ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಆಗ್ರಹ

ಚಿತ್ರದುರ್ಗ:

         ಸಾಲ ಮನ್ನ ಬೇಡ, ಅಕ್ಕಿ, ಗೋಧಿ ಕೊಡಬೇಡಿ. ಕರ್ನಾಟಕದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಾವಿರಾರು ಮಹಿಳೆಯರ ನೇತೃತ್ವದಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಜ.19 ರಂದು ಚಿತ್ರದುರ್ಗದಿಂದ ಕಾಲ್ನಡಿಗೆ ಜಾಥ ಹೊರಟು 30 ರಂದು ಬೆಂಗಳೂರು ತಲುಪಲಿದೆ ಎಂದು ಜಾಥದ ನೇತೃತ್ವ ವಹಿಸಿರುವ ವಿದ್ಯಾಪಾಟೀಲ್ ತಿಳಿಸಿದರು.

          ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 2016, ಅ.2 ಗಾಂಧಿüಜಯಂತಿಯಂದು ರಾಯಚೂರು ಜಿಲ್ಲೆಯಲ್ಲಿ 45 ಸಾವಿರ ಮಹಿಳೆಯರು ಸೇರಿ ಮದ್ಯಪಾನ ಸಂಪೂರ್ಣ ನಿಷೇಧಿಸುವಂತೆ ಚಳುವಳಿ ಆರಂಭಿಸಿದೆವು. ಆದರೆ ಸರ್ಕಾರ ನಮಗೆ ಅವಮಾನಿಸುವಂತೆ 900 ಎಂ.ಎಸ್.ಐ.ಎಲ್.ತೆರೆಯಲು ಅನುಮತಿ ನೀಡಿತು. ಇದರಿಂದ ಗಾಂಧಿಜಿಯನ್ನು ಅವಮಾನಿಸಿದಂತಾಯಿತು ಎಂದು 71 ದಿನಗಳ ಕಾಲ 300 ಮಹಿಳೆಯರು ಅಹೋರಾತ್ರಿ ಧರಣಿ ನಡೆಸಿದರೂ ಸರ್ಕಾರ ಮಣಿಯಲಿಲ್ಲ.

           ದೇವದಾಸಿ ಪದ್ದತಿ ವಿರುದ್ದವೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕುಮಾರಸ್ವಾಮಿ ನಾನು ರಾಜ್ಯದ ಮುಖ್ಯಮಂತ್ರಿಯಾದರೆ ಮದ್ಯಪಾನ ಸಂಪೂರ್ಣ ನಿಷೇಧಿಸುತ್ತೇನೆಂದು ವಾಗ್ದಾನ ಮಾಡಿ ಮಾತಿನಂತೆ ನಡೆದುಕೊಳ್ಳದ ಪರಿಣಾಮ ಚಿತ್ರದುರ್ಗದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಕ್ಕೆ ಮುಂದಾಗಿದ್ದೇವೆ. 12 ದಿನಗಳ ನಮ್ಮ ಪಾದಯಾತ್ರೆಯಲ್ಲಿ ವಿವಿಧ ಸಂಘಟನೆಗಳು, ಧಾರ್ಮಿಕ ಗುರುಗಳು, ಮಹಿಳೆಯರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ. ರಾಜಕೀಯ ಪಕ್ಷಗಳು ಬೆಂಬಲ ಕೊಡಿದಿದ್ದರೆ ಮುಂದೆ ಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಹಿಳೆಯರೆ ತಕ್ಕ ಪಾಠ ಕಲಿಸಲಿದ್ದೇವೆಂದು ವಿದ್ಯಾಪಾಟೀಲ್ ಎಚ್ಚರಿಸಿದರು.

          ಆರ್.ವಿಶ್ವಸಾಗರ್, ನರೇನಹಳ್ಳಿ ಅರುಣ್‍ಕುಮಾರ್, ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಟಿ.ಶಫೀವುಲ್ಲಾ, ಬೋರಯ್ಯ, ಬೀಬಿಜಾನ್, ತಿಪ್ಪಮ್ಮ, ವಿರುಪಮ್ಮ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap