ಸಮಾಜೆಮುಖಿ ಕೆಲಸಗಳನ್ನು ಮಾಡಲು ಕೈ ಜೋಡಿಸಿ

 ಹಾವೇರಿ :

ಇಲ್ಲಿನ ಇಜಾರಿ ಲಕಮಾಪುರದಲ್ಲಿನ ಜ್ಞಾನಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವಾತಂತ್ರೋತ್ಸವದ ನೆನಪಿನಾರ್ಥ ಸೃಷ್ಠಿ ಪೌಂಡಶೇನ್ ವತಿಯಿಂದ ವಿಶಿಷ್ಟವಾಗಿ ಮಕ್ಕಳಿಂದಲೇ ಕೇಕ್ ಕತ್ತರಿಸಿ ಸಿಂಹಿ ಹಂಚಿ, ಎಲ್ಲ ಮಕ್ಕಳಿಗೂ ಟೀ ಶೇರ್ಟಗಳನ್ನು ನೀಡಲಾಯಿತು. ಈ ಶಾಲೆಯ ವಿದ್ಯಾರ್ಥಿಗಳನ್ನು ನಗರದ ಶಿಗಿಹಳ್ಳಿ ಆಸ್ಪತ್ರೆಯ ಡಾ|| ಶಿಗಿಹಳ್ಳಿ ದಂಪತಿಗಳು ವೈದ್ಯಕೀಯವಾಗಿ ದತ್ತು ತೆಗೆದುಕೊಂಡರು. ಇಲ್ಲಿನ ಮಕ್ಕಳಿಗೆ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಆಸ್ಪತ್ರೆ ವತಿಯಿಂದ ಉಚಿತವಾಗಿ ಚಿಕಿತ್ಸೆ, ಔಷಧ ನೀಡಲಾಗುವುದು. ಎಲ್ಲರಂತೆ ಈ ಮಕ್ಕಳು ಬೆಳೆಯುವಂತಾಗಬೇಕು ಎಂದು ಡಾ|| ಶಿಗಿಹಳ್ಳಿ ಹೇಳಿದರು. ಸೃಷ್ಠಿ ಪೌಂಡಷೇನ್ ಅಧ್ಯಕ್ಷರಾದ ಸುಭಾಸ ಹುಲ್ಲಾಳ ಮಾತನಾಡಿ ಪ್ರತಿ ವರ್ಷವು ಸಮಾಜಿಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತೇವೆ. ಎಲ್ಲ ವರ್ಗದ ಮಕ್ಕಳು ಶೈಕ್ಷಣಿಕ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಡಾ|| ಶಿಗಿಹಳ್ಳಿ ದಂಪತಿಗಳು ತಮ್ಮ ಸೇವೆ ಮಾಡಲು ಮುಂದಾಗಿರುವುದು ಸಮಾಜದ ಕಳಕಳಿಯ ಭಾವನೆ.ಈ ರೀತಿಯಾಗಿ ಎಲ್ಲರಲ್ಲಿಯೂ ಸೇವಾ ಮನೋಭಾವನೆ ಮೂಡಿಸಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕವಿ ಸತೀಶ ಕುಲಕರ್ಣಿ.ಪ್ರದೀಪ ಮಳ್ಳೂರ.ಗುಡ್ಡಪ್ಪ ಭರಡಿ.ನಾಗರಾಜ ನಡುವಿನಮನಿ.ಹೊನ್ನಪ್ಪ ಅಗಸಿಬಾಗಿಲ. ಮಧು ಹಂದ್ರಾಳ ಅನೇಕರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap