ಶಕ್ತಿ ವರ್ಧಕ ಪಾನೀಯ ನಿಷೇಧಕ್ಕೆ ಯು.ಕೆ ಚಿಂತನೆ

ಲಂಡನ್:

          ಲಂಡನ್ ನಲ್ಲಿ ತಂಪು ಪಾನೀಯಗಳಿಗಿಂತ ಕಡಿಮೆ ದರದಲ್ಲಿ ದೊರಕುವ ಮಾಂಸ್ಟರ್ ಎನರ್ಜಿ,ರೆಡ್ ಬುಲ್ ಮುಂತಾದ ಪಾನೀಯಗಳಿಂದ ಚಿಕ್ಕ ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

           ಯಾಕೆ ಎಂದರೆ ಈ ರೀತಿಯ ಪಾನಿಯಗಳಿಂದ ಮಕ್ಕಳಲ್ಲಿ ಬೊಜ್ಜು ಸಕ್ಕರೆ ಕಾಯಿಲೆ ಮುಂತಾದ ರೋಗಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತು ಇದು ಅತಿ ಕಡಿಮೆ ಬೆಲೆಗೆ ಸಿಗುವುದರಿಂದ 6-9 ವರ್ಷದ ಮಕ್ಕಳು ಇದನ್ನೆ ಹೆಚ್ಚಿಗೆ  ಕುಡಿಯುತ್ತಾರೆ ಇದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಮತ್ತು ಶಕ್ತಿ ವರ್ಧಕ ಪಾನೀಯ ನಿಷೇಧದ ಕುರಿತು ಆಲೋಚಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

           ಈ ರೀತಿಯ ಶಕ್ತಿ ವರ್ಧಕ ಪಾನೀಯಗಳನ್ನು ಯಾವ ವಯಸ್ಸಿನವರು ಕುಡಿಯಬೇಕು ಎಂಬುದನ್ನು ನಿರ್ಧರಿಸಲು ಇಂದು ಸಭೆ ಸೇರಲಾಗಿದೆ . ಇದರ ಬೆನ್ನಲ್ಲೇ ದ.ಕೊರಿಯಾ ಶಾಲೆಗಳಲ್ಲಿ ಕಾಫಿಯನ್ನು ನಿಷೇಧಿಸಿದೆ,ಕಾಫಿ ಕುಡಿಯುವುದರಿಂದ ಕಲಿಕಾ ಸ್ಪರ್ಧಾತ್ಮಕತೆ ಕಡಿಮೆಯಾಗುತ್ತದೆ ಎಂಬುದು ದ.ಕೊರಿಯಾದ ಅಭಿಪ್ರಾಯವಾಗಿದೆ. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap