ಏಷ್ಯನ್ ಗೇಮ್ಸ್ 2018 : ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ದೀಪಕ್

ಜಕಾರ್ತ:

      ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಅಥ್ಲೇಟ್‌ಗಳ ಪದಕ ಬೇಟೆ ಮುಂದುವರಿದಿದೆ. 

      ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್​ ಗೇಮ್ಸ್​ನ 10 ಮೀಟರ್​ ಏರ್​ ರೈಫಲ್​ ವಿಭಾಗದಲ್ಲಿ ಭಾರತೀಯ ಶೂಟರ್​ ದೀಪಕ್​ ಕುಮಾರ್​ ಬೆಳ್ಳಿ ಪದಕ ಜಯಿಸಿದ್ದಾರೆ.

      ದೀಪಕ್​ ಒಟ್ಟು 247.7 ಅಂಕ ಕಲೆ ಹಾಕಿ ಬೆಳ್ಳಿ ಪದಕ ಗೆದ್ದರು. ಚೀನಾದ ಹಾರಾನ್ ಯಾಂಗ್ ಒಟ್ಟು 249.1 ಅಂಕ ಕಲೆ ಹಾಕಿ ಚಿನ್ನದ ಪದಕ ಜಯಿಸಿದರು. ಚೈನೀಸ್​ ತೈಪೆಯ ಶಾವೊಕುವಾನ್ ಲು 226.8 ಅಂಕ ಕಲೆಹಾಕಿ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಭಾರತೀಯ ಶೂಟರ್​ಗಳು ಕ್ರೀಡಾ ಕೂಟದಲ್ಲಿ ಶೂಟಿಂಗ್​ ವಿಭಾಗದಲ್ಲಿ ಮೂರನೇ ಪದಕ ಜಯಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap