ಮುಕ್ತ ಮತದಾನ ಎಲ್ಲಾ ನಾಗರೀಕರ ಆಧ್ಯ ಕರ್ತವ್ಯವಾಗಿದೆ : ಶ್ರೀಧರ ಐ ಬಾರೀಕೇರ್.

ಮೊಳಕಾಲ್ಮುರು

        ಪ್ರತಿ ನಾಗರೀಕರು ಯಾವುದೇ ರಾಜಕೀಯ ಶಕ್ತಿಗಳಿಗೆ ಆಸ್ಪದ ಕೊಡದೆ ತಮ್ಮ ಹಕ್ಕನ್ನು ಚಲಾಯಿಸಿ ಭಾರತದೇಶದ ಪ್ರಜಾಪ್ರಭುತ್ವ ಸಂವಿಧಾನ ಬದ್ದ ಹಕ್ಕು ಮತ್ತು ಕರ್ತವ್ಯಗಳನ್ನು ಉಳಿಸಿ ರಕ್ಷಿಸಿ ಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ತಾಲ್ಲೂಕಿನ ಕಾರ್ಯನಿರ್ವಾಹಣಾದಿಕಾರಿ ಡಾ ಶ್ರೀಧರ್ ಐ ಬಾರೀಕೇರ್ ತಿಳಿಸಿದರು.

        ಪಟ್ಟಣದ ತಾಲ್ಲೂಕು ಪಂಚಾಯಿತಿ ಕವೇರಿ ಆವರಣದಲ್ಲಿ ಸ್ವೀಪ್ ಕಮಿಟಿ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಮುಕ್ತ ಮತದಾನಕ್ಕೆ ಅವಕಾಶವಿದ್ದು, ಯಾವುದೇ ರಾಜಕೀಯ ಶಕ್ತಿಗಳಿಗೆ ಅವಕಾಶ ಕೊಡದೆ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ಚಲಾಯಿಸಬೇಕಾಗಿದೆ.

        ತಾಲ್ಲೂಕಿನಲ್ಲಿ ಲೋಕಸಭೆ ಚುನಾವಣೆಯನ್ನು ವ್ಯವಸ್ಥಿತವಾಗಿ ನೆರವೇರಿಸಲು ದಿನಾಂಕ 15 3 19ರಿಂದ 15 4 19ರವರೆಗೆ ವಿವಿದ ಹಂತದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಲನ್ನು ಆಯೋಜಿಸಿದ್ದೇವೆ. 2019ನೇ ಲೋಕಸಭಾಚುನಾವಣೆಯಲ್ಲಿ ಶೇಖಡವಾರು ಹೆಚ್ಚಿಸಲು ಮತ್ತು ನಾಗರೀಕರು ತಮ್ಮ ಹಕ್ಕು ಚಲಾಯಿಸಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದರ ಉಪಯೋಗ ಪ್ರತಿ ನಾಗರೀಕರಿಗೆ ತಲುಪಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು

          ಸಂದರ್ಭದಲ್ಲಿ ತಾಲ್ಲೂಕ ದಂಡಾದಿಕಾರಿ ಎಸ.ಅನಿತಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅದಿಕಾರಿ ಹೊನ್ನಪ್ಪ, ಜೂನೀಯರ್ ಕಾಲೇಜ್ ಮುಖ್ಯ ಶಿಕ್ಷಕರು ಸುರೇಂದ್ರನಾಥ್, ಪ.ಪಂ. ಮುಖ್ಯಾಧಿಕಾರಿ ರುಕ್ಮಿಣಿಶಂಕರ್, ವಸತಿ ನೂಡಲ್ ಅದಿಕಾರಿ ಶಿವಕುಮಾರ್, ವಿವಿದ ಗ್ರಾ.ಪಂ. ಅದಿಕಾರಿಗಳಾದ ಬಾಂಡ್ರಾವಪ್ಪ, ಗುಂಡಪ್ಪ, ಹನುಮಂತಪ್ಪ, ಹೊನ್ನುರಪ್ಪ, ಯಶ್ವಂತ್ ಕುಮಾರಸ್ವಾಮಿ ಹಾಗೂ ಆಶಾ ಕಾರ್ಯಕರ್ತೆಯರು ಇನ್ನಿತರರು ಭಾಗವಹಿಸಿದ್ದರು.ಸಂದರ್ಭದಲ್ಲಿ ತಾಲ್ಲೂಕ ದಂಡಾದಿಕಾರಿ ಎಸ.ಅನಿತಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅದಿಕಾರಿ ಹೊನ್ನಪ್ಪ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap