ಹಿಮಾಚಲ ಪ್ರದೇಶದ ಬಡ ಹುಡುಗಿ ಕವಿತಾ ಠಾಕೂರ್‌ ಏಷ್ಯನ್ ಗೇಮ್ಸ್‌ಗೆ ಲಗ್ಗೆ ಇಟ್ಟಿದ್ದಾರೆ

ನವದೆಹಲಿ:

              ಹಿಮಾಚಲ ಪ್ರದೇಶದ ಬಡ ಹುಡುಗಿ ಕವಿತಾ ಠಾಕೂರ್‌ ಇಂಡೋನೇಷಿಯಾದಲ್ಲಿ ನಡೆಯುತ್ತಿರುವ  ಏಷ್ಯನ್ ಗೇಮ್ಸ್‌ನಲ್ಲಿ ಆಡಲಿರುವ ಮಹಿಳಾ ಕಬಡ್ಡಿ ತಂಡದ ಪ್ರತಿಭಾನ್ವಿತ ಆಟಗಾರ್ತಿ. ಆಕೆ ಈಗಲೂ ತಮ್ಮ ತಂದೆಯ ಸಣ್ಣ ಡಾಬಾದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾಳೆ. ಏಷ್ಯನ್ ಗೇಮ್ಸ್: ಶೂಟರ್ಸ್, ರಸ್ಲರ್ಸ್ ಮೇಲೆ ಹೆಚ್ಚಿನ ಪದಕ ಭರವಸೆ ಹಿಮಾಚಲ ಪ್ರದೇಶದ ಮನಾಲಿಯಿಂದ 6 ಕಿ.ಮೀ ದೂರದ ಜಗನ್ ಸುಖ್ ಗ್ರಾಮದ  ಕವಿತ ಅಲ್ಲಿ ಆಕೆಯ ತಂದೆಯ ಸಣ್ಣ ಡಾಬಾದಲ್ಲಿ ಈಗಲೂ ಕೆಲಸ ಮಾಡುತ್ತಾರೆ . ಇಲ್ಲಿ ನಿತ್ಯ ಕಸ ಗುಡಿಸುವ, ತಿಂದ ತಟ್ಟೆಗಳನ್ನು ತೊಳೆಯುವ ಕೆಲಸ ಮಾಡುತ್ತಾಳೆ. ಅಲ್ಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಕೂಡ ಮಾಡಿ, ಮೆಚ್ಚಿನ ಕಬಡ್ಡಿ ಆಡುವುದನ್ನು  ಕಲಿತು ಇಂದು ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿದ್ದಾರೆ. ಕವಿತಾ ತಂದೆ ಪೃಥ್ವಿ ಸಿಂಗ್, ತಾಯಿ ಕೃಷ್ಣಾ ದೇವಿ ಅವರ ಹೆಮ್ಮೆಗೆ ಕಾರಣರಾಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap