ಸಾಧನೆ ನಂತರ ಪುರಸ್ಕಾರ, ಸಾಧನೆಗಿಲ್ಲ ಸಹಾಯಹಸ್ತ

 ಹರಪನಹಳ್ಳಿ:

 

      ಸಾಧನೆಯ ನಂತರ ಕ್ರೀಡಾಪಟುಗಳಿಗೆ ಸನ್ಮಾನ ಪುರಸ್ಕಾರ ದೊರೆಯುತ್ತದೆ, ಸಾಧನೆ ಮಾಡಲು ಮಾತ್ರ ಸಹಾಯ ಹಸ್ತವಿಲ್ಲದಿರುವುದೇ ದುರಂತ ಎಂದು ಜಿಲ್ಲಾ ಕ್ರೀಡಾ ಮತ್ತು ಯುವಜನ ಯೋಜನಾಧಿಕಾರಿ ಶ್ರೀನಿವಾಸ್ ವಿಷಾಧ ವ್ಯಕ್ತಪಡಿಸಿದರು.

      ಪಟ್ಟಣದ ಕ್ರೀಡಾಂಗಣ ವೀಕ್ಷಣೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ. ಸಾಕಷ್ಟು ಕ್ರೀಡಾಪ್ರತಿಭೆಗಳಿವೆ ಆದರೆ ಅವರಿಗೆ ಸಾಧನೆ ಗುರಿಮುಟ್ಟಲು ಆರ್ಥಿಕ ಹೊರೆಯಿದೆ. ಸರ್ಕಾರ ಕ್ರೀಡಾ ಸಾಧನೆ ಮಾಡುವವರಿಗೆ ಸಹಾಯಹಸ್ತಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ. ಇದರಿಂದ ಸಾಕಷ್ಟು ಪ್ರತಿಭೆಗಳು ಅನಾವರಣಗೊಳ್ಳಲಿವೆ. ಇಲ್ಲವಾದರೆ ಹಣದ ಮುಗ್ಗಟ್ಟಿನಿಂದ ಎಲೆಮರೆ ಕಾಯಿಯಾಗಿಯೇ ಉಳಿದು ಹೋಗುವ ಸಾದ್ಯತೆಗಳೇ ಹೆಚ್ಚು ಎಂದರು.

      ತಾಲೂಕು ಕ್ರೀಡಾಂಗಣಕ್ಕಾಗಿ ಕಳೆದ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಬಿಡುಗಡೆಯಾಗಿದ್ದ 6 ಲಕ್ಷ ಹಣದಲ್ಲಿ ಕೌಕ್ಯಾಚರ್, ಕುಡಿವನೀರು ಹಾಗೂ ದುರಸ್ಥಿ ಕಾರ್ಯಕ್ರಮಗಳಿಗೆ ವ್ಯಹಿಸಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕಾಗಿ 1.20 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಪ್ರಸ್ತುತ ಅಧಿಕ ಅನುದಾನದ ಅವಶ್ಯಕತೆಯಿದ್ದು ಒಳಾಂಗಣ ಕ್ರೀಡಾಂಗಣದ ಕ್ರಿಯಾಯೋಜನೆಗಾಗಿ ಲ್ಯಾಂಡ್‍ಆರ್ಮಿ ಇಲಾಖೆಗೆ ಯೋಜನೆ ತಯಾರಿಸಿ ನೀಡಲು ಸೂಚಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದರು.

      ತಾಲೂಕಿನಲ್ಲಿ ಉತ್ತಮ ಕ್ರೀಡಾಪಟುಗಳು ತಯಾರಿಯಲ್ಲಿದ್ದಾರೆ. ಖೋ ಖೋ ದಲ್ಲಿ ತಾಲೂಕು ಹೆಸರು ಪಡೆದಿದ್ದು ಈ ಹಿಂದೆ ಸರ್ಕಾರ ಸಹಸ್ರ ಕ್ರೀಡಾಯೋಜನೆ ಯಲ್ಲಿ ತಾಲೂಕಿನ 23 ಖೋ ಖೋ ಕ್ರೀಡಾಪಟುಗಳು ಸೌಲಭ್ಯದ ಲಾಭ ಪಡೆದಿರುವುದು ವಿಶೇಷವಾಗಿದೆ. ಪ್ರತೀ ಕ್ರೀಡಾಂಗಣದಲ್ಲೂ ತರಬೇತುದಾರರ ಕೊರತೆಯಿಂದ ಕ್ರೀಡಾಪಟುಗಳ ತಯಾರಿಯಲ್ಲಿ ತೊಂದರೆಯಾಗಿದೆ ಈ ಬಗ್ಗೆಯೂ ಮನವಿಯನ್ನು ಸಲ್ಲಿಸಿದ್ದೇವೆ. ಜಿಲ್ಲೆಯ ಚನ್ನಗಿರಿ ಹಾಗೂ ಹರಪನಹಳ್ಳಿ ತಾಲೂಕಿಗೆ ಒಳಾಂಗಣ ಕ್ರೀಡಾಂಗಣದ ಅವಶ್ಯವಿದೆ.

      ಪಟ್ಟಣದಿಂದ ದೂರವಿದ್ದ ಜಗಳೂರಿನ ಕ್ರೀಡಾಂಗಣ ಇಂದು 22 ಲಕ್ಷ ಅನುದಾನದ ಜಿಮ್ ಹಾಗೂ 3 ಲಕ್ಷ ಅನುದಾನದಲ್ಲಿ ಮೈದಾನದ ಅಭಿವೃದ್ದಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ಜರುಗುತ್ತಿರುವುದರಿಂದ ಬಹುದಿನಗಳ ನಂತರ ಉತ್ತಮ ಸ್ಥತಿಯಲ್ಲಿ ಬಳಕೆಯಾಗುತ್ತಿದೆ ಎಂದರು.
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap