4 ಐಪಿಎಸ್ ಅಧಿಕಾರಿಗಳ ವರ್ಗಾವಣೆ

0
16

ಬೆಂಗಳೂರು, : ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಬೀದರ್‌ನಲ್ಲಿ ಎಸ್‌ಪಿ ಆಗಿದ್ದ ದೇವರಾಜ್ ಅವರನ್ನು ಬೆಂಗಳೂರು ಸೆಂಟ್ರಲ್ ಡಿಸಿಪಿ ಆಗಿ ವರ್ಗಾವಣೆ ಮಾಡಿದ್ದಾರೆ. ಅಮರ್‌ ಕುಮಾರ್ ಪಾಂಡೆ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿ ಆಗಿ ಮತ್ತು ಸಂದೀಪ್ ಪಾಟೀಲ್ ಅವರನ್ನು ಗುಪ್ತಚರ ಇಲಾಖೆಯ ಡಿಐಜಿ ಆಗಿ ನೇಮಿಸಿಕೊಂಡಿದ್ದಾರೆ.

ಎಸ್‌.ಗಿರೀಶ್‌ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಅಧಿಕಾರಕ್ಕೆ ಏರಿದ ಕೂಡಲೆ ಸಾಮ ಮನ್ನಾ ಘೋಷಣಾ ಪತ್ರಕ್ಕೆ ಸಹಿ ಹಾಕಿದ ನಂರತ ಯಡಿಯೂರಪ್ಪ ಅವರು ಮಾಡಿರುವ ಎರಡನೇ ಕಾರ್ಯವೇ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. ಎಲ್ಲಾ ಸರ್ಕಾರಗಳೂ ತಮಗೆ ಅನುಕೂಲವಾಗಬಹುದಾದ ಅಧಿಕಾರಿಗಳನ್ನು ಹೀಗೆ ವರ್ಗಾವಣೆ ಮಾಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ

LEAVE A REPLY

Please enter your comment!
Please enter your name here