“ ಸಹಕಾರ ಕ್ಷೇತ್ರಕ್ಕೆ ಶಿಕ್ಷಣ, ತರಬೇತಿ ಮಹತ್ವವಾದ್ದು.”- ಶ್ರೀ ಬಿ.ಜಿ.ವೆಂಕಟೇಗೌಡ

ತುಮಕೂರು

             ಜಿಲ್ಲಾ ಸಹಕಾರ ಯೂನಿಯನ್‍ನ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: 28-08-2018ನೇ ಮಂಗಳವಾರ ಬೆಳಗ್ಗೆ 12.00 ಗಂಟೆಗೆ ಏರ್ಪಡಿಸಿದ್ದ ಕಾರ್ಯಕ್ರಮದ ಉದ್ಘಾಟಿನೆಯನ್ನು ಸಭಾಧ್ಯಕ್ಷರಾದ ಶ್ರೀ ಬಿ.ಜಿ.ವೆಂಕಟೇಗೌಡರು ನೆರವೇರಿಸಿ ಮಾತನಾಡುತ್ತಾ, ಸಹಕಾರ ಕ್ಷೇತ್ರಕ್ಕೆ ಶಿಕ್ಷಣ, ತರಬೇತಿ ಮಹತ್ವವಾದ್ದು. ಜಿಲ್ಲೆಯ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳು ವಾರ್ಷಿಕ ಮಹಾಸಭೆಗೆ ಆಗಮಿಸಿರುವುದು ನಿಜಕ್ಕೂ ಬಹಳ ಸಂತೋಷ. ಆದ್ದರಿಂದ ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ ಬಯಸುತ್ತಾ, ತಾವು ತಿಳಿಸಿರುವ ಸಲಹೆ ಸಹಕಾರಕ್ಕೆ ಹಾಗೂ ಅಭಿಪ್ರಾಯಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತು ಕೊಟ್ಟು ಕಾರ್ಯನಿರ್ವಹಿಸುತ್ತೇವೆ. ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಶಿಕ್ಷಣ, ತರಬೇತಿ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಕೈಗೊಳ್ಳುವ ಏಕೈಕ ಸಂಸ್ಥೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ಬಿ.ಎನ್. ನಾಗರಾಜು, ನಿರ್ದೇಶಕರಾದ ಶ್ರೀ ಬಿ.ಸಿ. ಉಮೇಶ್, ಶ್ರೀ ಎಸ್ ಲಕ್ಷ್ಮಿನಾರಾಯಣ್, ಶ್ರೀ ಎಲ್. ರಾಮಣ್ಣ, ಶ್ರೀ ಹೆಚ್.ಕೆ. ರೇಣುಕಪ್ರಸಾದ್, ಶ್ರೀ ವಿ.ಪಿ. ಕಾಂತರಾಜು, ಶ್ರೀ ಹೆಚ್.ಸಿ. ರಾಜಶೇಖರಯ್ಯ, ಶ್ರೀ ಡಿ.ಪಿ. ರಾಜು, ಶ್ರೀ ವಿ. ಕೇಶವಮೂರ್ತಿ ಸಭೆಯಲ್ಲಿ ಹಾಜರಿದ್ದು, ಶುಭ ಹಾರೈಸಿದರು.

            ಪ್ರಾರಂಭದಲ್ಲಿ ಶ್ರೀ ಮಹಾಂತೇಶ ಹಿರೇಮಠರವರ ಪ್ರಾರ್ಥನೆಯೊಂದಿಗೆ ಶ್ರೀ ಎಸ್. ರಾಮಚಂದ್ರಯ್ಯ ನಿರ್ದೇಶಕರು ಸರ್ವರಿಗೂ ಸ್ವಾಗತ ಕೋರುತ್ತಾ, ಶ್ರೀ ಡಿ. ಮಹದೇವಯ್ಯ, ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ವಂದನಾರ್ಪಣೆಯೊಂದಿಗೆ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಸ್. ಐ.ಹೆಗಡೆ ಕಾರ್ಯಕ್ರಮದ ನಿಯೋಜನೆಯೊಂದಿಗೆ ಶ್ರೀ ಎಸ್.ಎಸ್. ಸಿದ್ದಪ್ಪಶೆಟ್ಟಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap