ಸೊಸೆಯ ಕಣ್ಣೀರ ಕತೆ

      ಚಳ್ಳಕೆರೆ ಎಂಬ ಹಳ್ಳಿಯಲ್ಲಿ ಒಂದು ಮುದ್ದಿನ ಹುಡುಗಿ ಆಡುತ್ತಾ, ಕುಣಿಯುತ್ತಾ ವಿದ್ಯಾಭ್ಯಾಸ ಪಡೆಯುತ್ತಾ ಇರುತ್ತಾಳೆ. ಅದೇ ಊರಿನಿಂದ 10 ಕಿ.ಮೀ ದೂರದಲ್ಲಿ ಮಲ್ಲನಹಳ್ಳಿ ಎಂಬ ಊರಿರುತ್ತದೆ. ಆ ಊರಿನಲ್ಲಿ ಒಬ್ಬ ಅಗರ್ಭ ಸ್ತ್ರೀ ಇರುತ್ತಾಳೆ. ಅವಳ ಮಗ ಕರಿಯಾ ಎಂಬ ಹುಡುಗ ಇರುತ್ತಾನೆ. ಕರಿಯನ ತಾಯಿಗೆ ಶ್ರೀಮಂತಿಕೆ ಇರುವುದರಿಂದ ಅವಳಿಗೆ ಸೊಕ್ಕು, ಗರ್ವ, ಅಹಂಕಾರ ತುಂಬಾ ಇರುತ್ತದೆ.Image result for ಅತ್ತೆ-ಸೊಸೆ ಕಥೆ

     ಆ ಊರಿನಲ್ಲಿ ಕರಿಯಾ ಮತ್ತು ಅವಳ ತಾಯಿಯ ಮಾತನ್ನು ಯಾರೂ ಮೀರುವಂತಿರಲಿಲ್ಲ! ಆ ಊರಿನಲ್ಲಿ ಅವಳದ್ದೇ ಆಳ್ವಿಕೆ., ತನ್ನ ಮಗ ಕರಿಯಾ ವಯಸ್ಸಿಗೆ ಬಂದಿರುತ್ತಾನೆ. ಅವನಿಗೆ ಮದುವೆ ಮಾಡಬೇಕೆಂಬ ಹುಚ್ಚು ಕಲ್ಪನೆಯಿಂದ ಮದುವೆ ಮಾಡಲು ನಿರ್ಧರಿಸಿ ಆ ಊರಿನಲ್ಲಿ ಡಂಗೂರ ಬಾರಿಸುತ್ತಾರೆ. ಅಲ್ಲಿನ ಹೆಣ್ಣು ಮಕ್ಕಳು ಆ ರಾಣಿಗೆ ಇಷ್ಟವಾಗಲಿಲ್ಲ. ಆದರೂ ಬಿಡದೆ ತಮ್ಮ ಊರಿನಿಂದ 10 ಕಿಮೀ ದೂರದಲ್ಲಿರುವ ಚಳ್ಳಕೆರೆ ಎಂಬ ಹಳ್ಳಿಗೆ ತನ್ನ ಸೇವಕನನ್ನು ಕರೆದುಕೊಂಡು ಕುದುರೆ ಗಾಡಿ ಮೇಲೆ ಏರಿ ಹೋಗುತ್ತಾರೆ. ಆ ಊರಿನಲ್ಲಿ ಕನ್ಯೆಯರು ಮತ್ತು ಇತರೆ ಹುಡುಗಿಯರು ಪಂಚಾಯಿತಿ ಕಟ್ಟೆ ಮುಂದೆ ಬಂದು ನಿಲ್ಲಬೇಕೆಂದು ಡಂಗುರ ಬಾರಿಸುತ್ತಾರೆ. ಹೇಳಿದಂತೆ ಎಲ್ಲರೂ ಪಂಚಾಯಿತಿ ಕಟ್ಟೆ ಮುಂದೆ ಬಂದು ನಿಲ್ಲುತ್ತಾರೆ. ಕೊನೆಗೆ ಒಬ್ಬ ಚಂದದ ಎಳೆವಯಸ್ಸಿನ ಹುಡುಗಿಯನ್ನು ಗುರುತಿಸಿ ಅವಳನ್ನು ತನ್ನ ಮಗನೊಂದಿಗೆ ಮದುವೆ ಮಾಡುವುದಾಗಿ ಹುಡುಗಿಯ ಪೋಷಕರಿಗೆ ತಿಳಿಸುತ್ತಾಳೆ. ಆ ಹುಡುಗಿಯ ತಂದೆ ತಾಯಿಗೆ ಏನೂ ತೋಚದೆ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಒಪ್ಪಿಗೆ ವ್ಯಕ್ತ ಪಡಿಸುತ್ತಾರೆ. ಅತ್ತೆ ಮಾವ, ಗಂಡ ಎಂಬ ಯಾವುದೇ ಪರಿಕಲ್ಪನೆ ಇರದ ಹುಡುಗಿಗೆ ಮದುವೆ ಮಾಡಿಸಿ ಬಿಟ್ಟೆವಲ್ಲಾ ಎಂಬ ಕೊರಗಿನಿಂದ ತಂದೆ ತಾಯಿ ದಿನಾಲು ಕಣ್ಣೀರಿಡುತ್ತಾರೆ. ಈ ಕಡೆ ಏನೂ ತೋಚದ ಹುಡುಗಿಯು ತನ್ನ ತಂದೆ ತಾಯಿಯನ್ನೇ ಕಳವಳಿಸುತ್ತಾ ಕಾಲ ಕಳೆಯುತ್ತಿರುತ್ತಾಳೆ. ಗರ್ವ, ಅಹಂಕಾರದಿಂದ ತುಂಬಿದ ಅತ್ತೆಯು, ಸೊಸೆಯಾದವಳು ತನ್ನ ಆಸ್ತಿ, ಸಂಸಾರ, ಸಂಪತ್ತಿನ ಮೇಲೆ ದರ್ಬಾರು ಆಳ್ವಿಕೆ ಮಾಡಬಹುದು ಎಂಬ ಕಲ್ಪನೆಯಿಂದ ಮತ್ತು ಅವಳ ಅತ್ತೆಯ ಗರ್ವ ಮುರಿಯಬೇಕು ಎಂಬ ಗುರಿಯಿಂದ ಹೇಳಲಾಗದ ಅನೇಕ ಕಷ್ಟಗಳನ್ನು ಹೇಳಲು ಪ್ರಾರಂಭಿಸುತ್ತಾಳೆ.

      ಪದೆ ಪದೆ ಬಂದು ಸೊಸೆಗೆ ನಿನ್ನ ತಂದೆ ತಾಯಿಯರು ತಿನ್ನಲು ಊಟ ಇರದೆ ಇದ್ದವರು. ಬೀದಿ ನಾಯಿಗಳು ಎಂಬ ನುಡಿಗಳಿಂದ ಹೀಯಾಳಿಸಿ ನಿಂದಿಸಿರುತ್ತಾಳೆ. ಹೀಗೆ ಕಾಲ ಕಳೆದು ಹೋದಂತೆ ಒಂದು ದಿನ ಅತ್ತೆಯು ಆ ಹುಡುಗಿಗೆ ಒಂದು ಮಣ್ಣಿನ ಮಡಕೆಯನ್ನು ಕೊಟ್ಟು ಅದಕ್ಕೆ ಐದು ತೂತುಗಳನ್ನು ಮಾಡಿ ಊರಿನ ಹೊರಗಿರುವ ಹಳ್ಳದಿಂದ ನೀರನ್ನು ತರಬೇಕೆಂದು ತಿಳಿಸುತ್ತಾಳೆ. ಸೊಸೆಯು ಹಳ್ಳದ ದಂಡೆಯ ಮೇಲೆ ಕುಳಿತುಕೊಂಡು ಅಳುತ್ತಾ, ಚಿಂತಿಸುತ್ತಾ ಹಳ್ಳದಲ್ಲಿರುವ ನೀರನ್ನು ತುಂಬುವುದು ಹೇಗೆ ಎಂದು ಯೋಚಿಸಿ ನಂತರ ಹಳ್ಳದಲ್ಲಿ ಇಳಿದು ನೀರನ್ನು ತುಂಬಲು ಪ್ರಯತ್ನಿಸುತ್ತಾಳೆ. ಆದರೆ ನೀರು ನಿಲ್ಲುವುದಿಲ್ಲ. ಇವಳ ಕಷ್ಟವನ್ನು ನೀಡಿ ನೀರಿನಲ್ಲಿರುವ ಜಲಚರಗಳು, ಮರಗಿಡಗಳು, ಪಕ್ಷಿಗಳು ಕರುಣೆಯನ್ನು ವ್ಯಕ್ತ ಪಡಿಸುತ್ತವೆ. ಸೊಸೆಯು ನೀರು ತುಂಬುವಾಗ ಐದು ಕಪ್ಪೆಗಳು ಬಂದು ಆ ಮಡಕೆಯ ಮೇಲಿರುವ ಐದು ತೂತುಗಳನ್ನು ಆಕ್ರಮಿಸಿಕೊಳ್ಳುತ್ತವೆ. ಸೊಸೆಯು ದೇವರನ್ನು ನೆನೆಯುತ್ತಾ ಮಡಕೆಯನ್ನು ಮನೆಗೆ ಸಾಗಿಸುತ್ತಾಳೆ. ಅತ್ತೆಯು ಸೊಸೆಗೆ ಒಂದೊಂದು ದಿನ ಒಂದೊಂದು ಕಷ್ಟವನ್ನು ಕೊಡುತ್ತಾ ಬರುತ್ತಿರುತ್ತಾಳೆ. ಒಂದು ಚೀಲ ಭತ್ತವನ್ನು ಕೊಟ್ಟು ಅದರ ಸಿಪ್ಪೆಯನ್ನು ನೀನೊಬ್ಬಳೇ ಯಾರ ಸಹಾಯವಿಲ್ಲದೆ ತೆಗೆದುಕೊಂಡು ಬಾ ಎಂದು ಹೇಳುತ್ತಾಳೆ. ನೀನು ಅದನ್ನು ತೆಗೆದುಕೊಂಡು ಬರದೆ ಇದ್ದರೆ ನಿನ್ನನ್ನು ಮನೆಯೊಳಕ್ಕೆ ಸೇರಿಸುವುದಿಲ್ಲ ಎಂದು ಹೇಳುತ್ತಾಳೆ ಅತ್ತೆ. ಸೊಸೆಯು ದೇವರನ್ನು ನೆನೆಯುತ್ತಾ, ತಂದೆಯೇ ನನಗೇ ಯಾಕಪ್ಪಾ ಈ ಶಿಕ್ಷೆ ಎಂದು ನೊಂದುಕೊಳ್ಳುತ್ತಿರುವಾಗ ಆಕೆಯ ಕಷ್ಟಗಳನ್ನು ನೋಡಿದ ಹಕ್ಕಿಗಳು ಕರುಣೆ ತೋರಿ ಭತ್ತದ ಸಿಪ್ಪೆಯನ್ನು ಸುಲಿಯುತ್ತವೆ. ನಂತರ ಸೊಸೆ ಮೂಟೆಯನ್ನು ತೆಗೆದುಕೊಂಡು ಅತ್ತೆಯ ಮನೆಗೆ ಹೋಗುತ್ತಾಳೆ. ಪ್ರತಿ ಸಲ ಕಷ್ಟ ಕೊಟ್ಟಾಗಲು ಸೊಸೆಯು ಪಾರಾಗಿ ಬರುವುದನ್ನು ಕಂಡು ಅತ್ತೆಯು ಆಶ್ಚರ್ಯದಿಂದ ನೋಡುತ್ತಾಳೆ. ಒಂದು ದಿನ ಅತ್ತೆಯು ಸೊಸೆಗೆ ಕಾಡಿಗೆ ಹೋಗಿ ಕಟ್ಟಿಗೆಯನ್ನು ಆರಿಸಿಕೊಂಡು ಬಾ ಆದರೆ ನಾನು ಹಗ್ಗವನ್ನು ಕೊಡುವುದಿಲ್ಲ. ನೀನು ಹೀಗೆ ತರಬೇಕು ಎಂದು ಆಜ್ಞೆಯನ್ನು ವಿಧಿಸುತ್ತಾಳೆ.

Image result for ಅತ್ತೆ-ಸೊಸೆ ಕಥೆ

      ಅತ್ತೆಯ ಮಾತನ್ನು ಮೀರದ ಸೊಸೆ ಕಾಡಿಗೆ ಹೋಗಿ ಅಲ್ಲಿರುವ ಒಣ ಕಟ್ಟಿಗೆಯನ್ನು ಆರಿಸಿಕೊಂಡು ಬಂಡಲು ಮಾಡಿಕೊಂಡು ಇದನ್ನು ಹೇಗೆ ನಾನು ಹಗ್ಗವಿಲ್ಲದೆ ಕಟ್ಟಲು ಸಾಧ್ಯ. ಓ ದೇವರೇ ನೀನೇ ಬಂದು ದಾರಿ ತೋರು ಎಂದು ಬೇಡಿಕೊಂಡಾಗ ಒಂದು ನಾಗರಹಾವು ಬಂದು ಕಟ್ಟಿಗೆಯ ಬಂಡಲನ್ನು ಸುತ್ತಿಕೊಳ್ಳುತ್ತದೆ. ಮತ್ತೆ ದೇವರನ್ನು ನೆನೆದು ಕಟ್ಟಿಗೆಯನ್ನು ಎತ್ತಿಕೊಂಡು ಮನೆಗೆ ಬಂದು ಇಳಿಸುತ್ತಾಳೆ. ಇಳಿಸಿದ ತಕ್ಷಣ ಹಾವು ಬಿಟ್ಟು ಹೋಗುತ್ತದೆ. ನಂತರ ಅತ್ತೆಯು ಬಂದು ನೋಡಿ ಸೊಸೆಗೆ ಏನು ಹೇಳದೆ ಇದೆಂತಾ ಚಮತ್ಕಾರ ಇರಬಹುದು. ತೂತು ಇದ್ದ ಕೊಡದಿಂದ ನೀರು ತರುವುದು. ಯಾರ ಸಹಾಯವಿಲ್ಲದೆ ಅಕ್ಕಿಯ ಮೇಲಿನ ಸಿಪ್ಪೆಯನ್ನು ತೆಗೆಯುವುದು. ಹಗ್ಗ ಇಲ್ಲದೆಯೇ ಕಟ್ಟಿಗೆಯನ್ನು ತರುವುದು ಇದೆಲ್ಲಾ ಹೇಗೆ ಸಾಧ್ಯವೆಂದು ಯೋಚಿಸುತ್ತಾ ಮರುದಿನ ಸೊಸೆಗೆ ಒಂದು ಆಜ್ಞೆ ಹೊರಡಿಸುತ್ತಾಳೆ. ನಾಳೆ ಒಂದು ದಿನ ಈ ಮನೆಯಲ್ಲಿ ಊಟ ಮಾಡುವಂತಿಲ್ಲ ಮತ್ತು ರಾತ್ರಿಯೂ ನೀನು ಈ ಮನೆಯಲ್ಲಿ ಮಲಗಿಕೊಳ್ಳುವಂತಿಲ್ಲ ಎಂದು ಹೇಳುತ್ತಾಳೆ. ಅದೇ ರೀತಿಯಾಗಿ ಸೊಸೆಯು ತನ್ನ ಅತ್ತೆಯ ಮಾತನ್ನು ಮೀರದೆ ಕಾಡಿಗೆ ಹೊರಟು ಹೋಗುತ್ತಾಳೆ. ಕಾಡಿನಲ್ಲಿ ಹಳ್ಳದ ನೀರು ಕುಡಿದು ವಿಶ್ರಾಂತಿ ಪಡೆಯುತ್ತಾ ಹಸಿವಾದಾಗ ಒಂದು ತೆಂಗಿನ ಮರದ ಕೆಳಗೆ ಕುಳಿತು ಯೋಚಿಸುತ್ತಿರುವಾಗ ತೆಂಗಿನ ಮರದ ಮೇಲಿರುವ ಮಂಗನು ಬಂದು ಎಳೆನೀರಿನ ತೆಂಗಿನಕಾಯಿಯನ್ನು ಬೀಳಿಸುತ್ತಾನೆ. ಇದರಿಂದ ತಂದೆ ಆಂಜನೇಯನನ್ನು ನೆನೆದು ಅದನ್ನು ಸೇವಿಸಿ ಮಲಗಿಕೊಳ್ಳುತ್ತಾಳೆ. ಇಡೀ ರಾತ್ರಿ ತಂದೆ ತಾಯಿಯರ ಚಿಂತೆಯಲ್ಲಿ ಚಂದ್ರದೇವನ ಆಶ್ರಯದಲ್ಲಿ ಕಳೆಯುತ್ತಾಳೆ. ನಂತರ ಸೂರ್ಯನ ಬೆಳಕಿನ ಕಿರಣಗಳು ಬೀಳುತ್ತಿದ್ದಂತೆಯೇ ತನ್ನ ಅತ್ತೆಯ ಮನೆಯನ್ನು ಸೇರುತ್ತಾಳೆ. ಈ ರೀತಿಯ ಚಮತ್ಕಾರ ಹೇಗೆ ಸಾಧ್ಯ ಎಂದು, ನಾನೊಮ್ಮೆ ನೋಡಬೇಕಂತ ತನ್ನ ಸೇವಕನನ್ನು ಕರೆದು ಕುದುರೆ ರಥವನ್ನು ಏರಿ ಹೋಗುತ್ತಾಳೆ. ಕಾಡಿನ ಮಧ್ಯೆಯಲ್ಲಿ ಹೋಗುತ್ತಿರುವಾಗ ಸೇವಕನಿಗೆ ಮೊದಲಿನಿಂದಲೂ ಎದೆ ನೋವು ಕಾಡುತ್ತಿರುತ್ತದೆ. ಇದರಿಂದಾಗಿ ಮಧ್ಯ ದಾರಿಯಲ್ಲಿ ಸೇವಕನು ಇಹಲೋಕ ತ್ಯಜಿಸುತ್ತಾನೆ. ಸೇವಕನಿಲ್ಲದೆ ಕುದುರೆಗಳು ಓಡಲು ಪ್ರಾರಂಭಿಸಿ ಅತ್ತೆಯನ್ನು ಕೆಳ ಬೀಳಿಸಿ ಹೋಗುತ್ತವೆ. ಆಗ ಅತ್ತೆಯು ಗಾಬರಿಯಿಂದ ಓ ದೇವರೇ ಎಂದು ಯೋಚಿಸುತ್ತಾ ತನ್ನ ಮನೆಯ ದಾರಿಯನ್ನು ಹುಡುಕಿಕೊಂಡು ಬರುತ್ತಾ ಇರುವಾಗ ತುಂಬಾ ಆಯಾಸದಿಂದ ನೀರು ಕುಡಿಯಲು ಹಳ್ಳಕ್ಕೆ ಹೋಗುತ್ತಾಳೆ. ಅಲ್ಲಿಯ ಜಲಚರ ಜೀವಿಯಾದ ಕಪ್ಪೆಯು ನಿನ್ನ ಸೊಸೆಗೆ ನೀರು ತುಂಬಿಕೊಂಡು ಬಾ ಎಂದಾಗ ನಾವೆ ಅವಳಿಗೆ ಸಹಾಯ ಮಾಡಿದ್ದು, ಅದೇ ಸ್ಥಿತಿ ನಿನಗೆ ಬಂದಿದೆ ಎಂದು ಹೇಳಿದಾಗ ಅತ್ತೆಯು ನಾನೆಂತಹ ತಪ್ಪು ಮಾಡಿದೆನೆಂದು ಕೊರಗುತ್ತಾಳೆ. ಮುಂದೆ ಹೋಗಿ ಅಳುತ್ತಾ ನಡೆಯುತ್ತಿರುತ್ತಾಳೆ. ಅಲ್ಲಿ ಬಾರೆಹಣ್ಣಿನ ಗಿಡಗಳು ಕಾಣುತ್ತವೆ. ತಿನ್ನಲು ಎಂದು ಹೋದಾಗ ಅಲ್ಲಿರುವ ಹಕ್ಕಿಗಳ ಗುಂಪು ಮತ್ತು ನಾಗಸರ್ಪವು ಅತ್ತೆಯನ್ನು ಕುರಿತು ಹೇಳುತ್ತವೆ. ನೀನು ಅಕ್ಕಿಯ ಮೇಲಿನ ಸಿಪ್ಪೆಯನ್ನು ತೆಗೆದುಕೊಂಡು ಬಾ ಎಂದಾಗ ನಾವೇ ನಿನ್ನ ಸೊಸೆಗೆ ಸಹಾಯ ಮಾಡಿದ್ದೆವು ಮತ್ತು ಹಾವು ನೀನು ಹಗ್ಗ ಇಲ್ಲದೆ ಕಟ್ಟಿಗೆಯನ್ನು ತರುವುದಾಗಿ ಹೇಳಿದಾಗ ಅದಕ್ಕೆ ಸಹಾಯ ಮಾಡಿದ್ದು ನಾನು ಎಂದು ಹಾವು ಹೇಳುತ್ತದೆ. ನಮಗೆ ನಿಮ್ಮ ಸೊಸೆಯು ಏನೂ ಸಹಾಯ ಕೇಳಲಿಲ್ಲ. ಆದರೂ ನಾವು ಸಹಾಯ ಮಾಡಿದೆವು. ಏಕೆಂದರೆ ನಿನ್ನ ಸೊಸೆಯಲ್ಲಿ ಯಾವುದೇ ರೀತಿಯ ಕಲ್ಮಶ ಗುಣಗಳಿಲ್ಲ. ಆದರೆ ನಿನ್ನಲ್ಲಿ ಅದೆಲ್ಲಾ ತುಂಬಿ ತುಳುಕುತ್ತಿದೆ ಎಂದು ಹೇಳುತ್ತವೆ. ಈ ನುಡಿಗಳನ್ನು ಕೇಳಿದ ಅತ್ತೆ ನೊಂದುಕೊಳ್ಳುತ್ತಾಳೆ.

Image result for ಸೊಸೆ ಕಥೆ

      ಓ ದೇವರೇ ನಾನೆಂತ ಘೋರ ಪಾಪ ಮಾಡಿದೆನಲ್ಲಾ. ನನ್ನನ್ನು ಕ್ಷಮಿಸಿಬಿಡು ಎಂದು ಹೇಳುತ್ತಾ ಮುಂದೆ ನಡೆದು, ಅಲ್ಲಿ ಒಂದು ತೆಂಗಿನ ಮರದ ಕೆಳಗೆ ನೆರಳಿನಲ್ಲಿ ಕುಳಿತುಕೊಂಡು ಯೋಚಿಸುತ್ತಿರುವಾಗ, ಅತ್ತೆಯನ್ನು ನೋಡಿ ಮಂಗವು ಮೇಲಿನಿಂದ ಒಣಗಿದ ತೆಂಗಿನಕಾಯಿಯನ್ನು ಎಸೆಯುತ್ತದೆ. ತಕ್ಷಣ ಅತ್ತೆ ಮೇಲೆ ತಿರುಗಿ ನೋಡಿದಾಗ ಮಂಗವು ಹೇಳುತ್ತದೆ. ಇದೇ ಜಾಗದಲ್ಲಿ ನಿನ್ನ ಸೊಸೆಗೆ ನೀನು ಇಡೀ ರಾತ್ರಿ ಕಾಡಿನಲ್ಲಿ ಕಳೆದು ಬಾ ಎಂದು ಹೇಳಿದಾಗ ನಾನು ಅವಳಿಗೆ ಎಳೆನೀರು ತುಂಬಿರುವ ಕಾಯಿಯನ್ನು ಕೊಟ್ಟಿದ್ದೆ, ಆದರೆ ನಿನಗೆ ಒಣಗಿದ ತೆಂಗಿನಕಾಯಿಯನ್ನು ಕೊಟ್ಟೆ. ಒಳ್ಳೆಯವರಿಗೆ ದೇವರು ಎಂದಿಗೂ ಒಳ್ಳೆಯದ್ದೇ ಮಾಡುತ್ತಾನೆ. ಕೆಟ್ಟವರಿಗೆ ಕೆಟ್ಟದ್ದೇ ಮಾಡುತ್ತಾನೆ. ಇಷ್ಟೆ ಜೀವನ, ನೀನು ನಿನ್ನ ಒಳ್ಳೆಯ ಗುಣ ಹೊಂದಿರುವ ಸೊಸೆಗೆ ಇಷ್ಟೊಂದು ಕಷ್ಟವನ್ನು ನೀಡಿದೆ. ಆದರೆ ಅದೆಲ್ಲಾ ತಾತ್ಕಾಲಿಕವಷ್ಟೆ. ನಿನ್ನ ಈ ಅಹಂಕಾರ, ಸಿಟ್ಟು, ದ್ವೇಷ, ಬೆಳ್ಳಿ, ಬಂಗಾರ, ಶ್ರೀಮಂತಿಕೆ ಎಲ್ಲಾ ತಾತ್ಕಾಲಿಕವಷ್ಟೆ. ಜೀವ ಹೋದ ಮೇಲೆ ಇದ್ಯಾವುದು ನಿನ್ನ ಹಿಂದೆ ಬರುವುದಿಲ್ಲ ಎಂದು ಮಂಗವು ಅತ್ತೆಯನ್ನು ಕುರಿತು ಹೇಳಿದಾಗ ಅತ್ತೆಗೆ ಜ್ಞಾನೋದಯವಾಗಿ, ಜೀವನ ಇಷ್ಟೆನಾ, ಎಂತಾ ತಪ್ಪು ಮಾಡಿದೆ. ನನಗೆ ಸಿಕ್ಕ ದೇವತೆಯಂತ ಸೊಸೆಯ ಮೇಲೆ ಅಪವಾದ ಹೊರಿಸಿ ತುಂಬಾ ಕಷ್ಟ ಕೊಟ್ಟೆನಲ್ಲಾ ಎಂದು ಹೇಳಿ ದುಃಖದಿಂದ ಅಳುತ್ತಾ……… ಮನೆಗೆ ತಲುಪಿ ತನ್ನ ಸೊಸೆಯನ್ನು ತಬ್ಬಿಕೊಂಡು ಜೋರಾಗಿ ಅಳುತ್ತಾ ಕ್ಷಮೆ ಯಾಚಿಸುತ್ತಾಳೆ. ನಂತರ ಸೊಸೆ ಮನೆಗೆ ಹೋಗಿ ಕ್ಷಮೆ ಯಾಚಿಸಿ ಎಲ್ಲರೂ ಒಟ್ಟಿಗೆ ಕೂಡಿ ನಗು ನಗುತ್ತಾ ಜೀವನ ನಡೆಸುತ್ತಾರೆ.

ಸಿಟ್ಟು, ದ್ವೇಷ ಅಹಂಕಾರ ಶ್ರೀಮಂತಿಕೆ ಗರ್ವ ಐಶ್ವರ್ಯ ಇದೆಲ್ಲಾ ತಾತ್ಕಾಲಿಕ ಎಂಬುದು ಈ ಕತೆಯ ಸಾರಾಂಶವಾಗಿದೆ.

Recent Articles

spot_img

Related Stories

Share via
Copy link
Powered by Social Snap