ಸೆ.22ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ತುರುವೇಕೆರೆ:

      ತಾಲ್ಲೂಕಿನ ಎಸ್ಸಿ,ಎಸ್ಟಿ ಸಮುದಾಯ ಹಾಗೂ ನೌಕರರ ಸಂಘದ ವತಿಯಿಂದ 22 ರ ಶನಿವಾರದಂದು ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಹಾಗೂ ನೂತನ ಶಾಸಕರು, ಸಚಿವರು ಹಾಗೂ ಸಂಸದರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎ.ಪಿ.ಎಂ.ಸಿ ನಿರ್ದೇಶಕ ವಿ.ಟಿ.ವೆಂಕಟರಾಮಯ್ಯ ತಿಳಿಸಿದ್ದಾರೆ.

      ಈ ಕುರಿತು ಮಾಹಿತಿ ನೀಡಿದ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮೈಸೂರಿನ ಉರಿಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬೋದಿದತ್ತ್ ಪಂತೇಜಿ ರವರು ವಹಿಸಲಿದ್ದಾರೆ. ಉದ್ಗಾಟನೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಎನ್.ಮಹೇಶ್ರವರು ನೆರವೇರಿಸಲಿದ್ದಾರೆ.

       ಜಗಜೀವನರಾಮ್ ಭಾವಚಿತ್ರವನ್ನು ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ನವರು ಹಾಗೂ ವಾಲ್ಮೀಕಿ ಭಾವಚಿತ್ರವನ್ನು ಸಣ್ಣ ಕೈಗಾರಿಕಾ ಸಚಿವರಾದ ಶ್ರೀನಿವಾಸ್‍ರವರು ಅನಾವರಣಗೊಳಿಸಲಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕರಾದ ಮಸಾಲ ಜಯರಾಮ್ ಅಭಿನಂದಿಸಲಿದ್ದಾರೆ ಎಂದರು.

       ಇದೇ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ಸನ್ಮಾನಿಸಲಿದ್ದಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾರದಾನರಸಿಂಹಮೂರ್ತಿ, ಜಿ.ಪಂ.ಸದಸ್ಯರಾದ ರೇಣುಕಾಕೃಷ್ಣಮೂರ್ತಿ, ಜಯಲಕ್ಷ್ಮಿಜಯರಾಮ್, ರಕ್ಷಿತ್ ಶಂಕರೇಗೌಡ, ಭಾಗ್ಯಮ್ಮ ರಮೇಶ್‍ಗೌಡ, ತಾ.ಪಂ. ಅಧ್ಯಕ್ಷೆ ನಾಗರತ್ನರವೀಂದ್ರ, ಪ.ಪಂ. ಅಧ್ಯಕ್ಷ ಲಕ್ಷ್ಮೀನರಸಿಂಹ, ಬಿ.ಎಸ್.ಪಿ.ಜಿಲ್ಲಾಧ್ಯಕ್ಷ ದಾಸಪ್ಪ, ಸೇರಿದಂತೆ ಅನೇಕ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ, ಕಾರ್ಯಕ್ರಮ ಕುರಿತು ಕಾಂಗ್ರೇಸ್ ಮುಖಂಡ ಬಿ.ಆರ್.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಮಸ್ತ ದಲಿತ ಬಂಧುಗಳು, ದಲಿತ ಪರ ಹೋರಾಟಗಾರರು ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.

        ಈ ಸಂದರ್ಭದಲಿ ತಾ.ಪಂ. ಸದಸ್ಯ ಡಿ.ಸಿ.ಕುಮಾರ್, ಮುಖಂಡರಾದ ರವೀಂದ್ರ, ಶಿವನಂಜಪ್ಪ, ರಾಯಸಂದ್ರ ಬೋರಪ್ಪ, ಗಿರೀಶ್, ಚಿದಾನಂದ್ ಮತ್ತಿತರಿದ್ದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap