ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಜಿಲ್ಲಾಧಿಕಾರಿ ರಾಮ್ ಪ್ರಸಾತ್

ಬಳ್ಳಾರಿ:

      ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಸಭೆ ಮಂಗಳವಾರ ನಡೆಯಿತು.ತಮ್ಮ ಸಮಸ್ಯೆ ಹಾಗೂ ದೂರು-ದುಮ್ಮಾನಗಳು ಹೊತ್ತು ಬಗೆಹರಿಸುವ ಭರವಸೆಯೊಂದಿಗೆ ಜನಸ್ಪಂದನಾ ಸಭೆಗೆ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದರು.

       ಸಮಸ್ಯೆಗಳನ್ನು ನೋಂದಣಿ ಮಾಡಿಕೊಳ್ಳಲು ಮತ್ತು ಅವುಗಳಿಗೆ ನಂಬರ್ ನೀಡುವುದಕ್ಕಾಗಿ ಇಲಾಖಾವಾರು ಪ್ರತ್ಯೇಕ ಕೌಂಟರ್‍ಗಳನ್ನು ತೆರೆಯಲಾಗಿತ್ತು.

       ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು, ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಮತ್ತು ಇನ್ಮುಂದೆ ನಿಗದಿತವಾಗಿ ಜನಸ್ಪಂದನಾ ಸಭೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

       ಶಿವಗಂಗಮ್ಮ ಎನ್ನುವ ವಿಕಲಚೇತನೇ ನಾನು ವಿಕಲಚೇತನಳು; ಆದರೇ ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಇದುವರೆಗೆ ಯಾವುದೇ ಸೌಲಭ್ಯ ನಮಗೆ ದೊರಕಿಲ್ಲ. ನನ್ನ ವಾಹನ ಕೂಡ ಸ್ವಂತ ದುಡ್ಡಿನಲ್ಲಿ ಖರೀದಿಸಿದ್ದೇನೆ. ದಯವಿಟ್ಟು ನನಗೆ ವಸತಿ ಸೌಲಭ್ಯ ಒದಗಿಸಿ ಎಂದು ಮನವಿ ಮಾಡಿದಳು.

      ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ತಮಗೆ ನಗರ ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ 27 ಸಾವಿರ ವಿಕಲಚೇತನರಿದ್ದು, ಸರಕಾರದಿಂದ ಬಂದ ನಿಗದಿತ ಗುರಿ ಅಡಿ ಪ್ರಾಶಸ್ತ್ಯದ ಆಧಾರದ ಮೇಲೆ ವಾಹನಗಳು ಒದಗಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

      ಕಳೆದ 30 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು,ನನ್ನ ಹೆಸರಿಗೆ ಪಟ್ಟಾ ಮಾಡಿಕೊಡಿ ಅಂತ ಮರಿಯಮ್ಮ ಎನ್ನುವ ಮಹಿಳೆ ಡಿಸಿ ಅವರಲ್ಲಿ ಕೋರಿಕೊಂಡರು. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಅವರು ತಾವು 30 ವರ್ಷಗಳಿಂದ ಸರಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದಲ್ಲಿ ಕಂದಾಯ ಇಲಾಖೆಯ ಸಕ್ರಮ ಯೋಜನೆ ಅಡಿ ಕ್ರಮಕೈಗೊಳ್ಳಲಾಗುವುದು. ಸಹಾಯಕ ಆಯಕ್ತರನ್ನು ಕೂಡಲೇ ಜಮೀನುಗೆ ಕಳುಹಿಸಿ ಪರಿಶೀಲಿಸುವಂತೆ ತಿಳಿಸಲಾಗುವುದು ಎಂದರು.

      ರುದ್ರಪ್ಪ ಎನ್ನುವ ರಾಮೇಶ್ವರ ನಗರದ ನಿವಾಸಿ ಅವರು ರಾಮೇಶ್ವರ ನಗರದಲ್ಲಿ ಸೆಪ್ಟಿಂಕ್ ಟ್ಯಾಂಕ್ ವ್ಯವಸ್ಥೆ ಮಾಡುವಂತೆ ಮತ್ತು ಅಲ್ಲಿರುವ ಸ್ಮಶಾನದಲ್ಲಿನ ಮುಳ್ಳು ಕಂಟಿಗಳು ಕತ್ತರಿಸಿ ಸ್ವಚ್ಛಗೊಳಿಸುವಂತೆ ಕೋರಿಕೊಂಡರು. ಅಮೃತ್ ಯೋಜನೆ ಅಡಿ ಸೆಪ್ಟಿಂಕ್ ಟ್ಯಾಂಕ್‍ಗೆ ಕ್ರಮಕೈಗೊಳ್ಳಲಾಗುವುದು. ಸ್ಮಶಾನದಲ್ಲಿ ಬೆಳೆದು ನಿಂತಿರುವ ಮುಳ್ಳು-ಕಂಟಿಗಳನ್ನು ಕೂಡಲೇ ಕತ್ತರಿಸಿ ಸ್ವಚ್ಛಗೊಳಸಿ ಅದರ ಸುತ್ತಮುತ್ತಲು ಬೇಲಿ ಹಾಕಿ ವರದಿ ಸಲ್ಲಿಸುವಂತೆ ಡಿಸಿ ಅವರು ತಹಸೀಲ್ದಾರ ನಾಗರಾಜ ಅವರಿಗೆ ಸೂಚಿಸಿದರು.

       ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಪ್ರಮುಖರೊಬ್ಬರು ಉಜ್ವಲ ಯೋಜನೆ ಅಡಿ ಎಲ್‍ಪಿಜಿ ಸಂಪರ್ಕ ಉಚಿತವಾಗಿ ನೀಡಬೇಕು. ಆದರೇ ಏಜೆನ್ಸಿಯವರು 600 ರೂ. ತೆಗೆದುಕೊಳ್ಳುತ್ತಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

       ಇದಕ್ಕುತ್ತರಿಸಿದ ಡಿಸಿ ರಾಮ್ ಪ್ರಸಾತ್ ಅವರು, ಅದನ್ನು ಉಚಿತವಾಗಿ ವಿತರಿಸಬೇಕು. ಆದರೇ ಏಜೆನ್ಸಿಗಳು ಹಣ ಕೇಳುತ್ತಿರುವುದು ಸರಿಯಲ್ಲ.ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. ಅವರು ನೀಡುವ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

       ಅಂಗನವಾಡಿ ನೇಮಕಾತಿಗಳಲ್ಲಿ ಪಾರದರ್ಶಕತೆ, ಸರಕಾರಿ ಶಾಲಾ ಕಟ್ಟಡಗಳು ಶಿಥೀಲಾವಸ್ಥೆಯಲ್ಲಿವೆ. ಚರಂಡಿ ಸಮಸ್ಯೆ, ವಿದ್ಯುತ್ ಸಮಸ್ಯೆ, ಚಿರತೆ ಹಾವಳಿ ಸೇರಿದಂತೆ ವಿವಿಧ ವಿಷಯಗಳು ಜನಸ್ಪಂದನಾ ಸಭೆಯಲ್ಲಿ ಪ್ರಸ್ತಾಪವಾದವು.ಅವುಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಪರಿಹಾರ ಸೂಚಿಸಿದರು.ಮಹಾನಗರ ಪಾಲಿಕೆ-14, ಕುಡಿಯುವ ನೀರು-2,ಸಹಾಯಕ ಆಯುಕ್ತರ ಕಚೇರಿ-2,ಕೂಡ್ಲಿಗಿ,ಕುರುಗೋಡು, ಸಂಡೂರು ತಹಸೀಲ್ದಾರ್ ಕಚೇರಿ ತಲಾ 01, ಅರಣ್ಯ-1, ಸ್ಲಂ ಬೋರ್ಡ್-1, ಆರ್‍ಟಿಒ-1, ಮುಖ್ಯಮಂತ್ರಿ ಪರಿಹಾರ ನಿಧಿ-1, ಶಿಕ್ಷಣ ಇಲಾಖೆ,ಪ್ರವಾಸೋದ್ಯಮ ಇಲಾಖೆ, ಭೂ ದಾಖಲೆ, ಸಮಾಜಕಲ್ಯಾಣ ಇಲಾಖೆ ತಲಾ 01, ಕೆಯುಡಬ್ಲ್ಯೂಎಸ್-03 ಸೇರಿದಂತೆ 55ಕ್ಕೂ ಹೆಚ್ಚು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.ಈ ಸಂದರ್ಭದಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರರಾದ ನಾಗರಾಜ, ವಿಶ್ವಜೀತ್ ಮೆಹತಾ ಸೇರಿದಂತೆ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಇದ್ದರು
                 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap