ಶಿರಾದಲ್ಲಿ ಪೂಜಾರಿ ಮೇಲೆ ಸ್ಕ್ರೂ ಡ್ರೈವರ್ ನಿಂದ ಹಲ್ಲೆ!!

ಶಿರಾ :

      ರಾಜ್ಯ ಹಾಗೂ ಜಿಲ್ಲೆಯಲ್ಲಿ ಅತೀ ಸೂಕ್ಷ್ಮವಾದ ಪ್ರದೇಶವೆಂದೇ ಗುರುತಿಸಿಕೊಂಡಿರುವ ಶಿರಾ ನಗರದಲ್ಲಿ ದಿನೇ ದಿನೇ ಸಂಘರ್ಷಣೆಗಳು ನಡೆಯುತ್ತಲೇ ಇವೆ. ಒಂದು ಕೋಮಿನ ಯುವಕರು ಹಿಂದುಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುವುದು, ಹಲ್ಲೆ ಮಾಡುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಲೇ ಇವೆ.

      ಅದಕ್ಕೆ ಪೂರಕವಾಗಿ 4 ಜನರ ಗುಂಪು ರಾತ್ರಿ ಶಿರಾ ನಗರದ ವಾಲ್ಮೀಕಿ ಬಡಾವಣೆ ಬಳಿ ಇರುವ ನವಗ್ರಹಗಳ ದೇವಾಲಯ ಪೂಜಾರಿ ನಾಗರಾಜ್ ಎಂಬುವರ ಬಳಿ ಬಂದು ಕ್ಷುಲ್ಲಕ ವಿಚಾರವಾಗಿ ಜಗಳ ತೆಗೆದು ಚಾಕು ಹಾಗೂ ಸ್ಕೂಡ್ರೈವರ್ ನಿಂದ ಚುಚ್ಚಿ ಪರಾರಿ ಯಾಗಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದವರು ಅವರ ನೆರವಿಗೆ ಧಾವಿಸಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ಘಟಕದಲ್ಲಿ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ:

        ಇತ್ತೀಚೆಗೆಗಷ್ಟೇ ಶಿರಾ ನಗರದಲ್ಲಿ ಭಗತ್ ಸೇನೆಯ ಕಾರ್ಯಕ್ರಮವೂಂದರಲ್ಲಿ ಅಂಗಡಿಯ ಮುಂಭಾಗ ಕಟ್ಟಿದ್ದ ಕೇಸರಿ ಬಣ್ಣದ ಬಾವುಟ ವನ್ನು ಅಲ್ಲಿನ ಕೆಲವು ಕಿಡಿಗೇಡಿಗಳು ಸುಟ್ಟು ಹಾಕಲು ಪ್ರಯತ್ನಪಟ್ಟಿದ್ದರು. ಅದರೆ, ಪಟಾಕಿ ಹೂಡೆಯುವಾಗ ಈ ರೀತಿ ಅಗಿದೆ ಎಂದು ಫೋಲಿಸರು ಆ ಘಟನೆಗೆ ತೇಪೆ ಹಚ್ಚಿದ್ದರು.

    ಆ ಸಂದರ್ಭದಲ್ಲಿ ಇಲ್ಲಿನ ದೇವಸ್ಥಾನದ ಪೂಜಾರಿ ನಾಗರಾಜ್ ಅವರು ಅನ್ಯ ಕೋಮಿನ ಯುವಕರು ಹಗಲು-ರಾತ್ರಿ ಇಲ್ಲಿ ಬಂದು ಕಿರಿ ಕಿರಿ ಉಂಟುಮಾಡುತ್ತಾರೆ ಎಂದು ಪೋಲಿಸ್ ರಿಗೆ ಮಾಹಿತಿ ನೀಡಿದ್ದರು. ಇದೇ ವಿಚಾರ ವಾಗಿ ರಾತ್ರಿ 2 ಬೈಕ್ ಗಳಲ್ಲಿ ಬಂದ ನಾಲ್ಕು ಜನರ ಗುಂಪು ಪೂಜಾರಿ ನಾಗರಾಜ್ ಜೊತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಅವರಿಗೆ ಚಾಕು ಹಾಗೂ ಸ್ಕೂಡ್ರೈವರ್ ನಿಂದ ಚುಚ್ಚಿ ಪರಾರಿ ಯಾಗಿರುವ ಘಟನೆ ನಡೆದಿದೆ.

      ಅಲ್ಲದೆ ಇಲ್ಲಿನ ಯುವಕನೊಬ್ಬ ಹಿಂದುಗಳ ಬಗ್ಗೆ ಅವಹೇಳನ ಮಾಡಿರುವ ಆಡಿಯೋ ಒಂದು ವೈರಲ್ ಅಗಿದೆ. ಇದು ಶಿರಾದಲ್ಲಿ ಎಸ್ ಡಿ ಪಿ ಐ ಪಕ್ಷದ ಸಂಘಟನೆ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಾರೆ. ಅಲ್ಲದೆ ಪಕ್ಷದ ಕಛೇರಿಯನ್ನು ತೆರೆಯಲಾಗಿದೆ ಇದರ ನಂತರವೇ ಇಂತಹ ಘಟನೆಗಳು ಮತ್ತೆ ಮತ್ತೆ ಸಂಬಂವಿಸುತ್ತಿವೆ ಎಂದು ಹೇಳಲಾಗುತ್ತಿದೆ.  

      ಇಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಕಾರಣ ನೀಡದೆ, ಮೊದಲು ಹಿಂದು ಯುವಕರನ್ನು ಹೆದರಿಸಿ ಫೋಲಿಸರು ಪ್ರಕರಣಗಳನ್ನು ದಾಖಲಿಸಿಕೊಂಡು ಮನಸೋ ಇಚ್ಚೆ ಥಳಿಸಿ ಕಳುಹಿಸುತ್ತಾರೆ. ಇದರ ಲಾಭ ಪಡೆದು ಹಿಂದುಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಾರೆ. ಇವರ ಉಪಟಳ ಸಹಿಸಲು ಸಾಧ್ಯವಿಲ್ಲ ಎಂದು ಕೆಲವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

      ತತ್ ಕ್ಷಣವೆ ಹಲ್ಲೆ ನಡೆಸಿರುವ ಪೊಲೀಸರು ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ಅಲ್ಲದೆ ಈಗ ಚಿಕಿತ್ಸೆ ಪಡೆಯುತ್ತಿರುವ ನಾಗರಾಜ್ ಅವರಿಗೆ ರಕ್ಷಣೆ ನೀಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಡಾ ದಿವ್ಯ.ವಿ.ಗೋಪಿನಾಥ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದು ಸಂಘಟನೆಗಳಿಂದ ಬೃಹತ್ ಪ್ರತಿಭಟನೆಗೆ ಸಿದ್ಧತೆ:

       ಪೂಜಾರಿ ಹಾಗೂ ದುಷ್ಕರ್ಮಿಗಳ ನಡುವೆ ಹಣಕಾಸಿನ ವ್ಯವಹಾರ ಇತ್ತು ಅದಕ್ಕೆ ಗಲಾಟೆ ಅಗಿದೆ ಎಂದು ತೇಪೆ ಹಚ್ಚಿ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ.  ಎಂಬ ಸುದ್ದಿ ಹರಡಿದ ಪರಿಣಾಮ ಹಿಂದು ಸಂಘಟನೆಗಳು ದಿಡೀರ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿಷಯ ತಿಳಿದ ಕೂಡಲೇ ಹೆಚ್ಚುವರಿ ಫೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಶೋಭಾರಾಣಿ ಯವರು ಶಿರಾಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫೋಲಿಸರನ್ನು ನಿಯೋಜನೆ ಮಾಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap