ಮಕ್ಕಳ ಆರೋಗ್ಯ ಸುಧಾರಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು

ಹಾನಗಲ್ಲ :

   ಸಾಮಾನ್ಯ ಮಕ್ಕಳನ್ನು ನೋಡುವ ದೃಷ್ಠಿಕೋನದಂತೆ ಬೆಳವಣಿಗೆಯಲ್ಲಿ ನ್ಯೂನ್ಯತೆ ಹೊಂದಿದ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸುವ ಮೂಲಕ, ನಮ್ಮಲ್ಲಿರುವ ವಿಚಾರಗಳನ್ನು, ಮೌಲ್ಯಗಳನ್ನು ವಿಭಿನ್ನವಾಗಿ ವಿವಿಧ ರೀತಿಯಿಂದ ಪ್ರೀತಿ ಪೂರಕವಾಗಿ ಹಂಚಬೇಕು ಎಂದು ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತೀರ್ಣಾಧಿಕಾರಿ ಎಸ್.ಆನಂದ ತಿಳಿಸಿದರು.
ಪಟ್ಟಣದ ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್ಲ ಇವರ ಆಶ್ರಯದಲ್ಲಿ ಶೀಘ್ರ ಮಧ್ಯಸ್ಥಿಕೆ ಹಾಗೂ ಆರಂಭಿಕ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ, ನಿರಾಮಯ ಆರೋಗ್ಯ ಕಾರ್ಡ ವಿತರಣೆ ಹಾಗೂ ಪಾಲಕರ ಒಂದು ದಿನದ ತರಬೇತಿ ಉಧ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ದೇವರ ಸಮಾನ ಅವರು ಹೇಗೆ ಇರಲಿ ಅವರ ಆರೈಕೆ ಮಾಡುವುದು ತಂದೆ ತಾಯಿಯರ ಕರ್ತವ್ಯ. ವಿಶೇಷ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಇದರಿಂದ ಮಕ್ಕಳ ಬದಲಾವಣೆಗೆ ಒಂದು ಹೆಜ್ಜೆ ಮುಂದಿಟ್ಟ ಹಾಗೆ ಆಗುತ್ತದೆ ಎಂದ ಅವರು, ರೋಶನಿ ಸಂಸ್ಥೆ ನ್ಯೂನ್ಯತೆ ಹೊಂದಿರುವಮಕ್ಕಳಿಗೆ ದಾರಿ ದೀಪವಾಗಿದೆ ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಡಿಂಪಲ್ ಡಿಸೋಜಾ, ನಿರಾಮಯ ಆರೋಗ್ಯ ಕಾರ್ಡ ಎನ್ನುವುದು ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು ಇದು ಕೇವಲ ಬುದ್ಧಿ ಮಾಂದ್ಯತೆ, ಮೆದುಳು ವಾತ, ಆಟಿಸಂ ಹಾಗೂ ಬಹುವಿಧ ಅಂಗವಿಕಲತೆ ಉಳ್ಳವರಿಗಾಗಿಯೇ ನೀಡುವ ಸೌಲಭ್ಯವಾಗಿದೆ. ಪಾಲಕರು ವಿಕಲಚೇತನ ಮಕ್ಕಳನ್ನು ಆರೋಗ್ಯ ಸೇವೆಯಿಂದ ವಂಚಿತಗೊಳಿಸಬಾರದು ಎನ್ನುವ ಉದ್ದೇಶದಿಂದ ನ್ಯಾಷನಲ್ ಟ್ರಸ್ಟ್ ಅಡಿಯಲ್ಲಿ ಸರ್ಕಾರ ವಿಕಲಚೇತನರ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಪಾಲಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲೆಂದೇ ಇರುವ ಈ ಯೋಜನೆಂiÀi ಉಪಯೋಗವನ್ನು ಪ್ರತಿಯೊಬ್ಬ ಪಾಲಕರು ಪಡೆದುಕೊಳ್ಳಬೇಕು. ಮಕ್ಕಳನ್ನು ಶೀಘ್ರ ಮಧ್ಯಸ್ಥಿಕೆ ಕೇಂದ್ರಕ್ಕೆ ಕರೆತಂದು ಅವರ ಬದಲಾವಣೆಗೆ ಮುಂದಾಗಬೇಕು, ಮತ್ತು ನ್ಯೂನ್ಯತೆ ಮಕ್ಕಳ ಆರೋಗ್ಯದಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.

  ಮುಖ್ಯ ಅಥಿತಿಯಾಗಿ ಮಾತನಾಡಿದ ಎಮ್.ಎಮ್.ಮುಲ್ಲಾ, ರೋಶನಿ ಸಂಸ್ಥೆಯವರು ನೀಡಿದ ಸಾಧನ ಸಲಕರಣೆಗಳನ್ನು ಸರಿಯಾಗಿ ಬಳಕೆ ಮಾಡಿ ಮಕ್ಕಳ ಆರೋಗ್ಯ ಸುಧಾರಣೆಗೆ ಶ್ರಮಿಸಬೇಕೆಂದರು.
ನ್ಯೂನ್ಯತೆ ಮಗುವಿನ ಪಾಲಕರಾದ ಹೇಮಾವತಿ ಮಾತನಾಡಿ, ತಾವು ಒಂದು ವರ್ಷದಿಂದ ನಿರಾಮಯ ಆರೋಗ್ಯ ಕಾರ್ಡನ್ನು ಬಳಸುತ್ತಿದ್ದು ಅದರಿಂದಲೇ ತಮ್ಮ ಮಗುವಿನ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ಮಾಡಿಕೊಂಡು ಮಗುವಿನಲ್ಲಾದ ಬದಲಾವಣೆಯನ್ನು ಪಾಲಕರೊಂದಿಗೆ ಹಂಚಿಕೊಂಡರು.

  ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ ಹಾಗೂ ಚಿಕಿತ್ಸಾ ವೆಚ್ಚವನ್ನು ನಿರಾಮಯ ಯೋಜನೆಯ ಮೂಲಕ ಮಾಡಿಕೊಳ್ಳುವ ಕುರಿತು ಶಿವಕುಮಾರ ಮಾಂಗ್ಲೇನವರ ಮತ್ತು ಶಿವಬಸವನಗೌಡ ಪಾಟೀಲ್ ಅವರು ಪಾಲಕರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ 15 ಮಕ್ಕಳಿಗೆ ನಿರಾಮಯ ಕಾರ್ಡ ವಿತರಿಸಲಾಯಿತು.
ಪಾಲಕರಾದ ಗೌರಮ್ಮ ಪ್ರಾರ್ಥಿಸಿದರು. ಎಸ್.ವಿ.ಪಾಟೀಲ್ ಸ್ವಾಗತಿಸಿದರು, ಮಧುಮತಿ ನಿರೂಪಿಸಿದರು, ಅಣ್ಣಪ್ಪ ವಂದಿಸಿದರು.

Recent Articles

spot_img

Related Stories

Share via
Copy link
Powered by Social Snap