ರಾಣಿಬೆನ್ನೂರು:
ಸ್ಥಳೀಯ ಬಿಎಜೆಎಸ್ಎಸ್ ಮಹಿಳಾ ಕಾಲೇಜಿನ ಆವರಣದಲ್ಲಿ 2018-19ನೇ ಸಾಲಿನ ವಿದ್ಯಾರ್ಥಿನಿ ಒಕ್ಕೂಟ, ಎನ್ಎಸ್ಎಸ್, ಯುವ ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಸೆ.1 ರಂದು ಬೆ.11 ಗಂಟೆಗೆ ನಡೆಯಲಿದೆ.
ಮಾಜಿ ಸಚಿವ ಹಾಗು ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸುವರು. ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ, ಲೇಖಕಿ ವಾಸಂತಿ ನಾಯ್ಕ, ಜಿಲ್ಲಾ ಏಡ್ಸ್ ನಿಯಂತ್ರಣ ಕೇಂದ್ರದ ಸಹಾಯಕ ವಿರಾಜಪ್ಪ ಸುಣಗಾರ, ಪ್ರಾಚಾರ್ಯ ಎಸ್.ಎ.ತಾಂಬೆ ಸೇರಿದಂತೆ ಮತ್ತಿತರರು ಆಗಮಿಸುವರೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ