ಹರಪನಹಳ್ಳಿ: ಸಂಬಳಕ್ಕಾಗಿ ಮಾತ್ರ ಸರ್ಕಾರಿ ಕೆಲಸ ಮಾಡಬೇಡಿ, ದೇಶ ಸೇವೆಎಂದು ಭಾವಿಸಿ ಕರ್ತವ್ಯ ನಿರ್ವಹಿಸಿ : ಶಾಸಕ ಜಿ.ಕರುಣಾಕರರೆಡ್ಡಿ

  ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮೇಲಂತಸ್ತು ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮಾತನಾಡಿದ ಅವರು. ಸರ್ಕಾರಿ ನೌಕರರು ಗಾದೆ ಮಾತುಗಳನ್ನ ಪಾಲನೆ ಮಾಡಿದರೆ ಸಾಕು ದೇಶದ ಪ್ರಗತಿಯಾದಂತೆ. ದಿನನಿತ್ಯ ಹಲವಾರು ಸಮಸ್ಯೆಗಳನ್ನಿಟ್ಟುಕೊಂಡು ಜನಸಾಮಾನ್ಯರು ವಿಶೇಷವಾಗಿ ರೈತರು ನಿಮ್ಮ ಬಳಿ ಬರುತ್ತಾರೆ, ಅಂತವರ ಸಂಕಷ್ಟಗಳಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ಸ್ಪಂದಿಸಿದರೆ ನಿಮ್ಮ ಕೆಲಸಕ್ಕೆ ನೀವು ಗೌರವ ನೀಡಿದಂತೆ ಸರಿ. ಜವಾಬ್ದಾರಿ ಕಾರ್ಯನಿರ್ವಹಣೆ ನಿಮ್ಮ ಆದ್ಯ ಕರ್ತವ್ಯವಾಗಲಿ, ಪ್ರಾಮಾಣಿಕತೆಯನ್ನು ಸೇರಿಸಿ ದುಡಿಯಿರಿ ದೇಶದ ಹಿತ ಕಾಪಾಡಿ ಎಂದರು.

   ಸಂಬಳದ ಉಳಿತಾಯದ ಹಣದಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದು ಶ್ಲಾಘನೀಯ, ನೌಕರರ ಸಮುದಾಯ ಭವನಕ್ಕಾಗಿ 2 ಎಕರೆ ನಿವೇಶನ ಬೇಡಿಕೆ ಸಲ್ಲಿಸಿದ್ದೀರಿ ಅಧಿಕಾರಿಗೊಂದಿಗೆ ಚರ್ಚಿಸಿ ನಿವೇಶನದ ಪರಿಶೀಲನೆ ನೆಡೆಸಿ ಮಂಜೂರು ಮಾಡಲು ನಿರ್ದರಿಸುವುದಾಗಿ ಭರವಸೆ ನೀಡಿದರು.

   ಜಿಪಂ ಅಧ್ಯಕ್ಷೆ ಜಯಶೀಲ ಮಾತನಾಡಿ. ಸರ್ಕಾರಿ ಕೆಲಸ ಕೆಲವೇ ಪುಣ್ಯವಂತರಿಗೆ ಮಾತ್ರ ಲಭ್ಯವಾಗುತ್ತದೆ. ಮಾನವೀಯತೆಯೊಂದಿಗೆ ಜನಸೇವಕರಾಗಿ ಸಿಕ್ಕ ಕೆಲಸವನ್ನು ಸಾರ್ಥಕ ಪಡಿಸಿಕೊಳ್ಳಿ. ಜನಪ್ರತಿನಿಧಿಗಳು 5 ವರ್ಷಕ್ಕೊಮ್ಮೆ ಬದಲಾಗುವರು ನೌಕರರು ನಿವೃತ್ತಿವರೆಗೂ ಸರ್ಕಾರಿ ಕೆಲಸವನ್ನೆ ಮಾಡುವರಾದ್ದರಿಂದ ಉತ್ತಮ ಸೇವಾ ಮನೋಭಾವವನ್ನು ಹೊಂದಬೇಕಿದೆ ಎಂದರು.

  ನೌಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಜಿಪಂ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್, ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ನೌಕರ ಸಂಘದ ಗೌರವಾಧ್ಯಕ್ಷ ಷಣ್ಮುಖಪ್ಪ, ರಾಜ್ಯಪರಿಷತ್ ಸದಸ್ಯ ಸಿದ್ದಲಿಂಗನಗೌಡ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ರಶ್ಮಿರಾಜಪ್ಪ, ಸದಸ್ಯ ಡಿ.ಸಿದ್ದಪ್ಪ, ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ್, ಇಓ ಆರ್.ತಿಪ್ಪೇಸ್ವಾಮಿ, ಬಿಇಓ ಎಲ್.ರವಿ, ಜಿ.ಪದ್ಮಲತಾ, ಕಮ್ಮತ್ತರ್ ಅಂಜೀನಪ್ಪ, ಶಾನಭೋಗರ ಸಿದ್ದಪ್ಪ, ಹೆಚ್.ಹೂವಣ್ಣ, ಎಂ.ಪಿ.ನಾಯ್ಕ್, ತಾಪಂ ಸದಸ್ಯ ನಾಗರಾಜ್, ಮಂಜುಳಾ, ಪದ್ಮರಾಜ್ ಜೈನ್, ವೆಂಕಟೇಶ್ ಬಾಗಲಾರ್ ಹಾಗೂ ಸರ್ಕಾರಿ ನೌಕರರ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap