ರಾತ್ರಿ 9 ನಂತರ ಎ ಟಿ ಎಮ್ ಗಳಿಗೆ ಹಣ ಬಂದ್ ಕೇಂದ್ರದ ನಿರ್ಧಾರ

ಬೆಂಗಳೂರು :

ಭಾರತದ ಕೇಂದ್ರ ಆರ್ಥಿಕ ಇಲಾಖೆಯಿಂದ ಬಂದಿರುವ ವರದಿಯ ಅನ್ವಯ ಇನ್ನು ಮುಂದೆ ನಗರ ಪ್ರದೇಶದಲ್ಲಿ ರಾತ್ರಿ 9ರ ನಂತರ ಮತ್ತು  ಗ್ರಾಮೀಣ ಪ್ರದೇಶದಲ್ಲಿ ಸಂಜೆ 6ರ ನಂತರ ಯಾವುದೇ ಎಟಿಎಂಗೆ ಹಣ ತುಂಬಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಸಂಜೆಯ ಬಳಿಕ ಎಟಿಎಂಗೆ ಹಣ ತುಂಬಿಸದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಮುಂದಿನ ವರ್ಷ  ಫೆಬ್ರವರಿ 9ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದರ ಅನ್ವಯ ನಗರ ಪ್ರದೇಶದಲ್ಲಿ ರಾತ್ರಿ 9ರ ನಂತರ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆ ನಂತರ.

ದೇಶದಲ್ಲಿ  ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆ ನಂತರ ಎಟಿಎಂಗೆ ಹಣ ಹಾಕಲಾಗುವುದಿಲ್ಲ. ಎಟಿಎಂಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಪ್ರತಿ ದಿನ ಬೆಳಗ್ಗೆ ಬ್ಯಾಂಕ್‌ನಿಂದ ಹಣ ಪಡೆದು ನಿಗದಿ ಪಡಿಸಿದ ಸಮಯದೊಳಗೆ ಎಟಿಎಂಗಳಿಗೆ ತುಂಬಿಸಬೇಕು. ಎಟಿಎಂನಲ್ಲಿ ಹಣ ಬೇಗ ಖಾಲಿಯಾದರೆ, ರಾತ್ರಿ ಜನರು ಹಣ ಪಡೆಯುವುದು ಕಷ್ಟವಾಗಲಿದೆ. ಇದರಿಂದಾಗಿ ಜನ ಸಂಕಷ್ಟದಲ್ಲಿ ಬೀಳಲಿದ್ದಾರೆ ಎಂಬುದು ನಾಗರೀಕರ ಅಳಲು.

 

Recent Articles

spot_img

Related Stories

Share via
Copy link
Powered by Social Snap