ಹರಿಹರಕ್ಕೆ ಶೀಘ್ರದಲ್ಲಿ ಡಿಜಿಟಲ್ ಗ್ರಂಥಾಲಯ : ಸುಮಾ ಬಿ. ಕೋಡಿಹಳ್ಳಿ

 ಹರಿಹರ :

      ನಗರದ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಶೀಘ್ರದಲ್ಲಿ ಉನ್ನತೀಕರಿಸಲಾಗುವುದು ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಸುಮಾ ಬಿ. ಕೋಡಿಹಳ್ಳಿ ಹೇಳಿದರು.

      ನಗರದ ಅಂಚೆ ಕಛೇರಿ ರಸ್ತೆಯಲ್ಲಿರುವ ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಹರಿಹರ ಶಾಖಾ ಗ್ರಂಥಾಲಯ ಹಾಗೂ ಹರಿಹರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2018, ಸದಸ್ಯತ್ವ ಆಂದೋಲನ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆಯಂತೆ ನಾಗರೀಕತೆಯ ಮತ್ತು ಜ್ಞಾನದ ಬೆಳವಣಿಗೆಯಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಗ್ರಂಥಾಲಯ ಮತ್ತು ಪುಸ್ತಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನವಂಬರ್ 14 ರಿಂದ 20ರ ವರೆಗೆ ರಾಷ್ಟ್ರೀಯ ಗ್ರಂಥಾಲಯ ಸಾಪ್ತಾಹವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

      ನಗರದ ಗ್ರಂಥಾಲಯದ ಕಟ್ಟಡವು ಡಿಜಿಟಲ್ ಗ್ರಂಥಾಲಯವಾಗಿ ಉನ್ನತೀಕರಿಸಲು ಸಕಲ ಸೌಲಭ್ಯಗಳನ್ನು ಹೊಂದಿದ್ದು, ಶೀಘ್ರದಲ್ಲಿಯೇ ಈ ಗ್ರಂಥಾಲಯವನ್ನು ವಿದ್ಯಾರ್ಥಿಗಳು ಹಾಗೂ ಯುವ ಜನತೆಯನ್ನು ಸೆಳೆಯಲು ಡಿಜಿಟಲೀಕರಣ ಮಾಡಲಾಗುವುದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗ್ರಂಥಾಲಯಗಳನ್ನು ಉನ್ನತೀಕರಿಸಲಾಗಿದ್ದು, ಅದೇ ರೀತಿ ಹರಿಹರದ ಗ್ರಂಥಾಲಯವನ್ನೂ ಸಹ ಡಿಜಿಟಲೀಕರಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಸಭಾ ಅಧ್ಯಕ್ಷೆ ಸುಜಾತ ಡಿ.ರೇವಣಸಿದ್ದಪ್ಪ, ಗ್ರಂಥಾಲಯಗಳ ಬಳಕೆ ಬಗ್ಗೆ ಇಂದಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸುವ ಕೆಲಸ ಆಗಾಗ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಆಸಕ್ತಿಮೂಡಿಸಬೇಕು. ಪುಸ್ತಕಗಳನ್ನು ಓದಿದಾಗ ಅದು ಬಹುದಿನಗಳ ಕಾಲ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಆದರೆ ಮೊಬೈಲ್ ಗಳಲ್ಲಿ ಓದಿದ ಅಂಶಗಳು ಅಲ್ಲಿಯೇ ಮರೆಯುತ್ತೇವೆ, ಆದ್ದರಿಂದ ಪುಸ್ತಕಗಳನ್ನು ಓದುವ ಅವ್ಯಾಸವನ್ನು ರೂಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

      ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರೇವಣಸಿದಪ್ಪ ಅಂಗಡಿ ಮಾತನಾಡಿ, ಗ್ರಂಥಾಲಯಗಳು ದೇವಾಲಯಗಳಿದಂತೆ. ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಪುಸ್ತಕಗಳು ಸಹಕಾರಿಯಾಗಿದ್ದು, ಪುಸ್ತಕ ಓದುವ ಹವ್ಯಾಸವನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಪೂಷಕರು ಮನೆಯಲ್ಲೊಂದು ಸಣ್ಣ ಗ್ರಂಥಾಲಯವನ್ನು ರಚಿಸಿಕೊಂಡಾಗ, ಮಕ್ಕಳು ಓದುವ ಹವ್ಯಾಸವನ್ನು ಹೊಂದುತ್ತಾರೆ.

      ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರ್ ಗೌಡ ಪಾಟೀಲ್ ಮಾತನಾಡಿ, ಹರಿಹರದ ಗ್ರಂಥಾಲಯವು ವಿಶಾಲವಾಗಿದ್ದು, ಈ ಗ್ರಂಥಾಲಯವನ್ನು ಡಿಜಿಟಲ್ ಮಾದರಿಯಲ್ಲಿ ಓದುಗರಿಗೆ ತಲುಪಿಸಬೇಕಾಗಿದೆ. ಅನೇಕ ವರ್ಷಗಳಿಂದ ಈ ಗ್ರಂಥಾಲಯವನ್ನು ಉನ್ನತೀಕರಿಸಬೇಕೆಂಬುದು ಓದುಗರ ಬೇಡಿಕೆಯಾಗಿದ್ದು, ಅಧಿಕಾರಿಗಳು ಕೂಡಲೇ ಈ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

      ಎಸ್.ಆರ್ ರಂಘನಾಥ್ ಅವರ ಪರಿಶ್ರಮದಿಂದ ರಾಷ್ಟ್ರದಲ್ಲಿನ ಗ್ರಂಥಾಲಯಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಜನರನ್ನು ಗ್ರಂಥಾಲಯಕಡೆಗೆ ಸೆಳೆಯುವ ಮತ್ತು ಒದುವ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಸಪ್ತಾಹ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದಿದೆ ಎಂದರು.
ಗ್ರಂಥಾಲಯದ ಸುತ್ತಮುತ್ತಲಿನ ಪರಿಸರುವು ಕಲುಷಿತಗೊಂಡಿದ್ದು, ದುರ್ವಾಸನೆಯಿಂದ ಓದುಗರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.

     ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ವೇದಿಕೆಯಲ್ಲಿದ್ದ ನಗರಸಭಾ ಅಧ್ಯಕ್ಷರಿಗೆ ಸೂಚಿಸಿದರು.

      ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಪ್ರಥಮದರ್ಜೆ ಕಾಲೇಜಿನ ಗ್ರಂಥಪಾಲಕ ಡಿ.ಆರ್ ಗಿರೀಶ್ ಅವರು ಉಪನ್ಯಾಸ ನೀಡಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಜಿ.ಜಿ.ಎಚ್.ಎಸ್ ಹಾಗೂ ಡಿ.ಆರ್.ಎಂ ಶಾಲೆಯ ವಿದ್ಯಾರ್ಥಿಗಳಿಗೆ ರಂಗೋಲಿ ಮತ್ತು ಭಾವಗೀತಿ ಸ್ಪರ್ಧೆಯನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

      ಈ ವೇಳೆ ತಾಲೂಕು ಮೇಲ್ವಿಚಾರಕರ ಸಂಘದ ಅಧ್ಯಕ್ಷ ಟಿ. ಸುರೇಶ್, ಗ್ರಂಥ ಪಾಲಕರಾದ ರವಿಕುಮಾರ್, ಚನ್ನಗಿರಿಯ ಶರಣಪ್ಪ, ಜಗಳೂರಿನ ಜಾದವ್, ಹೊನ್ನಾಳಿಯ ಸೀತಮ್ಮ ಹಿತ್ತಲಮನಿ, ಹರಪನಹಳ್ಳಿಯ ಶೋಭಾ ಎಚ್, ಗ್ರಂಥಾಲಯ ಸಹಾಯಕ ರಾಘವೇಂದ್ರ, ಮಂಜುನಾಥ್, ಎಸ್. ಕೇಶವ, ಹರಿಹರ ತಾಲೂಕಿನ 25 ಗ್ರಾ.ಪಂ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap