ಸ್ವತಂತ್ರಭಾರತ ರಾಷ್ಟ್ರನಾಯಕರ ಹೋರಾಟದ ಫಲ, ತ್ಯಾಗ ಬಲಿದಾನದ ಫಲ:ತಹಸೀಲ್ದಾರ್ ನಾಗರಾಜು

ತುರುವೇಕೆರೆ

              ರಾಷ್ಟ್ರನಾಯಕರ ಹೋರಾಟದ ಫಲ, ತ್ಯಾಗ ಬಲಿದಾನಗಳಿಂದ ಸ್ವತಂತ್ರಭಾರತ 1947 ಆಗಸ್ಟ್ 15 ರಂದು ಜನ್ಮ ತಾಳಿತು ಎಂದು ತಹಸೀಲ್ದಾರ್ ನಾಗರಾಜು ತಿಳಿಸಿದರು.

              ಪಟ್ಟಣದ ಕ್ರೀಡಾಂಗಣದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಾ ನೆರವೇರಿಸಿ ನಾಡಿನ ಜನತೆಗೆ ಸಂದೇಶ ನೀಡಿ ಮಾತನಾಡಿದ ಅವರು, ಹಲವಾರು ಧರ್ಮ, ಭಾಷೆ, ಸಂಸ್ಕøತಿಯನ್ನೊಳಗೊಂಡ ದೇಶವನ್ನು ನೆಹರೂರವರ ನಾಯಕತ್ವದಲ್ಲಿ ಆಡಳಿತಾತ್ಮಕವಾಗಿ ಪ್ರಜಾತಂತ್ರ ವ್ಯವಸ್ಥೆಗೆ ನಾಂದಿ ಹಾಡಲಾಯಿತು. ರಾಷ್ಟದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿ ಮಾನವ ಸಂಪನ್ಮೂಲ ಬಳಿಸಿಕೊಂಡು ರಾಷ್ಟ್ರಾಭಿವೃದ್ದಿ ಮಾಡಲಾಗಿದೆ. ಆದರೂ ಸಹ ಬಡತನ, ನಿರುದ್ಯೋಗ, ಆಹಾರೋತ್ಪಾದನೆಯಲ್ಲಿ ಕುಂಠಿತವಾಗಿ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಎಲ್ಲರೂ ಒಗ್ಗೂಡಿ ರಾಷ್ಟ್ರ ನಿರ್ಮಾಣಕ್ಕೆ ಪಣತೊಡೋಣ ಎಂದು ಕರೆ ನೀಡಿದರು.

                ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಎಸ್.ಮಸಾಲ ಜಯರಾಮ್ ಮಾತನಾಡಿ ಗಾಂಧೀಜಿ, ನೇತಾಜಿ ಹಾಗೂ ಅಂಬೇಡ್ಕರ್‍ರಂತಹ ದೇಶಾಭಿಮಾನಿಗಳು ನಮ್ಮ ನಾಡಿನಲ್ಲಿ ಇದ್ದುದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ದೇಶ ಅಭಿವೃದ್ಧಿ ಹೊಂದಿದ್ದರೂ ಸಹ ಇನ್ನೂ ಕೂಡ ಬಲಿಷ್ಟ ರಾಷ್ಟ ನಿರ್ಮಾಣವಾಗಬೇಕಿದೆ. ಯುವಕರು ದೇಶದ ಒಳಿತಿಗೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ದೇಶದಲ್ಲಿ ಕಾಡುತ್ತಿರುವ ಹಸಿವು, ಬಡತನ, ಭ್ರಷ್ಟಾಚಾರಗಳನ್ನು ಹೋಗಲಾಡಿಸಿ ಸಮೃದ್ಧ ರಾಷ್ಟ್ರವನ್ನಾಗಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ನೀಡಿ ಹೆಚ್ಚು ಪರಿಶ್ರಮ ಹಾಕಿ ರಾಷ್ಟ್ರದ ಅಭಿವೃದ್ಧಿಗೆ ತೊಡಗಿಸಿಕೊಳ್ಳಿ. ಇಂದು ಗ್ರಾಮಗಳ ಅಭಿವೃದ್ಧಿ ಹೆಚ್ಚು ಅಗತ್ಯವಾಗಿದೆ ಎಂದು ತಿಳಿಸಿದರು.

                ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ಹಲವಾರು ಸಮಸ್ಯೆಗಳು ನಮ್ಮ ದೇಶದಲ್ಲಿ ತಾಂಡವವಾಡುತ್ತಿರುವ ಬಗ್ಗೆ ಜೂನಿಯರ್ ಕಾಲೇಜಿನ ನಾಗರಾಜಪ್ಪ ಉಪನ್ಯಾಸ ನೀಡಿದರು. ಜಿ.ಪಂ.ಸದಸ್ಯೆ ರೇಣುಕಾಕೃಷ್ಣಮೂರ್ತಿ, ದಲಿತ ಮುಖಂಡ ವಿ.ಟಿ. ವೆಂಕಟರಾಮ್ ಮಾತನಾಡಿದರು. ಬಿಇಓ ಮಂಜುನಾಥ ಪ್ರತಿಜ್ಞಾ ವಿಧಿ ಬೋಧಿಸಿದರು.

                ಸಮಾಜದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸೋಮೇನಹಳ್ಳಿ ತ್ಯಾಗರಾಜು, ಕುಣಿಕೇನಹಳ್ಳಿ ನಂಜಮ್ಮ, ಮುದಿಗೆರೆ ನಮಿತ, ಉತ್ತಮ ಕಲಾವಿದ ಹಾಗೂ ಬಿ.ಎಸ್.ಎನ್.ಎಲ್. ನೌಕರ ನಾರಾಯಣಪ್ಪ, ದೇವರಾಜ್, ರಾಮಯ್ಯ, ರಮೇಶ್‍ರವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್. ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜೆ.ಪಿ. ಶಾಲೆಯ ಸ್ನೇಹ, ಲಕ್ಷ್ಮೀ, ಬಿ.ಜಿ.ಎಸ್.ನ ತೃಪ್ತಿ, ಪ್ರಿಯಾ ಶಾಲೆಯ ಸ್ನೇಹ ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿವೇಕಾನಂದ ಕಾಲೇಜಿನ ಬಿಂದು, ಜಿ.ಜೆ.ಸಿ. ವಿದ್ಯಾ ಹಾಗೂ ಸಿಗೇಹಳ್ಳಿಯ ಸುಮ, ಅವರುಗಳಿಗೆ ಅಭಿನಂದಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಲ್ಯಾಪ್‍ಟ್ಯಾಪ್ ವಿತರಿಸಲಾಯಿತು.

              ಧ್ವಜಾರೋಹಣಾ ನಂತರ ಪಟ್ಟಣದ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮನಸೂರೆಗೊಂಡವು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಜೆ.ಪಿ.ಆಂಗ್ಲ ಶಾಲೆ ಪ್ರಥಮ, ಪ್ರಿಯಾಶಾಲೆ ದ್ವಿತೀಯ ಹಾಗೂ ವಿಶ್ವ ವಿಜಯ ವಿದ್ಯಾಶಾಲೆ ತೃತೀಯ ಬಹುಮಾನ ಪಡೆದುಕೊಂಡವು. ಇದೇ ಪ್ರಥಮ ಬಾರಿಗೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಿಂಡಿ ಹಾಗೂ ಹಾಲು ನೀಡುವ ವ್ಯವಸ್ಥೆ ಮಾಡಲಾಗಿತ್ತು.

               ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷೆ ಹೇಮಾವತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀ ನರಸಿಂಹ, ಜಿ.ಪಂ. ಸದಸ್ಯೆಜಯಲಕ್ಷ್ಮೀ, ತಾ.ಪಂ. ಸದಸ್ಯರಾದ ಭೈರಪ್ಪ, ಮಂಜುನಾಥ್, ಮಹಾಲಿಂಗಯ್ಯ, ನೌಕರರ ಸಂಘದ ಅಧ್ಯಕ್ಷ ಮಂಜಣ್ಣ, ಪ್ರಹ್ಲಾದ್, ಲಯನ್ಸ್ ಅಧ್ಯಕ್ಷ ನಂಜೇಗೌಡ, ರೋಟರಿ ಅಧ್ಯಕ್ಷ ಚೇತನ್, ಮಾಜಿ ಜಿ.ಪಂ.ಸದಸ್ಯ ಎನ್.ಆರ್.ಜಯರಾಂ ಸೇರಿದಂತೆ ಅನೇಕ ಗಣ್ಯರು, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ತಾಲ್ಲೂಕು ಅಂಗವಿಕಲ ಕಲಾ ವೇದಿಕೆ ಸಂಘ ಸೇರಿದಂತೆ ವಿವಿಧೆಡೆ 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

             ಸಂಜೆ 6 ಗಂಟೆಗೆ ಪಟ್ಟಣದ ಹಿರಣ್ಣಯ್ಯ ಬಯಲು ರಂಗ ಮಂದಿರದಲ್ಲಿ ಸ್ವಾತಂತ್ರ್ಯ ಸಂಭ್ರಮ ವಿನೂತನ ಕಾರ್ಯಕ್ರಮ ನಡೆದು ಸಾಂಸ್ಕøತಿಕ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಮಕ್ಕಳು ಪಾಲ್ಗೊಂಡು ಬಹುಮಾನ ಪಡೆದು ಸಂಭ್ರಮಿಸಿದರು.

ಪ್ರತಿದಿನದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿಯ facebook page like ಮಾಡಿ   

Recent Articles

spot_img

Related Stories

Share via
Copy link
Powered by Social Snap