ಮಾಹೆರ್ ಮನ್ಸೂರ್ ರವರಿಗೆ ಸಿದ್ದಗಂಗ ಶ್ರೀಗಳಿಂದ ಸನ್ಮಾನ.

ತುಮಕೂರು:-

                ಹನ್ನೆರಡನೆ ಶತಮಾನದ ಸಮಾಜ ಸುಧಾರಕರಾದ ಬಸವಣ್ಣ ನವರು ರಚಿಸಿರುವ ಎಲ್ಲಾ ವಚನಗಳು ಸನ್ಮಾರ್ಗ ತೋರಿಸುವಂತಹ ಸಾರ್ವಾಕಾಲಿಕ ವಿಶ್ವ ಸಂದೇಶವಾಗಿದೆ . ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆಧ್ಯತೆ ನೀಡಿರುವ ಬಸವಣ್ಣ ನವರ ಎಲ್ಲಾ ವಚನಗಳ ಅನುಷ್ಟಾನದಿಂದ ವಿಶ್ವದಲ್ಲಿಯೇ ಶಾಂತಿ, ಸಮಾನತೆ ಮತ್ತು ಸೌಹಾರ್ದತೆ ಯನ್ನು ಬೆಳಿಸಬಹುದಾಗಿದೆ ಎಂದು ನಿವೃತ್ತ ಸೂಪರ್ ಇಂಟೆಂಡಟ್ ಆಪ್ ಪೋಸ್ಟ್ ಆಪಿಸ್, ಪ್ರಖ್ಯಾತ ಉರ್ದು ಕವಿ, ಬಸವಶ್ರೀಪ್ರಶಸ್ತಿ ಮತ್ತು ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಮಾಹೆರ್ ಮನ್ಸೂರ್ ರವರು ನುಡಿದರು.

                ಅವರು ಉರ್ದು ಭಾಷೆಗೆ ಬಸವಣ್ಣ ನವರ 2500 ವಚನಗಳನ್ನು ಅನುವಾದ ಮಾಡಿ ಪುಸ್ತಕದರೂಪದಲ್ಲಿ ಪ್ರಕಟಿಸಿರುವ ಒಂದು ಪ್ರತಿಯನ್ನು ಒಂದು ನಿಯೋಗ ದೂಂದಿಗೆ ಸಿದ್ದಗಂಗಮಠದ ಡಾ|| ಶಿವಕುಮಾರ ಸ್ವಾಮಿಜಿ ರವರಿಗೆ ಅರ್ಪಿಸಿದರು ಶ್ರೀಗಳು ಈ ಪುಸ್ತಕವನ್ನು ಅತ್ಯಂತ ಸಂತೋಷ ಉಲ್ಲಾಸದಿಂದ ಸ್ವಿಕರಿಸಿದರು ಮತ್ತು ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ತದನಂತರ ನಿಯೋಗವು ಶ್ರೀ ಸಿದ್ದಲಿಂಗ ಸ್ವಾಮಿಜಿರವರಿಗೂ ಭೇಟಿ ಮಾಡಿ ಒಂದು ಪ್ರತಿಯನ್ನು ಅರ್ಪಿಸಿತು ಸ್ವಾಮಿಜಿರವರು ಮುಷ್ತಾಕ್ ಅಹಮದ್ ರವರಿಗೆ ಶ್ರೀ ಮಠಕ್ಕೆ ಆಗಮಿಸಿ ಉರ್ದು ಭಾಷೆಯಲ್ಲಿರುವ ವಚನಗಳನ್ನು ವಿವರಿಸುವಂತೆ ತಿಳಿಸಿದರು. ಈ ನಿಯೋಗದಲ್ಲಿ ಸೆಂಟ್ರೆಲ್ ಮುಸ್ಲೀಂ ಅಸೋಸಿಯೇಷನ್ ಆಫ್ ಕರ್ನಾಟಕ ತುಮಕೂರು ಜಿಲ್ಲಾಧ್ಯಕ್ಷ ಮುಷ್ತಾಕ್ ಅಹಮದ್, ಸಾಗರನಹಳ್ಳಿ ಪ್ರಭು, ನಿವೃತ ಅರಣ್ಯಾಧಿಕಾರಿ ಕಲ್ಲೀಮುಲ್ಲಾಖಾನ್,ಸಲಾವುದ್ದೀನ್,ಸಾಹಿತಿ ಮುನೀರ್ ಅಹಮದ್‍ರವರಿದ್ದರು ಆಡಳಿತಾಧಿಕಾರಿಗಳಾದ ಶ್ರೀ ವಿಶ್ವನಾಥಯ್ಯ ನವರು ಮಠದಪರವಾಗಿ ನಿಯೋಗವನ್ನು ಸಂತೋಷದಿಂದ ಸ್ವಾಗತಿಸಿ, ಆಧರಿಸಿ, ಗೌರವಿಸಿ, ಸತ್ಕರಿಸುವುದು ಮಟದ ಜಾತ್ಯತೀತ ಪರಂಪರೆಗೆ ಸಾಕ್ಷಿಯಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap