ವಿಶೇಷ ಪೂಜೆ

ಬ್ಯಾಡಗಿ:

            ಶ್ರಾವಣ ಮಾಸದ ಕೊನೆ ಸೋಮವಾರದಂದು ಪಟ್ಟಣದ ಬೆಟ್ಟದ ಮಲ್ಲೇಶ್ವರದೇವಸ್ಥಾನದಲ್ಲಿನ ಶ್ರೀ ಮಲ್ಲಿಕಾರ್ಜುನನಿಗೆ ಪಟ್ಟಣದರೈತರ ಬಾಂಧವರು ಹಾಗೂ ಸಾರ್ವಜನಿಕರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು..
ಬೆಳಿಗ್ಗೆಯಿಂದಲೇ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದ ಮಲ್ಲೇಶ್ವರದೇವಸ್ಥಾನಕ್ಕೆ ತೆರಳಿದ ಸಾರ್ವಜನಿಕರು ಹಾಗೂ ಸಮಿತಿ ಸದ ಸ್ಯರು ಶ್ರೀ ಮಲ್ಲಿಕಾರ್ಜುನದೇವರಿಗೆಅಭಿಷೇಕ ವಿಶೇಷ ಪೂಜೆ ಸಲ್ಲಿಸಿದರು..

            ಆಂದ್ರದ ಶ್ರೀ ಶೈಲದಿಂದ ಮಲ್ಲಿಕಾರ್ಜುನನ ಮೂರ್ತಿಯನ್ನುತಂದು ಪಟ್ಟಣದ ಹೊರವಲಯದಲ್ಲಿನ ಬೆಟ್ಟದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದ್ದು ಕಳೆ ಹಲವಾರು ದಶಕಗಳಿಂದ ಮೂರ್ತಿಗೆ ಶ್ರಾವಣ ಮಾಸದ ಕೊನೇ ಸೋಮವಾರದಂದು ಭಕ್ತಿ ಪೂರ್ವಕವಾಗಿರೈತರ ಭಾಂಧವರು ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಪಟ್ಟಣದಜನತೆಯನ್ನು ಮಲ್ಲಿಕಾರ್ಜುನಕಾಪಾಡುತ್ತಿದ್ದಾನೆಎಂಬುದುಎಲ್ಲರ ನಂಬಿಕೆಯಾಗಿದೆ..
           ಸಾವಿರಾರುಜನರು ಭಾಗಿ:ಚಿಕ್ಕ ಮಕ್ಕಳು ಮಹಿಳೆಯರು ಯುವಕರು ಹಾಗೂ ವೃದ್ಧರೆನ್ನದೇಎಲ್ಲರೂ ಬೆಟ್ಟವನ್ನುಕಾಲ್ನಡಿಗೆಯಲ್ಲಿಯೇ ಹತ್ತುತ್ತ ಶ್ರೀ ಮಲ್ಲಿಕಾರ್ಜುನನದರ್ಶವನ್ನು ಪಡೆದರು. ಮಲ್ಲಿಕಾರ್ಜುನನಿಗೆತಯಾರಿಸಲಾಗದ ಪ್ರಸಾದವನ್ನು ಪಟ್ಟಣದಲ್ಲಿ ಚಕ್ಕಡಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಬೆಟ್ಟಕ್ಕೆತೆಗೆದುಕೊಂಡು ಹೋಗಿ ನೈವೇದ್ಯ ನೆರವೇರಿಸಲಾಯಿತು ನಂತರ ಸೇರಿದ್ದಸಾವಿರಾರುಜನರಿಗೆಅನ್ನ ಸಂತರ್ಪಣೆ ಮಾಡಲಾಯಿತು..

Recent Articles

spot_img

Related Stories

Share via
Copy link
Powered by Social Snap