿನ ಮನೆ ಮಲ್ಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಸಹಾಯಕ ದುರುಗಪ್ಪ ಸ್ವಾಗತಿಸಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap