ಹರಪನಹಳ್ಳಿಯಲ್ಲಿ ರಾಖಿ ಹಬ್ಬ ಆಚರಣೆ

 

ಹರಪನಹಳ್ಳಿ, :

ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳಿಸುವ ಈ ರಾಖಿ ಹಬ್ಬವನ್ನು ತಾಲೂಕಿನಲ್ಲಿ ಭಾನುವಾರ ಸಂಭ್ರಮದಿಂದಲೇ ಆಚರಿಸಲಾಯಿತು. ಅನೇಕರು ಮಹಿಳೆಯರು ತಮ್ಮ ಸಹೋದರರಿಗೂ ಹಾಗೂ ಸಹೋದರ ಸಮಾನರಿಗೂ ರಾಖಿ ಕಟ್ಟಿ ಆರ್ಶೀವಾದ ಪಡೆದು ಶುಭಕೋರಿದರು.

ಪಟ್ಟಣದ ಹೊಸಪೇಟೆ ರಸ್ತೆಯ ಜೋಯಿಸರ ಕೇರಿಯಲ್ಲಿರುವ ವಿವೇಕ ಲೇಡೀಸ್ ಟೈಲರ್ ವಿಶಿಷ್ಟ ರೀತಿಯಲ್ಲಿ ರಾಖಿ ಹಬ್ಬಕ್ಕೆ ಸಾಕ್ಷಿಯಾದರು. ಈ ಟೈಲರು ಸ್ವತಃ ಕೆಂಪು ಹಾಗೂ ಬಿಳಿಪು ನೂಲಿನಿಂದ ರಾಖಿಯನ್ನು ತಯಾರಿಸಿ ಮಹಿಳೆಯರಿಗೆ ಉಚಿತವಾಗಿ ವಿತರಣೆ ಮಾಡಿ ಶುಭಕೋರಿದರು ಒಟ್ಟು ಒಂದು ಸಾವಿರ ರಾಖಿಗಳನ್ನು ಸುಂದರವಾಗಿ ತಯಾರಿಸಿ ಅಂಗಡಿಗೆ ಬಂದ ಅನೇಕ ಮಹಿಳೆಯರಿಗೆ, ಕಾಲೇಜು ಹುಡುಗಿಯರಿಗೆ ವಿತರಣೆ ಮಾಡಿದರು. ಒಂದು ಸಣ್ಣ ಪ್ಲಾಷ್ಟಿಕ್ ಕವರಿನಲ್ಲಿ ಒಂದು ರಾಖಿ ಹಾಗೂ ಅದರ ಜೊತೆ ಚಾಕ್ ಲೇಟ್ ಇಟ್ಟು ಪಿನ್ ಮಾಡಿದ ಪ್ಯಾಕೇಟನ್ನು ಬಂದವರಿಗೆಲ್ಲಾ ಉಚಿತವಾಗಿ ವಿತರಿಸಿದನು. ಈ ಭಾರಿ ಸ್ಥಳೀಯ ಏರೊಬಿಕ್ಸ್ ಮಹಿಳಾ ತಂಡದವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಟೈಲರ್ ನಟರಾಜ ಅವರು ನಮ್ಮ ಅಂಗಡಿಗೆ ಹೆಚ್ಚಿನ ರೀತಿಯಲ್ಲಿ ಮಹಿಳೆಯರು ಬರುತ್ತಾರೆ, ಎಲ್ಲರೂ ಸ್ನೇಹಿತರ ದಿನಾಚರಣೆಯನ್ನು ಆಚರಣೆ ಮಾಡುತ್ತಾರೆ ಅದೇ ರೀತಿ ನೂಲು ಹುಣ್ಣಿಮೆಯ ಈ ರಾಖಿ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕು ಹಾಗೂ ಅಣ್ಣ ತಂಗಿಯರ ಸಂಬಂಧ ಗಟ್ಟಿಗೊಳಿಸುವ ಉದೇಶದಿಂದ ಈ ಬಾರಿಯೂ ಸ್ವತಃ ಒಂದು ಸಾವಿರ ರಾಖಿ ತಯಾರಿಸಿ, ಸಿಹಿ ಯೊಂದಿಗೆ ಉಚಿತವಾಗಿ ವಿತರಿಸಿ ಎಂದು ಹೇಳುತ್ತಾನೆ.

ಈ ಸಂದರ್ಭದಲ್ಲಿ ಟೈಲರ್ ನಿಂದ ರಾಖಿ ಸ್ವೀಕರಿಸಿದ ಏರೊ ಬಿಕ್ಸ್ ಮಹಿಳಾ ತಂಡದ ಸದಸ್ಯೆ ಡಾ.ಸಂಗೀತಾ ಭಾಗವತ್ ಹಾಗೂ ಲತಾ ರಾಥೋಡ್ ಅವರು ಭಾರತೀಯ ಸಂಸ್ಕೃತಿ ಅತ್ಯಂತ ಅರ್ಥ ಪೂರ್ಣವಾಗಿದೆ, ಅಣ್ಣ ತಂಗಿಯರ ಭಾಂದವ್ಯ ಬೆಸೆಯುವ ಈ ಹಬ್ಬವನ್ನು ಟೈಲರ್ ನಟರಾಜ ಉಚಿತ ರಾಖಿ ನೀಡುವುದರ ಮೂಲಕ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗಿದ್ದಾನೆ ಎಂದರು.

ಏರೊಬಿಕ್ಸ್ ಮಹಿಳಾ ತಂಡದ ಡಾ.ಸಂಗೀತಾ ಭಾಗವತ, ಲತಾ ರಾಥೋಡ್, ಡಾ. ಪ್ರಿಯಾಂಕ ಅಧಿಕಾರ, ಸೈನಿಕ ರಾಜು ಪೂಜಾರ, ಸಹ ಟೈಲರ್ ವಿರೇಶ ಬಾಗಳಿ, ವೈಷ್ಣವಿ ಕೊಟ್ರೇಶ, ಪ್ರಿಯಾಂಕಾ ಮಾರುತಿ, ಚೆನ್ನವೀರ, ತಮ್ಮಣ್ಣ, ಪ್ರಿಯಾ, ಮಹೇಶ, ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap