ಯೂ ಟ್ಯೂಬ್‍ ಪ್ರೇರಿತ ಬೈಕ್ ಕಳ್ಳ

ಬೆಂಗಳೂರು:

              ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದು ಮೋಜಿನ ಜೀವನ ನಡೆಸಲು ಯೂ ಟ್ಯೂಬ್ ನೋಡಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಐನಾತಿ ಕಳ್ಳನನ್ನು ಬಂಧಿಸಿರುವ ಚಂದ್ರ ಲೇಔಟ್ ಪೊಲೀಸರು 20 ಲಕ್ಷ ರೂ. ಮೌಲ್ಯದ 32 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
             ಕೋರಮಂಗಲದ ರಾಜೇಂದ್ರನಗರದ ಚಂದ್ರ ಕಾಂತ್ ಅಲಿಯಾಸ್ ಗುಂಡ (23) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 20 ಲಕ್ಷ ರೂ. ಮೌಲ್ಯದ ಪಲ್ಸರ್, ಡಿಸ್ಕವರಿ ಸೇರಿದಂತೆ, 32 ದುಬಾರಿ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.
                ಆರೋಪಿಯು ಯೂ ಟ್ಯೂಬ್‍ನಲ್ಲಿ ಬೈಕ್ ಕಳವು ಮಾಡುವುದನ್ನು ನೋಡಿ ಬೀಗವನ್ನು ಡೈರೆಕ್ಟ್ ಮಾಡುತ್ತಿದ್ದುದ್ದಲ್ಲದೆ, ಕೆಲವು ಕಡೆ ನಕಲಿ ಕೀ ಗಳನ್ನು ಬಳಸಿ, ಕಳವು ಮಾಡಿ ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ.
ಪಶ್ಚಿಮ ವಿಭಾಗದ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಕೆಂಗೇರಿ, ಕಾಮಾಕ್ಷಿಪಾಳ್ಯ, ವಿಜಯನಗರ, ನಂದಿನಿ ಲೇಔಟ್‍ಗಳಲ್ಲಿ ಸುತ್ತಾಡುತ್ತಾ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿರುವ ಬೈಕ್‍ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ. ಮಂಡ್ಯದಲ್ಲೂ ಆರೋಪಿಯು ಬೈಕ್ ಕಳವು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಓದಿಗೆ ಬೈ ಕಳವಿಗೆ ಜೈ
                   ಎಸ್‍ಎಸ್‍ಎಲ್‍ಸಿವರೆಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಬೈಕ್‍ಗಳನ್ನು ಕಳವು ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದ ಗುಂಡ, ಹಿಂದೆ ಬೈಕ್ ಕಳ್ಳತನದ ಪ್ರಕರಣವೊಂದರಲ್ಲಿ ಭಾಗಿಯಾಗಿ ರಾಮನಗರ ಗ್ರಾಮಾಂತರ ಪೆÇಲೀಸರಿಗೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.
                    ಜೈಲಿನಿಂದ ಬಂದ ನಂತರವೂ ಬೈಕ್ ಕಳವು ದಂಧೆಯನ್ನು ಮುಂದುವರೆಸಿದ್ದ. ಅನ್ನಪೂರ್ಣೇಶ್ವರಿ ನಗರದ ಸುತ್ತಮುತ್ತ ಕಡೆಗಳಲ್ಲಿ ಬೈಕ್ ಕಳವು ಪ್ರಕರಣಗಳು ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ರಚಿಸಲಾಗಿದ್ದ ಚಂದ್ರ ಲೇಔಟ್ ಪೆÇಲೀಸ್ ಇನ್ಸ್‍ಪೆಕ್ಟರ್ ವೀರೇಂದ್ರ ಪ್ರಸಾದ್ ಅವರ ನೇತೃತ್ವದ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಯ ಬಂಧನದಿಂದ 32 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap