ಶ್ರೀ ಕೃಷ್ಣ ವೇಷ ಭೂಷಣ ಸ್ಪರ್ಧೆ

ಬ್ಯಾಡಗಿ:

            ಸಂಸ್ಕತಿಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ವಿಫಲವಾದರೇ, ಭಾರತದ ಸನಾತನ ನಾಗರಿಕತೆಗಳು ಕಣ್ಮರೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹೀಗಾಗಿ ಚಿಕ್ಕಂದಿನಿಂದಲೇ ಮಕ್ಕಳಿಗೆ ಸಂಪ್ರದಾಯಗಳನ್ನು ಕಲಿಸಿಕೊಡುವಂತಹ ಕೆಲಸವಾಗಬೇಕು ಎಂದು ಮುಖ್ಯ ಶಿಕ್ಷಕಿ ಶಿವಜ್ಯೋತಿ ಅಭಿಪ್ರಾಯ ವ್ಯಕ್ತಪಡಿಸಿದರು.
               ಪಟ್ಟಣದ ನವಚೈತನ್ಯ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಎರ್ಪಡಿಸಿದ್ದ ಶ್ರೀ ಕೃಷ್ಣ ವೇಷ ಭೂಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆದು ನಿಂತ ಮಕ್ಕಳು ಈಗಾಗಲೇ ಹಣೆಯಲ್ಲಿ ದೇವರ ಪೂಜೆ, ಕುಂಕುಮ, ಕಿವಿಯಲ್ಲಿ ಓಲೆ, ತಲೆಯನ್ನು ಬಾಚಿಕೊಂಡು ಜಡೆಗಳನ್ನೇ ಹಾಕಿಕೊಳ್ಳದಂತಹ ಸ್ಥಿತಿಗೆ ಬಂದಿದ್ದಾರೆ, ಕನಿಷ್ಟ ಇಂತಹ ಆಚರಣೆಳನ್ನು ಕೂಡ ನಾವು ಪಾಲಿಸಲಿಕ್ಕೆ ಸಾಧ್ಯವಾಗುತ್ತಿಲ್ಲ, ಎಲ್ಲ ಧರ್ಮಾಚರಣೆಗಳು ಅವರಿಗೆ ಇಷ್ಟ ಬಂದಂತೆ ಆಚರಿಸಬಹುದು ಹೀಗಿದ್ದರೂ ಸಹ ಭಾರತೀಯ ನಾರಿ ಎಂದು ಗುರ್ತಿಸಬೇಕಾದಲ್ಲಿ ಹಣೆಗೆ ಕುಂಕುಮ ಸೀರೆ ಇನ್ನಿತರ ಉಡುಪುಗಳನ್ನು ಹಾಕಿಕೊಳ್ಳವುದು ಹೆಚ್ಚು ಸೂಕ್ತವೆಂದರು.
          ಭಾರತೀಯ ಸಂಸ್ಕತಿಗೆ ಇಂದು ವಿಶ್ವವೇ ತಲೆ ಬಾಗುತ್ತಿದೆ, ಇದಕ್ಕೆಲ್ಲ ಇಲ್ಲಿನ ಆಚಾರ ವಿಚಾರ ಸಂಪ್ರದಾಯಗಳೇ ಕಾರಣವಾಗಿದ್ದು ಭಾರತೀಯ ಸಂಸ್ಕತಿ ವಿಚಾರಧಾರೆಗಳನ್ನು ಮಕ್ಕಳಿಗೆ ಧಾರೆ ಎರೆಯುವ ಕೆಲಸವಾಗಬೇಕು, ವಿಶ್ವಕ್ಕೆ ಮಹಾಭಾರತ, ರಾಮಾಯಣದಂತಹ ಮಹಾನ್ ಗ್ರಂಥಗಳನ್ನು ನೀಡಿದ ಹಿರಿಮೆ ಭಾರತದ್ದಾಗಿದೆ. ಶೋಷಿತ ಸಮಾಜ ಹಾಗೂ ಮನುಕುಲದ ಉದ್ದಾರಕ್ಕಾಗಿ ಶರಣರು, ದಾರ್ಶನಿಕರು ಮಠಾಧೀಶರು ಸೇರಿದಂತೆ ಬಹುತೇಕ ವಿಶ್ವ ಮಾನವರು ಸಾಕಷ್ಟು ಶ್ರಮಿಸಿದ್ದಾರೆ, ಮನು ಕುಲವನ್ನು ರಕ್ಷಿಸಲು ಕಾಲಕಾಲಕ್ಕೆ ನಾನು ಅವತರಿಸುತ್ತೆನೆಂದು ಹೇಳಿದ ಶ್ರೀ ಕೃಷ್ಣ ಪರಮಾತ್ಮ ತಾನು ರಚಿಸಿದ ಭಗವದ್ಗೀತೆಯಲ್ಲಿ ಧರ್ಮ-ಕರ್ಮ, ಪಾಪ-ಪುಣ್ಯ ಮತ್ತು ನ್ಯಾಯ-ಅನ್ಯಾಯಗಳ ಕುರಿತು ಪರಿಚ್ಛೇದಗಳಲ್ಲಿ ಉಲ್ಲೇಖಿಸಿದ್ದು ಅವೆಲ್ಲವುಗಳ ಸಾರ್ವಕಾಲಿಕ ಸತ್ಯ ಎಂದರು..

Recent Articles

spot_img

Related Stories

Share via
Copy link
Powered by Social Snap