ಮೊಡವೆಯ ಸಮಸ್ಯೆ-ನಿವಾರಣೆಗೆ ಬರೀ ಒಂದೇ-ಒಂದು ಚಮಚ ಹರಳೆಣ್ಣೆ ಸಾಕು!

      ಮುಖದ ಮೇಲೆ ಬಿಟ್ಟುಬಿಡದೆ ಮೂಡುವಂತಹ ಮೊಡವೆಗಳಿಂದ ಸೌಂದರ್ಯವೇ ಕೆಟ್ಟು ಹೋಗುವುದು. ಇದರ ನಿವಾರಣೆ ಮಾಡಲು  ಹಲವಾರು ರೀತಿಯ ಚಿಕಿತ್ಸೆ ನೀವು ಮಾಡಿರಬಹುದು. ಒಂದು ಮೊಡವೆ ನಿವಾರಣೆ ಮಾಡಿದ ಕೆಲವೇ ದಿನಗಳಲ್ಲಿ ಮತ್ತೊಂದು ಮುಖದ ಮೇಲೆ ಪ್ರತ್ಯಕ್ಷವಾಗುವುದು. ಇದು ತುಂಬಾ ಕಿರಿಕಿರಿ ಉಂಟು ಮಾಡುವುದು. ಬೇರೆಲ್ಲದರಂತೆ ಇದಕ್ಕೆ ಕೂಡ ಪರಿಹಾರವಿದೆ.

Related image

      ಚರ್ಮದ ಕೆಲವೊಂದು ಸಮಸ್ಯೆಯಾಗಿರುವಂತಹ ಮೊಡವೆ, ಬೊಕ್ಕೆ, ಗೆರೆಗಳು ಮತ್ತು ನೆರಿಗೆಗೆ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಹೆಚ್ಚಾಗಿ ಮಹಿಳೆಯರು ಮನೆಮದ್ದನ್ನು ಬಳಸಿಕೊಳ್ಳುವುದರಿಂದ ಇದು ಅಗ್ಗ ಹಾಗೂ ತುಂಬಾ ಸುರಕ್ಷಿತವಾಗಿದೆ. ಹರಳೆಣ್ಣೆ ಬಳಸಿಕೊಂಡು ಮೊಡವೆ ನಿವಾರಣೆ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ..

      ಹರಳೆಣ್ಣೆಯನ್ನು ನೀವು ಕೂದಲಿಗೆ ಬಳಸಿಕೊಂಡಿರಬಹುದು. ಆದರೆ ಮೊಡವೆ ನಿವಾರಣೆಗೆ ಇದನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂದು ತಿಳಿಯಿರಿ. ಇದನ್ನು ಮೊದಲು ಮೊಡವೆ ಅಂದರೆ ಏನು ಎಂದು ಅರ್ಥ ಮಾಡಿಕೊಳ್ಳಿ.

ಮೊಡವೆ ಮೂಡಲು ಕಾರಣವೇನು?

Related image

      ಮೊಡವೆಗಳು ಹಲವಾರು ಕಾರಣಗಳಿಂದ ಮೂಡಬಹುದು. ಕೆಲವೊಂದು ಸಾಮಾನ್ಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಚರ್ಮದ ಸತ್ತ ಕೋಶಗಳು ಮೊಡವೆ ಹಾಗೂ ಬೊಕ್ಕೆಗಳಿಗೆ ಇದು ತುಂಬಾ ಸಾಮಾನ್ಯ ಕಾರಣವಾಗಿದೆ. ಇದನ್ನು ಹೋಗಲಾಡಿಸಲು ಚರ್ಮವನ್ನು ಯಾವಾಗಲೂ ತೇವಾಂಶ, ಮೊಶ್ಚಿರೈಸರ್ ಮತ್ತು ಸತ್ತ ಚರ್ಮದ ಕೋಶಗಳನ್ನು ಕಿತ್ತುಹಾಕುವ ಕೆಲಸ ಮಾಡಬೇಕು. ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಲು ಅರಶಿನದ ಫೇಸ್ ಸ್ಕ್ರಬ್ ಬಳಸಿ. ಚರ್ಮವನ್ನು ತುಂಬಾ ಆರೋಗ್ಯಕಾರಿ ಮತ್ತು ತಾಜಾವಾಗಿಡುವುದು. ಅರಿಶಿನ ಕೂಡ ಮೊಡವೆ ನಿವಾರಣೆಗೆ ಸಹಕಾರಿ.

      ಧೂಳು, ಕೊಳೆ ಮತ್ತು ಕಲುಷಿತ ವಾತಾವರಣ ನಮ್ಮ ಚರ್ಮವು ಯಾವಾಗಲೂ ಧೂಳು, ಕೊಳೆ ಮತ್ತು ಕಲುಷಿತ ವಾತಾವರಣಕ್ಕೆ ಒಡ್ಡಲ್ಪಡುವ ಕಾರಣದಿಂದಾಗಿ ಮೊಡವೆಗಳು ಮೂಡುವುದು. ಆದರೆ ಇದಕ್ಕೆ ಪರಿಹಾರವಿದೆ. ಯಾವಾಗಲೂ ಚರ್ಮವನ್ನು ತೇವಾಂಶದಿಂದ ಇಡಿ ಮತ್ತು ಸಮಯ ಸಿಕ್ಕಿದಾಗ ಮುಖ ತೊಳೆಯಿರಿ. ಧೂಳು ಮತ್ತು ಕಲ್ಮಷವನ್ನು ಹೋಗಲಾಡಿಸಿದರೆ ಆಗ ಮುಚ್ಚಿರುವ ಚರ್ಮದ ರಂಧ್ರವು ತೆರೆದುಕೊಳ್ಳುವುದು. ಚರ್ಮದಲ್ಲಿ ಅತಿಯಾದ ಎಣ್ಣೆ ಉತ್ಪತ್ತಿ ಎಣ್ಣೆಯಂಶವಿರುವಂತಹ ಚರ್ಮವು ಹಲವಾರು ರೀತಿಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಲ್ಲಿ ಮೊಡವೆ ಹಾಗೂ ಬೊಕ್ಕೆಗಳು ಪ್ರಮುಖವಾಗಿದೆ. ಇದರಿಂದ ಮುಖವನ್ನು ಎಣ್ಣೆಯಂಶದಿಂದ ದೂರವಿಡುವುದು ಅತೀ ಅಗತ್ಯ. ನಿಮ್ಮ ಚರ್ಮವು ಎಣ್ಣೆಯಂಶದಿಂದ ಕೂಡಿದ್ದರೆ, ಚರ್ಮಕ್ಕೆ ಸೂಕ್ಷ್ಮವಾಗಿರುವ ಎಣ್ಣೆಯಂಶವಿಲ್ಲದೆ ಇರುವಂತಹ ಫೇಶ್ ವಾಶ್ ಬಳಸಿ.

ಮೊಡವೆಗೆ ಹರಳೆಣ್ಣೆ ಬಳಸುವುದು ಹೇಗೆ?

Related image

      ಹರಳೆಣ್ಣೆಯಿಂದ ಹಲವಾರು ರೀತಿಯ ಲಾಭಗಳು ಇವೆ. ಇದರಲ್ಲಿ ಪ್ರಮುಖವಾಗಿ ಮೊಡವೆ ನಿವಾರಣೆ ಮಾಡುವುದು. ಹರಳೆಣ್ಣೆಯು ಚರ್ಮದಲ್ಲಿರುವ ಕಲ್ಮಷ, ಬ್ಯಾಕ್ಟೀರಿಯಾ, ಸತ್ತ ಚರ್ಮದ ಕೋಶ ಮತ್ತು ಅತಿಯಾದ ಎಣ್ಣೆಯಂಶವನ್ನು ನಿವಾರಣೆ ಮಾಡುವುದು. ಇದರಿಂದ ಚರ್ಮದ ರಂಧ್ರವು ಮುಚ್ಚುವುದನ್ನು ತಡೆಯಬಹುದು. ಹರಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಫಂಗಲ್ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಮೊಡವೆ ಮೂಡುವುದನ್ನು ಇದು ತಡೆಯುವುದು. ಚರ್ಮದಲ್ಲಿ ಮೊಡವೆ ಮೂಡಲು ಅತಿಯಾದ ಎಣ್ಣೆಯಂಶವೇ ಪ್ರಮುಖ ಕಾರಣವಾಗಿದೆ. ಹರಳೆಣ್ಣೆ ಬಳಸುವುದರಿಂದ ಮುಚ್ಚಿರುವಂತಹ ರಂಧ್ರಗಳನ್ನು ತೆರೆಯಲು ನೆರವಾಗುವುದು. ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡಲು ನೆರವಾಗುವುದು. ಬ್ಯಾಕ್ಟೀರಿಯಾದಿಂದ ಉಂಟಾಗುವಂತಹ ಮೊಡವೆ ನಿವಾರಣೆ ಮಾಡುವ ರಿಕಿನೋಲಿಕ್ ಆಮ್ಲವು ಹರಳೆಣ್ಣೆಯಲ್ಲಿದೆ. 

ಬೇಕಾಗುವ ಸಾಮಗ್ರಿಗಳು :

      1 ಚಮಚ ಹರಳೆಣ್ಣೆ 1 ಚಮಚ ಆಲಿವ್ ತೈಲ

ತಯಾರಿಸುವ ವಿಧಾನ: 

•ಕೆಲವು ನಿಮಿಷ ಕಾಲ ಮುಖಕ್ಕೆ ಹಬೆಯನ್ನಿಡಿ. ಇದರ ಬಳಿಕ ಪಾತ್ರೆ ಬದಿಗಿಟ್ಟುಕೊಳ್ಳಿ.

•ಈಗ ಹರಳೆಣ್ಣೆ ಮತ್ತು ಆಲಿವ್ ತೈಲ ಮಿಶ್ರಣ ಮಾಡಿ.

•ಇದನ್ನು ತೆಗೆದುಕೊಂಡು ಬೆರಳುಗಳ ನೆರವಿನಿಂದ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. •ರಾತ್ರಿ ಮಲಗುವ ಮೊದಲು ಹೀಗೆ ಮಾಡಿ ಹಾಗೆ ಮಲಗಿಬಿಡಬಹುದು.

•ಬೆಳಗ್ಗೆ ಎದ್ದು ಒಣ ಟಿಶ್ಯೂ ಅಥವಾ ಟವೆಕ್ ಬಳಸಿ ಮುಖ ಒರೆಸಿಕೊಳ್ಳಿ.

•ತಣ್ಣೀರಿನಿಂದ ಮುಖ ತೊಳೆದುಕೊಂಡರೆ ಆಗ ಚರ್ಮದ ರಂಧ್ರಗಳು ಬಿಗಿಯಾಗುವುದು.

ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಎರಡು ಸಲ ಬಳಸಿ.

ಇದು ಹೇಗೆ ಕೆಲಸ ಮಾಡುವುದು?
  1. ಬ್ಯಾಕ್ಟೀರಿಯಾದಿಂದ ಉಂಟಾಗುವ ಮೊಡವೆ ವಿರುದ್ಧ ಹರಳೆಣ್ಣೆ ಹೋರಾಡುವುದು ಮತ್ತು ರಂಧ್ರದಲ್ಲಿರುವ ಕಲ್ಮಶವನ್ನು ತೆಗೆದುಹಾಕುವುದು.
  2. ಇದು ಚರ್ಮಕ್ಕೆ ಮಾಯಿಶ್ಚರೈಸ್ ಮಾಡಿ ತೇವಾಂಶ ನೀಡುವುದು.
  3. ಚರ್ಮದಲ್ಲಿ ಅತಿಯಾಗಿ ಎಣ್ಣೆಯಂಶ ಉತ್ಪತ್ತಿಯಾಗದಂತೆ ತಡೆಯುವುದು.

Recent Articles

spot_img

Related Stories

Share via
Copy link
Powered by Social Snap