ಶ್ರೀಕೃಷ್ಣನ ಬಾಲಲೀಲೆಗಳು ಅದ್ಭುತ : ಕೆ.ವಿ.ಅಮರೇಶ್

ಹಿರಿಯೂರು :
           ಶ್ರೀಕೃಷ್ಣನ ಬಾಲ ಲೀಲೆಗಳು ನಿಜಕ್ಕೂ ತುಂಬಾ ಅದ್ಭುತ ಎಂದು ವಾಗ್ದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ವಿ.ಅಮರೇಶ್ ಹೇಳಿದರು.
            ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ವಾಗ್ದೇವಿ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣನ ವೇಷಭೂಷಣ ಸ್ಪರ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶ್ರೀಕೃಷ್ಣನ ಬಾಲ್ಯ ಬೆಳೆದು ಬಂದ ಹಾದಿ ಹಾಗೂ ಇಡೀ ಜಗತ್ತಿಗೇ ಸಂದೇಶಗಳನ್ನು ನೀಡಿದ ಶ್ರೀಕೃಷ್ಣ ಪರಮಾತ್ಮನ ವಿಚಾರ ಧಾರೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.
           ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಹೆಚ್.ಎಸ್.ನಾಗರಾಜಗುಪ್ತ ರವರು ಮಾತನಾಡಿ ಶ್ರೀಕೃಷ್ಣ ಪರಮಾತ್ಮ ಎಂದರೆ ಹಿಂದೂ ಸಮಾಜದಲ್ಲಿ ವಿಶೇಷವಾದ ಭಾವನೆ ಇದೆ ಎಂದರು ಹಾಗೂ ಶ್ರೀ ಕೃಷ್ಣ ವಿಭಿನ್ನವಾದ ಪಾತ್ರಗಳಲ್ಲಿ ಧಾರ್ಮಿಕತೆಯನ್ನು ಮೆರೆದಿರುವ ಬಗ್ಗೆ ಹೇಳಿದರು.
          ವಾಗ್ದೇವಿ ವಿದ್ಯಾಸಂಸ್ಥೆಯ ಶೈಕ್ಷಣಿಕ ಕಾರ್ಯದರ್ಶಿ ಆರ್.ಪ್ರಕಾಶ್‍ಕುಮಾರ್ ರವರು ಮಾತನಾಡಿ ಶ್ರೀಕೃಷ್ಣನ ವೇಷದಲ್ಲಿ ಪುಟಾಣಿ ಮಕ್ಕಳು ಆಕರ್ಷಕವಾಗಿ ಕಾಣುತ್ತಿದ್ದು ಪೋಷಕರು ಪುಟಾಣಿ ಮಕ್ಕಳಿಗೆ ತುಂಬಾ ಸುಂದರವಾಗಿ ಸಜ್ಜುಗೊಳಿಸಿದ್ದಾರೆ ಎಂದರು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ತಿಳಿಸಿದರು. ತೀರ್ಪುಗಾರರಾಗಿ ಸುಲೋಚನತಿಪ್ಪೇಸ್ವಾಮಿ, ಗೀತಾರಾಧಾಕೃಷ್ಣ, ದೇವಕಿ ಪ್ರಸಾದ್ ಭಾಗವಹಿಸಿದ್ದರು.
            ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಶ್ರೀಧರ್, ಮುಖ್ಯ ಶಿಕ್ಷಕರಾದ ಶರಣಪ್ಪ, ತಿಪ್ಪೇಸ್ವಾಮಿ ಹಾಗೂ ಉಮಾ, ರಮ್ಯ, ಅಸಿಬಾ, ದ್ರಾಕ್ಷಾಯಿಣಿ ಮತ್ತು ಸಿಬ್ಬಂದಿಯವರು ಪೋಷಕರು ಪಾಲ್ಗೊಂಡಿದ್ದರು. ಪುಟಾಣಿ ಮಕ್ಕಳು ರಾಧೆ ಕೃಷ್ಣರ ವೇಷದಲ್ಲಿ ಎಲ್ಲರನ್ನೂ ಅಕರ್ಷಿಸಿದರು ಹಾಗೂ ನೃತ್ಯ ಪ್ರದರ್ಶನ ನಡೆಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap