ಮಹಾತ್ಮರ ಗುಣಗಳನ್ನು ನಮ್ಮ ಯುವಕರು ಅಳವಡಿಸುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕಿದೆ

ಬರಗೂರು :

              ನಮ್ಮ ದೇಶಕ್ಕಾಗಿ ತ್ಯಾಗ ಬಲಿದಾನದಿಂದ ಹೋರಾಟ ಮಾಡಿದ ಮಹಾತ್ಮರ ಗುಣಗಳನ್ನು ನಮ್ಮ ಯುವಕರು ಅಳವಡಿಸುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಬರಗೂರು ಸರ್ಕಾರಿ ಆಸ್ಪತ್ರೆಯ ಡಾ.ನಂದೀಶ್ ತಿಳಿಸಿದರು,
ಅವರು ಸಿರಾ ತಾಲ್ಲೂಕು ಬರಗೂರು ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿ ಏರ್ಪಡಿಸಿದ್ದ 72ನೇ ಸ್ವಾತಂತ್ರ್ಯ ದಿನಚಾರಣೆಯಲ್ಲಿ ದ್ವಜಾರೋಹರಣ ನೇರವೇರಿಸಿ ಮಾತನಾಡುತ್ತಾ ತಿಳಿಸಿದರು

              ದೇಶದ ಉಳಿವಿಗಾಗಿ ಇಂದಿನ ಯುವಕರು ಜಾಗೃತರಾಗಿ ದೇಶದ ರಕ್ಷಣೆ ಮಾಡಬೇಕಿದೆ ನಮ್ಮ ದೇಶಾಭಿಮಾನದ ಜೋತೆಗೆ ನಮ್ಮ ಭಾಷೆಯ ಬಗ್ಗೆ ಹೆಚ್ಚಿನ ಗೌರವ ಅಭಿಮಾನ ನೀಡಬೇಕಿದೆ ಇಂತಹ ವಾತವರಣ ಪ್ರತಿಯೋಬ್ಬರಲ್ಲೂ ಬೆಳೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬರಗೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಪಿಡಿಓ ವನಿತಾ, ಗ್ರಾಪಂ ಸದಸ್ಯರು, ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ರಕ್ಷಣ ವೇದಿಕೆಯ ಅದ್ಯಕ್ಷ ಲತೀಫ್, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಕೆ.ಎನ್. ರಮೇಶ್, ಮಾನವ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ರಾಜ್ಯ ಕಾರ್ಯದರ್ಶಿ ಬರಗೂರು ಬಾಲಕೃಷ್ಣ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಲತಾ, ಸಿದ್ದಗಂಗಮ್ಮ,ಹರೀಶ್, ಕಿರಿಯ ಪುರುಷ ಆರೋಗ್ಯ ಸಹಾಯಕ ಮನುಕಿರಣ್, ನರ್ಸಗಳಾದ ಮಂಜುಳ, ಜ್ಯೋತಿ, ಶಶಿಕಲಾ, ರಕ್ತ ಪರೀಕ್ಷರಾದ ವಿಜಯಲಕ್ಷ್ಮೀ, ಡಿ ದರ್ಜೆ ನೌಕರ ರಂಗನಾಥ, ಪ್ರಕಾಶ್,ಲಲಿತಮ್ಮ,ಪ್ರೇಮಾ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಕಾರ್ಯಕರ್ತ ಬಿಸಿ ಬಸವರಾಜು,ಆಶಾ ಕಾರ್ಯಕರ್ತೆಯರು ಇತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap