ಸೆ.10ರ ಭಾರತ್ ಬಂದ್‍ಗೆ ಸಾರ್ವಜನಿಕರು ಬೆಂಬಲಿಸಲು ಕಾಂಗ್ರೆಸ್ ಮನವಿ

ತುಮಕೂರು:

            ಪೆಟ್ರೋಲ್,ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ಧೋರಣೆ ನಡೆ ವಿರುದ್ಧ ಸೆ. 10 ರಂದು ಹಮ್ಮಿಕೊಂಡಿರುವ ಭಾರತ್ ಬಂದ್‍ಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮಾರಯ್ಯ ತಿಳಿಸಿದ್ದಾರೆ.
           ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಎನ್‍ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ತೈಲ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಪ್ರಧಾನಿ ಮೋದಿ ಮಧ್ಯಮ ಹಾಗೂ ಬಡವರ್ಗದ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಬಂದಿದ್ದಾರೆ.ಸದಾ ಕಾರ್ಪೊರೇಟ್ ಸಂಸ್ಥೆಗಳು,ಶ್ರೀಮಂತರ ಪರವಾದ ನಿಲುವುಗಳನ್ನು ತಾಳುವ ಪ್ರಧಾನಿ ಮೋದಿಯ ಧೋರಣೆಯಿಂದ ಬಡವರು ಜೀವನ ನಡೆಸಲಾಗದೆ ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.
ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲದ ಬೆಲೆ 110 ಡಾಲರ್ ಇದ್ದಾಗ,ಪೆಟ್ರೋಲ್ ಬೆಲೆ 68 ರೂ. ಇತ್ತು. ಆದರೆ ಈಗ ಕಚ್ಚಾ ತೈಲದ ಬೆಲೆ ಕುಸಿದಿದೆ,ಆದರೆ ಪೆಟ್ರೋಲ್ ಬೆಲೆಮಾತ್ರ ಗಗನದತ್ತ ಮುಖಮಾಡಿದೆ.ಇದಕ್ಕೆ ಪ್ರಧಾನಿ ಮೋದಿಯವರ ಧೋರಣೆಯೇ ಪ್ರಮುಖ ಕಾರಣ.ಕೇಂದ್ರ ಸರಕಾರದ ಜನವಿರೋಧಿ ಧೋರಣೆಯಿಂದಾಗಿ ಜನಸಾಮಾನ್ಯರಿಗೆ ಭಾರೀ ಹೊಡೆತ ಬಿದ್ದಿದೆ.ಸೆ. 10 ರಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಜತೆಗೆ ಶಾಲಾ-ಕಾಲೇಜುಗಳಿಗೆ ರಜೆ ಹಾಗೂ ಬಸ್ ಸಂಚಾರ ಸಂಪೂರ್ಣ ಸ್ತಬ್ದವಾಗಲಿದೆ ಎಂದರು.
              ಕೇಂದ್ರ ಸರಕಾರ ಒಂದೆಡೆ ಜನಸಾಮಾನ್ಯರು ಬಳಸುವ ಪೆಟ್ರೋಲ್, ಡಿಸೇಲ್ ದರವನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದರೂ , ಶ್ರೀಮಂತರು ಒಡಾಡುವ ವಿಮಾನಕ್ಕೆ ಬಳಸುವ ಇಂದನದ ಬೆಲೆಯನ್ನು ಕಡಿಮೆ ಮಾಡಿದೆ.ಜನ ಸಾಮಾನ್ಯರ ನೋವಿಗೆ ಸ್ಪಂದಿಸುವ ದೃಷ್ಟಿಯಿಂದ ಕಾಂಗ್ರೆಸ್ ಈ ಬಂದ್‍ಗೆ ಬೆಂಬಲ ಸೂಚಿಸುತ್ತಿದೆ.ಸೆ.10 ಭಾರತ್ ಬಂದ್‍ಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬೆಂಬಲ ವ್ಯಕ್ತಪಡಿಸುವ ಮೂಲಕ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ಎನ್.ಡಿ.ಎ.ದ ಹಗರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, ಇದರ ವಿರುದ್ದ ಸೆ.15 ರಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿವಿಧ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಷಫಿಅಹಮದ್,ಮುರುಳೀಧರ ಹಾಲಪ್ಪ, ಜಿ.ಎಸ್. ಸೋಮಣ್ಣ,ನರಸೀಯಪ್ಪ, ಲಿಂಗರಾಜು, ತು.ಬಿ. ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link
Powered by Social Snap