ಲಿಂಗಾಯತ ಪತ್ಯೇಕ ಧರ್ಮ ವಿಚಾರ;ಡಿ.ಕೆ.ಶಿವಕುಮಾರ್ ನಡೆಗೆ ಬಸವ ದಳ ಆಕ್ರೋಶ

ಚಿತ್ರದುರ್ಗ

       ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಈ ಹೋರಾಟಕ್ಕೂ ಮತ್ತು ರಾಜಕಾರಣಕ್ಕೂ ಸಂಬಂಧವಿಲ್ಲ. ತನ್ನದಲ್ಲದ ವಿಷಯದಲ್ಲಿ ಅನವಶ್ಯಕವಾಗಿ ಡಿ.ಕೆ.ಶಿವಕುಮಾರ್ ತಲೆ ಹಾಕುವುದು, ಮೂಗು ತೂರಿಸುವುದು ಸರಿಯಲ್ಲ ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಶರಣ ಮನೋಹರ್ ತಿಳಿಸಿದ್ದಾರೆ.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಇಂದು ನಿನ್ನೆಯದಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಈ ಹೋರಾಟಕ್ಕೂ ಮತ್ತು ರಾಜಕಾರಣಕ್ಕೂ ಸಂಬಂಧವಿಲ್ಲ. ಆದರೆ ಈಚೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಅನಾವಶ್ಯಕವಾಗಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮಹಾ ಪ್ರಮಾದವನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು, ಅದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು

       ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಲಿಂಗಾಯತ ಧರ್ಮದ ಅಸ್ಮಿತೆಗಾಗಿ ನಡೆದ ಹೋರಾಟ. ಈ ವಿಷಯದಲ್ಲಿ ನಮ್ಮ ಸಮಾಜದ ನೇತಾರರು, ಮಠಾಧಿಪತಿಗಳು ಇದ್ದಾರೆ. ಅವರು ಆ ಬಗ್ಗೆ ವಿಚಾರಿಸುತ್ತಾರೆ. ಆದರೆ ಡಿ.ಕೆ.ಶಿ ಅವರು ನಮಗೆ, ನಮ್ಮ ಧರ್ಮಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದರು.

        ಡಿ.ಕೆ.ಶಿ ಅವರು ಯಾವುದೇ ರೀತಿಯಲ್ಲಿಯೂ ಲಿಂಗಾಯತ ಧರ್ಮಕ್ಕೆ ಸಂಬಂಧವಿಲ್ಲ. ಅಂದು ನಡೆದ ಜನಾಂದೋಲನಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವಸಂಪುಟದಲ್ಲಿ ತಜ್ಞರ ಸಮಿತಿ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಶ್ರೀ ಗುರು ಬಸವಣ್ಣನವರಿಂದ ಸಂಸ್ಥಾಪಿತವಾದ ಸ್ವತಂತ್ರ, ಪ್ರಗತಿಪರ ಅಹಿಂದು ಧರ್ಮವಾದ ಲಿಂಗಾಯತಕ್ಕೆ ಸಂವಿಧಾನಾತ್ಮಕ ಮನ್ನಣೆ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೋರಿದ್ದಾರೆ.

      ಲಿಂಗಾಯತ ಧರ್ಮದ ಹೋರಾಟದಿಂದ ಕಾಂಗ್ರೆಸ್ಸಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬದಲಾಗಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಬಹುದಾಗಿದ್ದ ಮತ್ತು 35 ರಿಂದ 40 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷವಾಗಿ ಕುಳಿತುಕೊಳ್ಳಬಹುದಾಗಿದ್ದ ಕಾಂಗ್ರೆಸ್ಸಿಗೆ ಎಲ್ಲೆಲ್ಲಿ ಹೋರಾಟ ತೀವ್ರವಾಗಿತ್ತೋ ಅಲ್ಲೆಲ್ಲಾ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಿ ಇಂದು ಕಾಂಗ್ರೆಸ್ ಪಕ್ಷವು ಸರ್ಕಾರದ ಒಂದು ಭಾಗವಾಗಿದ್ದರೆ ಇದೇ ಡಿ.ಕೆ.ಶಿ ಮತ್ತೆ ಮತ್ತೆ ಮಂತ್ರಿಯಾಗಿದ್ದರೆ ಅದಕ್ಕೆ ಕಾರಣ ಲಿಂಗಾಯತ ಧರ್ಮೀಯರ ಬೆಂಬಲ ಮತ್ತು ಹೋರಾಟವೇ ಕಾರಣ ಎಂಬುದನ್ನು ಡಿ.ಕೆ.ಶಿ ಅರ್ಥೈಸಿಕೊಳ್ಳಲಿ ಎಂದರು.

      ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಮೇಶ ಮಾತನಾಡಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರದೇಶ ಅಧ್ಯಕ್ಷರಾದ ಅಶೋಕ್ ಚೌವ್ಹಾಣ್ ಅವರು ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗೆ ಬೆಂಬಲಿಸಿ ಲಿಖಿತ ರೂಪದಲ್ಲಿ ಭರವಸೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಒಂದೂವರೆ ಕೋಟಿ ಲಿಂಗಾಯತ ಅನುಯಾಯಿಗಳು ಮಹಾರಾಷ್ಟ್ರದಲ್ಲಿದ್ದಾರೆ. ಅವರೆಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ.

    ನಾವು ಕೂಡ ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ವಾಗತಿಸುತ್ತೇವೆ ಎಂದರು. ಕರ್ನಾಟಕದಲ್ಲಿಯೂ ಕೂಡ ಲಿಂಗಾಯತ ಧರ್ಮದ ಮಾನ್ಯತೆಗೆ ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷರು ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಈ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಪೇಜಾವರ ಶ್ರೀಗಳು ನಮ್ಮ ಧರ್ಮಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಇನ್ನು ಮುಂದೆ ನಮ್ಮ ಧರ್ಮದ ಮಾನ್ಯತೆ ವಿಷಯಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಬಾರದೆಂದು ಹೇಳಿದರು.ಲಿಂಗಾಯತ ಧರ್ಮ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ. ಶಂಕ್ರಪ್ಪ ರಾಷ್ಟ್ರೀಯ ಬಸವ ದಳದ ಯುವ ಅಧ್ಯಕ್ಷರಾದ ಶ್ರೀನಿವಾಸ್. ಆರ್., ರಾಜಣ್ಣ. ಆರ್., ಅಕ್ಕಮಹಾದೇವಿ ತಿಪ್ಪೇಸ್ವಾಮಿ ಈರಮ್ಮ ನಾಗರಾಜ, ಶರಣೆ. ವಚನಸುಧಾ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap