ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ

ಚಳ್ಳಕೆರೆ

        ಬಿಟ್ರೀಷರ ದಾಸ್ಯದಿಂದ ರಾಷ್ಟ್ರದ ಜನರನ್ನು ಸಂರಕ್ಷಿಸಿದ ಕೀರ್ತಿ ಮಹಾತ್ಮ ಗಾಂಧೀಜಿಯವರದ್ದು, ಗಾಂಧೀಜಿ ಈ ರಾಷ್ಟ್ರಕ್ಕೆ ನೀಡಿದ ಮಹಾನ್ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಂದು ಕುಟುಂಬವೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅಡ್ಡಿಯಾಗಬಹುದಾದ ಮದ್ಯಪಾನವನ್ನು ತ್ಯಜಿಸುವಂತೆ ರಾಷ್ಟ್ರೀಯ ಮಟ್ಟದ ಅಂದೋನಕ್ಕೆ ಚಾಲನೆ ನೀಡಿದವರು ಮಹಾತ್ಮ ಗಾಂಧೀಜಿಯವರು ಎಂದು ಇಲ್ಲಿನ ಶಾರದಾಶ್ರಮದ ಮಾತಾಜಿ ತ್ಯಾಗಮಯಿ ತಿಳಿಸಿದರು.

         ಅವರು ಮಂಗಳವಾರ ಇಲ್ಲಿನ ಸಾಯಿಬಾಬಾ ಮಂದಿರದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಗಾಂಧಿ ಜಯಂತಿ, ಗಾಂಧಿ ಸ್ಮøತಿ ವ್ಯಸನ ಮುಕ್ತರ ಸಮಾವೇಶ, ಸಾಧಕರ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ಜಿಲ್ಲಾ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ನವಜೀವನ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘ ಮತ್ತು ವೆಂಕಟಸಾಯಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

          ಮಹಾತ್ಮ ಗಾಂಧೀಜಿಯವರು ಕೇವಲ ಭಾರತದಲ್ಲಿ ಅಷ್ಟೇಯಲ್ಲ ವಿದೇಶಿಯಿರಿಂದಲೂ ಸಹ ಹೆಚ್ಚು ಗೌರವವನ್ನು ಗಳಿಸಿದವರು. ಕಾರಣ ಯಾವುದೇ ಕಾರ್ಯವಾಗಲಿ ಅದನ್ನು ಮಾಡೀಯೇ ತೀರಿಸುವ ಛಲ ಮಹಾತ್ಮ ಗಾಂಧೀಜಿಯವರದ್ದು, ತಮ್ಮದೇಯಾದ ತತ್ವಾದರ್ಶಗಳ ಮೂಲಕ ರಾಷ್ಟ್ರದ ಜನರ ಬದುಕಿನಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸಿದ ಮಹಾನ್ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದರು.

      ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀತಾರಾಮಶೆಟ್ಟಿ ಮಾತನಾಡಿ, ಪ್ರತಿಯೊಂದು ಕುಟುಂಬದ ನೆಮ್ಮದಿ ಮನೆಯ ಯಜಮಾನನಲ್ಲಿರುತ್ತದೆ. ಮನೆಯ ಯಜಮಾನ ಕುಡಿತದ ದಾಸನಾದಲ್ಲಿ ಅದು ಅವನ ಗೌರವವನ್ನಷ್ಟೇಯಲ್ಲ, ಅವನ ಇಡೀ ಕುಟುಂಬದ ಗೌರವವನ್ನೇ ಹಾಳು ಮಾಡುತ್ತದೆ. ಸಮಾಜದಲ್ಲಿ ಯಾವ ಕುಟುಂಬ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಾಗುತ್ತದೆಯೋ ಅಂತಹ ಕುಟುಂಬಗಳು ಮಾತ್ರ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ.

       ನಾವು ಕೆಟ್ಟ ಚಟಗಳನ್ನು ರೂಢಿಸಿಕೊಂಡರೆ ಇಡೀ ಸಮಾಜ ಹಾಗೂ ಸಮುದಾಯ ನಮ್ಮನ್ನು ಅಗೌರವಾಗಿ ಕಾಣುತ್ತದೆ. ನಮ್ಮ ಕೆಟ್ಟ ಚಟ ಸರ್ವನಾಶಕ್ಕೆ ದಾರಿಯಾಗುತ್ತದೆ. ರಾಜ್ಯದಲ್ಲಿ ಇದುವರೆಗೂ 90 ಸಾವಿರ ಮದ್ಯವೆಸನಿಗಳು ಶ್ರೀಕ್ಷೇತ್ರ ಧರ್ಮಸ್ಥಳ, ಜನಜಾಗೃತಿ ವೇದಿಕೆ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಪಡೆದು ಇಂದು ಮದ್ಯವನ್ನು ತ್ಯಜಿಸಿ ಉತ್ತಮ ನಾಗರೀಕರಾಗಿ ತಮ್ಮ ಬದುಕನ್ನು ಕಂಡುಕೊಂಡಿದ್ಧಾರೆ. ಇದರ ಸಂಪೂರ್ಣ ಶ್ರೇಯಸ್ಸು ಶ್ರೀವೀರೇಂದ್ರ ಹೆಗ್ಗಡೆ ಹಾಗೂ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಸಲ್ಲುತ್ತದೆ ಎಂದರು.

      ಗಾಂಧೀಜಿಯವರ ವಿಚಾರ ಧಾರೆಗಳ ಕುರಿತು ಉಪನ್ಯಾಸ ನೀಡಿದ ಖ್ಯಾತ ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ, ಮಹಾತ್ಮ ಗಾಂಧೀಜಿ ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಸಹ ಲೆಕ್ಕಿಸದೆ ಇಡೀ ಜೀವಮಾನವನ್ನೇ ಜನತೆಯ ಮತ್ತು ಸಮಾಜದ ಹಿತಕ್ಕಾಗಿ ಮೀಸಲಿಟ್ಟ ಮಹಾತ್ಮರು.

       ತಮ್ಮ ಕುಟುಂಬದ ಯಾವುದೇ ಸಮಸ್ಯೆಗಳಿಗೆ ಅವರು ಸ್ಪಂದಿಸದೆ ಇಡೀ ಸಮುದಾಯದ ಏಳಿಗಾಗಿ ದುಡಿದವರು. ತಮ್ಮದೇಯಾದ ನಡೆನುಡಿಗಳಿಂದ ಸಮಾಜದಲ್ಲಿ ಪರಿವರ್ತನೆ ಮಾಡಿದ ಮಹಾನೀಯರು. ಯಾವ ವ್ಯಕ್ತಿ ಕುಡಿತದ ಚಟಕ್ಕೆ ಬಲಿಯಾಗುತ್ತಾನೋ ಅದು ಸಮಾಜದ ಮೇಲೆ ದುಪ್ಪರಿಣಾಮ ಬೀರುತ್ತದೆ ಎಂಬುವುದನ್ನು ಸಾರಿ ಹೇಳಿದವರು. ಮದ್ಯಪಾನ ವಿರೋಧಿ ಅಂದೋಲನದ ಮುಂದಾಳತ್ವವಹಿಸಿ ಸಾವಿರಾರು ಕುಟುಂಬಗಳು ಈ ಚಟಕ್ಕೆ ಬಲಿಯಾಗದಂತೆ ನಿಯಂತ್ರಿಸಿದ ಮಹಾನ್ ಶಕ್ತಿವಂತ ಮಹಾತ್ಮ ಗಾಂಧೀಜಿ. ತಾಲ್ಲೂಕಿನ ಬೆಳಗೆರೆ ಗ್ರಾಮದ ದಿವಂಗತ ಬೆಳಗೆರೆ ಕೃಷ್ಣಶಾಸ್ತ್ರಿಯವರು ಗಾಂಧೀಜಿಯವರನ್ನು ಕಂಡು ಅವರೊಡನೆ ಕಾರ್ಯನಿರ್ವಹಿಸಿದ ದಿನಗಳನ್ನು ಅವರು ಮೆಲಕು ಹಾಕಿದರು.

       ಇದೇ ಸಂದರ್ಭದಲ್ಲಿ ಮದ್ಯಪಾನ ವಿರೋಧಿ ಅಂದೋನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಹೊಸದುರ್ಗದ ಚಿದಾನಂದಪ್ಪ, ಹಿರಿಯೂರಿನ ಎಂ.ಆರ್.ತಿಪ್ಪೇಸ್ವಾಮಿ, ಚಿತ್ರದುರ್ಗ ಎಚ್.ಕೆ.ಸ್ವಾಮಿ, ಚಳ್ಳಕೆರೆಯ ಎಸ್.ಎಚ್.ಸೈಯದ್, ಹೊಳಲ್ಕೆರೆಯ ಈಚಗಟ್ಟದ ಸಿದ್ದವೀರಪ್ಪ, ಮೊಳಕಾಲ್ಮೂರಿನ ಬಿ.ಜಿ.ಕೆರೆ ವೀರಭದ್ರಪ್ಪನವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮೊಳಕಾಲ್ಮೂರಿನ ಮಂಜುನಾಥ, ಚಿತ್ರದುರ್ಗದ ಎಸ್.ಮಂಜಣ್ಣ ಇವರಿಗೆ ಜಾಗೃತಿ ಮಿತ್ರ ಮತ್ತು ಜಾಗೃತಿ ಅಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಚಿದಾನಂದಪ್ಪ, ಸೈಯದ್, ಜನಜಾಗೃತಿ ಸಮಿತಿ ಪರವಾಗಿ ದಸ್ತಗಿರಿ ಸಾಬ್, ಈಚಗಟ್ಟದ ಸಿದ್ದವೀರಪ್ಪ ಮಾತನಾಡಿದರು. 

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಗಮಿಸಿದ ಮದ್ಯವೆಸನಿಗಳು ಈ ಚಟದಿಂದ ದೂರವಾಗುವಂತಹ ಬುದ್ದಿ ಶಕ್ತಿಯನ್ನು ಭಗವಾನ್ ಶ್ರೀಸಾಯಿಬಾಬಾ ನೀಡಲಿ. ಭಕ್ತರ ಆಶೀರ್ವಾದಿಂದ ಕೇವಲ 39 ತಿಂಗಳಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ಕೆಟ್ಟ ಚಟಗಳು ಸದಾಕಾಲ ಮನುಷ್ಯನನ್ನು ಅವನತಿಯತ್ತ ಸಾಗುವಂತೆ ಮಾಡುತ್ತವೆ. ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಬದುಕನ್ನು ರೂಪಿಸಿಕೊಳ್ಳುವಂತಹ ವಾತಾವರಣವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಇಂತಹ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುವುತ್ತಿರುವುದು ಅಭಿನಂದನಿಯವೆಂದರು.

       ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಎಂ.ಎಸ್.ರಾಜು, ಜೆ.ವಿ.ತೀರ್ಥಪ್ಪ, ಉಪಾಧ್ಯಕ್ಷ ಜಿ.ಷಡಕ್ಷರಪ್ಪ, ಜಿಲ್ಲಾ ನಿರ್ದೇಶಕ ಬಿ.ಗಣೇಶ್, ತಾಲ್ಲೂಕು ಯೋಜನಾ ನಿರ್ದೇಶಕ ಚನ್ನಪ್ಪಗೌಡ, ವೆಂಟಕಸೇವಾ ಸಾಯಿ ಟ್ರಸ್ಟ್‍ನ ನಿರ್ದೇಶಕರಾದ ನಾಗೇಶ್, ಜಗದೀಶ್, ಮಾದ್ಯಮ ಸಲಹೆಗಾರ ಟಿ.ಜೆ.ತಿಪ್ಪೇಸ್ವಾಮಿ, ಸಾಂಸ್ಕøತಿಕ ಪ್ರಚಾರ ಸಮಿತಿ ಛೇರ್ಮೆನ್ ಬಿ.ವಿ.ಚಿದಾನಂದಮೂತಿ, ಉಪಾಧ್ಯಕ್ಷ ಕೆ.ಎಂ.ಜಗದೀಶ್, ಪುಪ್ಪಸಂಜೀವಮೂರ್ತಿ, ಬಿ.ಸಿ.ವೆಂಕಟೇಶ್‍ಮೂರ್ತಿ, ಬಿ.ಸಿ.ಸತೀಶ್, ನೇತಾಜಿ ಪ್ರಸನ್ನ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap