ಸುಕ್ಷೇತ್ರ ಕೆರೆಗೋಡಿ-ರಂಗಾಪುರ ವಿದ್ಯಾಸಂಸ್ಥೆಗಳಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ತಿಪಟೂರು 

            ತಾಲ್ಲೂಕಿನ ಎಸ್.ಪಿ.ಎಸ್ ವಿದ್ಯಾಂಸ್ಥೆ ರಂಗಾಪುರದಲ್ಲಿ ಸುಕ್ಷೇತ್ರದ ಪರಮಪೂಜ್ಯ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಗಳು ಧ್ವಜಾರೋಹಣಮಾಡಿ ಸ್ವಾತಂತ್ರ ಮಾತನಾಡಿದರ ಅವರು ದೇಶದ ಪ್ರಗತಿಗೆ ಶ್ರಮಿಸುವುದು ಪ್ರತಿಯೊಬ್ಬ ಭಾರತೀಯ ಆದ್ಯಕರ್ತವ್ಯವಾಗಿದೆ ಎಂದರು.

            ಸಮಾರಂಭದಲ್ಲಿ ಮಾತನಾಡಿದ ಕೆ.ಎಂ.ಪರಮೇಶ್ವರಯ್ಯನವರು ನಾವು ಸ್ವಾತಂತ್ರ್ಯಗಳಿಸಿ ಇಂದೆ 72ನೇ ವರ್ಷಗಳಾಗಿದೆ. ಆಗಿನಿಂದ ನಮ್ಮ ದೇಶವು ಅಪಾರವಾದ ಅಭಿವೃದ್ಧಿಯನ್ನು ಸಾಧಿಸಿದ್ದರೂ ಸಾಮಾಜಿಕ ಅನಿಷ್ಟಗಳಾದ ಭ್ರಷ್ಟಾಚಾರ, ಕೋಮುವಾದ, ಧಾರ್ಮಿಕ ಅಸಹಿಷ್ಣುತೆ, ಕ್ಯಾನ್ಸರ್ ನಂತೆ ಹೆಚ್ಚುತ್ತಿದ್ದು ಇವುಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಸಮಾಜದ ಎಲ್ಲಾ ವರ್ಗದ ಹಾಗೂ ವೃತ್ತಿಯ ಜನರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಗಾಂಧೀಜಿಯವರ ಕುಲಕಸುಬು ಆದಾರಿತ ಶಿಕ್ಷಣವನ್ನು ಪಾಲಿಸಿದರೆ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರುವುದಿಲ್ಲ ಎಂದರು.

             ಸಮಾರಂಭದಲ್ಲಿ ಶಾಲಾ ಮಕ್ಕಳ ಕವಾಯಿತು, ಸಾಂಸ್ಕøತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

              ಕಾರ್ಯಕ್ರಮದಲ್ಲಿ ಮಠದ ಆಡಳಿತಾಧಿಕಾರಿ ಎನ್.ಭದ್ರಪ್ಪನವರು ಅಧ್ಯಕ್ಷತೆಯನ್ನು ವಹಿಸಿದ್ದರು, ಮಠದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೆಚ್.ಬಿ.ದಿವಾಕರ್, ಜಿ.ಪಂ.ಸದಸ್ಯರಾದ ಭಾಗ್ಯಮ್ಮ ಗೋವಿಂದಪ್ಪ, ಸಂಸ್ಥೆಯ ಎಲ್ಲಾ ಶಿಕ್ಷಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ   

Recent Articles

spot_img

Related Stories

Share via
Copy link
Powered by Social Snap