ರಾಷ್ಟ್ರಪಿತನ 150 ನೇ ಜನ್ಮದಿನಾಚರಣೆಗೆ ಲಾಂಛನ ಬಿಡುಗಡೆ

ಹೊಸದಿಲ್ಲಿ: 

      ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮವರ್ಷಾಚರಣೆಯ ಲಾಂಛನವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಂಗಳವಾರ ಬಿಡುಗಡೆ ಮಾಡಿದ್ದಾರೆ. 

      ಮಹಾತ್ಮ ಗಾಂಧಿ ಅವರ 150ನೇ ಜನ್ಮವರ್ಷಾಚರಣೆಯ ಅಂಗವಾಗಿ ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

      ಸ್ವಚ್ಛತೆ ನಿಟ್ಟಿನಲ್ಲಿ ಹೆಚ್ಚಿನ ಸಾರ್ವಜನಿಕರನ್ನು ಪ್ರೇರೇಪಿಸಲು  ಸೆಪ್ಟೆಂಬರ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛತೆಯೇ ಸೇವೆ’ ಎಂಬ ಸ್ವಚ್ಛತಾ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದು ಅಕ್ಟೋಬರ್‌ 2ರವರೆಗೆ ಮುಂದುವರಿಯಲಿದೆ.

      ಈ ವರ್ಷ ಸ್ವಚ್ಛ ಭಾರತ ಯೋಜನೆಯ ನಾಲ್ಕನೇ ವರ್ಷಾಚರಣೆ ಸಹ ಆಗಿದೆ. ‘ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡು, ಈ ಅಭಿಯಾನದ ಅವಧಿಯಲ್ಲಿ ಕನಿಷ್ಠ ಆರು ಗಂಟೆಗಳ ಶ್ರಮದಾನದಲ್ಲಿ ತೊಡಗುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap