ಸರ್ಕಾರದ ಒತ್ತುವರಿ ಭೂಮಿಯನ್ನು ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕರ ಸೂಚನೆ

 ಹರಿಹರ:

       ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಗೋಮಾಳ ಜಮೀನನ್ನು ಯಾವುದೇ ಮೂಲಾಜಿಗೂ ಒಳಗಾಗದೆ ವಾಪಾಸ್ ಪಡೆಯುವಂತೆ ಅಧಿಕಾರಿಗಳಿಗೆ ಶಾಸಕ ಎಸ್. ರಾಮಪ್ಪ ಖಡಕ್ ಸೂಚನೆ ನೀಡಿದರು.

      ನಗರದ ತಾಲೂಕ್ ಪಂಚಾಯಿತ್ ಸಭಾಂಗಣದಲ್ಲಿ ಸೋಮವಾರ ನೆಡಸಿದ ತಾಲುಕಿನ ಅಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಒಗಳಿಗೆ ಕರೆದಿದ್ದ ಸಭೆಯಲ್ಲಿ ಹಳ್ಳಿಗಳಲ್ಲಿ ಸ್ಮಶಾನದ ಭೂಮಿ, ಗೋಮಾಳ ಹಾಗೂ ಸರ್ಕಾರದ ಜಮೀನುಗಳು ಒತ್ತುವರಿಯಾಗುತ್ತಿದ್ದು, ಅತಂಹ ಪ್ರಕರಣಗಳಲ್ಲಿ ಒತ್ತುವರಿ ಮಾಡಿದವರು ಪ್ರಭಾವಶಾಲಿಗಳು ಆಗಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳಬೇಕೆಂದು ಅಧಿಕಾರಿಗಳಿಗೆ ಹೇಳಿದರು.

      ಪ್ರತಿಯೊಂದು ಗ್ರಾ.ಪಂ ಪಿಡಿಒಗಳೊಂದಿಗೆ ಪ್ರತೇಕವಾಗಿ ಚೆರ್ಚೆ ನೆಡಸಿದ ಶಾಸಕರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸ್ಮಶಾನಗಳು ಇವೆ ಇಲ್ಲವೇ ಎಂಬವುದರ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಸ್ಮಶಾನಗಳ ಆಭಿವೃದ್ಧಿ ಇಲ್ಲದೇ ಇರುವ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಗುರುತಿಸುವುದು ಅವಶ್ಯಕತೆ ಬಿದ್ದರೆ ಉಳ್ಳವರಿಂದ ಜಮೀನು ಖರಿದಿಸುವ ಬಗ್ಗೆ ಕೂಲಂಕುಶವಾಗಿ ಚೆರ್ಚಿಸಿ ಮಾಹಿತಿ ನೀಡುವಂತೆ ತಿಳಿಸಿದರು.

      ನಂತರ ಕೆಲವೂಂದು ಪಿಡಿಒಗಳು ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ, ರಸ್ತೆ, ವಿದ್ಯುತ್ ಮತ್ತು ಸ್ವಚ್ಚತೆಯ ಬಗ್ಗೆ ಶಾಸಕರಲ್ಲಿ ಮನವಿ ಮಾಡಿಕೊಂಡರು. ಕರ್ಲಹಳ್ಳಿ,ಹಾಗೂ ಸಾಲಕಟ್ಟೆ ಶಾಲೆಗಳ ದುರಸ್ತಿ ಮತ್ತು ಕಟ್ಟಡಕ್ಕೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಪೂರ್ಣವಾದ ವರದಿಯನ್ನು ತಯಾರಿಸಿ ಕಳುಹಿಸಲು ಪಿಡಿಒಗಳಿಗೆ ಆದೇಶಿಸಿದರು.

      ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂದರ್ಭದಲ್ಲಿ ಯೋಜನೆಗಳಲ್ಲಿ ಒಂದಾದ ಕೃಷಿ ಹೊಂಡದ ಬಗ್ಗೆ ರೈತರು ಒಲವು ತೊರಿಸುತ್ತಿಲ್ಲ ಆದರಿಂದ ಯೋಜನೆಯ ಗುರಿ ತಲುಪಲು ಸಾಧ್ಯವಾಗಿಲ್ಲ ಎಂಬ ಅಂಶಕ್ಕೆ ಬೇಸರಗೊಂಡ ಶಾಸಕರು ಈ ಯೋಜನೆಯ ಮಾಹಿತಿಯನ್ನು ರೈತರಿಗೆ ತಲುಪಿಸುವಲ್ಲಿ ನೀವು ವಿಫಲರಾಗಿದ್ದು ತಕ್ಷಣ ಈ ಯೋಜನೆಯ ಎಲ್ಲಾ ಮಾಹಿತಿಯನ್ನು ತಾಲೂಕಿನಾದ್ಯಂತ ರೈತರಿಗೆ ಗ್ರಾ.ಪಂ ಗಳ ಮೂಲಕ ತಿಳಿಸುವಂತೆ ಹೇಳಿದರು.

      ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಿರೂರು- ಸಮ್ಮಸಗಿ ರಸ್ತೆಯ ಕಾಮಗಾರಿ ಪೂರ್ಣಗೊಂಡಿಲ್ಲಾ ಹಾಗೂ ಶಿವಮೊಗ್ಗ- ಹರಪನಹಳ್ಳಿ ರಸ್ತೆಯಲ್ಲಿ ಅರ್ಧ ಅಡಿಗಳಷ್ಟು ಗುಂಡಿಗಳು ಕಾಣಿಸಿಕೊಂಡಿದ್ದು ಅವುಗಳ ಪ್ಯಾಚ್ ವರ್ಕ್ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆಯು ಮತ್ತು ಗ್ರಾಮಾಂತರ ಪ್ರದೇಶದ ರಸ್ತೆಗಳಿಗೂ ಆಧ್ಯತೆ ನೀಡುವಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

      ಕೊನೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸುವಂತೆ ಅವರಿಗೆ ಅನವಶ್ಯಕ ತೊಂದರೆ ಕೊಡದೆ,ವಿಳಂಬ ಮಾಡದೆ ಅವರನ್ನು ಸತಾಯಿಸದೆ ಸಮಯಕ್ಕೆ ಸರಿಯಾಗಿ ಅವರ ಕೆಲಸಗಳನ್ನು ಮಾಡಿಕೊಡಲು ತಿಳಿಸಿತ್ತಾ, ಅಧಿಕಾರಿಗಳು ಸರಿಯಾದ ಸಮಯಕ್ಕೆ ತಮ್ಮ ಕರ್ತವ್ಯಕ್ಕೆ ಹಾಜರ್ ಹಾಗುವಂತೆ ಕಿವಿಮಾತು ಹೇಳಿದರು.

      ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ ಕೆ. ನೀಲಗಿರಿಯಪ್ಪ, ಕಮಲಮ್ಮ, ಗ್ರೇಡ್ 2 ತಹಶೀಲ್ದಾರ್ ಆರ್.ವೆಂಕಟಮ್ಮ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ತೊಟಾಗಾರಿಕ ಅಧಿಕಾರಿ ರೇಖಾ, ಪಿಡಬ್ಲೂಡಿ ಈಶ್ವರಪ್ಪ, ಸಿಡಿಪಿಒ ರಾಮಲಿಂಗಪ್ಪ, ಶಾಸಕರ ಆಪ್ತ ಸಹಯಕರಾದ ಮುಲ್ಲಾ (ಬೆಂಗಳೂರು) ಹೆಚ್.ಜಿ ಹೇಮಂತ ಕುಮಾರ, ನಿಖಿಲ್ ಕೊಂಡಜ್ಜಿ, ತಿಪ್ಪೇಸ್ವಾಮಿ ಹಾಗೂ ತಾಲ್ಲೂಕಿ ಅಧಿಕಾರಿಗಳು ಪಿಡಿಒಗಳು ಉಪಸ್ಥಿತರಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap