40 ಲಕ್ಷರೂ ವೆಚ್ಚದಲ್ಲಿ ರಡ್ಡಿ ಸಮುದಾಯಭವನ ನಿರ್ಮಾಣ:-ಎಸ್.ಭೀಮಾನಾಯ್ಕ

0
23

ಹಗರಿಬೊಮ್ಮನಹಳ್ಳಿ:

      ಈ ಹಿಂದೆ ಶಾಕನಾಗಿದ್ದ ಅವಧಿಯಲ್ಲಿ ರಡ್ಡಿ ಸಮುದಾಯಭವನ ನಿರ್ಮಾಣಕ್ಕೆ 25ಲಕ್ಷರೂ ಅನುದಾನವನ್ನು ಘೋಷಣೆ ಮಾಡಿದ್ದೆ ಆದರೆ ಸಮುದಾಯದ ನಿವೇಶನ ಎನ್.ಎ ಮಾಡಿಸಿರದ ಕಾರಣ ಆ ಅನುದಾನ ಹಾಗೇ ಉಳಿದಿದೆ. ಆ ನಿವೇಶನದ ಎನ್.ಎ. ಖರ್ಚನ್ನೂಸಹ ನಾನೇ ನಿರ್ವಹಿಸುವುದರ ಜೊತೆಗೆ ಈ ಬಾರಿಯ ಶಾಸಕರ ಅನುದಾನದಲ್ಲಿ ಹೆಚ್ಚುವರಿ 15 ಲಕ್ಷರೂ ಅನುದಾನವನ್ನು ನೀಡುತ್ತೇನೆ ಒಟ್ಟಾರೆ 40 ಲಕ್ಷರೂ ವೆಚ್ಚದಲ್ಲಿ ರಡ್ಡಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

      ಪಟ್ಟಣದ ಪಂಚಮಸಾಲಿ ಕಲ್ಯಾಣಮಂಟಪದಲ್ಲಿ ತಾಲೂಕು ರಡ್ಡಿ ಸಮಾಜ ಹಾಗೂ ರಡ್ಡಿ ನೌಕರರ ಸಂಘದ ಸಹಯೋಗದೊಂದಿಗೆ ನಡೆದ ಪ್ರತಿಭಾ ಪುರಸ್ಕಾರ ಮತ್ತು ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರು ಇನ್ನೂ ಹೆಚ್ಚಿನ ಸಾಧನೆಗೈಯಲು ಪ್ರೋತ್ಸಾಹಿಸುವ ಕೆಲಸವಾಗಬೇಕು. ಪ್ರೋತ್ಸಾಹ ಸಿಗದೇ ಎಷ್ಟೋ ಪ್ರತಿಭೆಗಳು ಮುಖ್ಯವಾಹಿನಿಗೆ ಬರದೇ ಮರೆಯಾಗುತ್ತಿವೆ. ಇಂತಹ ಕಾರ್ಯಕ್ರಮದ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ. ಬಡತನದ ನಡುವೆಯೂ ಓದಿ ಹಲವಾರು ಜನ ಸರ್ಕಾರಿ ನೌಕರಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಉತ್ತಮರಾಗಿ ಓದಿ ಪಾಲರಕ ಆಸೆಯಂತೆ ಎತ್ತರಕ್ಕೆ ಬೆಳೆಯಬೇಕು.

      ಹಿಂದಿನ 5 ವರ್ಷ ನಾನು ಶಾಸಕನಾಗಿದ್ದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡುವ ಮೂಲಕ ಕ್ಷೇತ್ರಕ್ಕೆ ಹೆಚ್ಚನ ಅನುದಾನ ತಂದಿದ್ದೆ. ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಅಲವು ಯೋಜನೆಗಳನ್ನು ಜಾರಿಗೆ ತಂದಿದೆ ಆ ಎಲ್ಲಾ ಯೋಜನೆಗಳು ಇಂದಿನ ಸಮಿಶ್ರ ಸರ್ಕಾರದಲ್ಲೂ ಮುಂದುವರಿಯುತ್ತವೆ. ಆ ಯೋಜನೆಗಳನ್ನು ಎಲ್ಲಾ ಸಮುದಾಯಗಳು ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳುಸಹ ಗುಣಮಟ್ಟದ ಶಿಕ್ಷಣ ನೀಡುವತ್ತ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ.

      ಈ ಬಾರಿ ಕ್ಷೇತ್ರಾಧ್ಯಂತ ಇರುವ 30 ವರ್ಷಕ್ಕೂ ಹಳೆಯದಾದ ಶಾಲೆಗಳನ್ನು ತೆರವುಗೊಳಿಸಿ ನೂತನವಾಗಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ. ಆ ನಿಟ್ಟಿನಲ್ಲಿ ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಧ್ಯದಲ್ಲೇ ಕರೆದು ಚರ್ಚಿಸಲಾಗುವುದು ಎಂದರು.

      ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಕೇಶವರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಗುವ ಈ ಕಾರ್ಯಕ್ರಮದಲ್ಲಿ 48 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಉತ್ತೇಜನ ನೀಡತ್ತಿದ್ದೇವೆ. ಈ ಭಾಗದ ಜೀವನಾಡಿಯಾದ ಮಾಲವಿ ಜಲಾಶಯ ಹಾಗೂ ಚಿಲವಾರಬಂಡಿ ಏತ ನೀರಾವರಿ ಯೋಜನೆಗೆ ಹೊಸ ಕಾಯಕಲ್ಪಮಾಡಿ ರೈತರ ಕಣ್ಮಣಿಯಾಗಿರುವ ಜನಪ್ರೀಯ ಶಾಸಕ ಭೀಮಾನಾಯ್ಕರು 2ನೇಬಾರಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಹರಿಕಾರರೆನಿಸಿಕೊಂಡಿದ್ದಾರೆ. ನಮ್ಮದು ಕೃಷಿಕ ಸಮಾಜವಾಗಿರುವುದರಿಂದ ಜನಸಂಖ್ಯೆ ಜಾಸ್ತಿ ಇದ್ದರೂಸಹ ನಮ್ಮಲ್ಲಿ ಸಂಘಟನೆ ಕಡಿಮೆಇದೆ ಈ ಸಂಘಟನೆಯ ಕೊರತೆಯಿಂದಾಗಿ ನಾವು ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲಾಗಿಲ್ಲ. ಆದ್ದರಿಂದ ನಾವು ಸಂಘಟಿತರಾಗಿ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣೆಗೆ ಬರಬೇಕಾಗಿದೆ. ಸಮಾಜದ ಹೇಳಿಗೆಗಾಗಿ ಒಗ್ಗಟ್ಟಿನ ಹೋರಾಟ ಮಾಡಲಾಗುವುದು ಇದಕ್ಕೆ ಶಾಸಕರ ಬೆಂಬಲಸಹ ಬೇಕು ಎಂದರು.

      ದಿವ್ಯ ಸಾನಿಧ್ಯ ವಹಿಸಿದ್ದ ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ಮಾತನಾಡಿ ರಡ್ಡಿ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಅಸ್ತಿತ್ವವನ್ನು ನಿರೂಪಿಸುವಷ್ಟು ಪ್ರತಿಭಾವಂತರಿದ್ದಾರೆ. ಇಂದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದ್ದು ಶ್ಲಾಘನೀಯ ವಿದ್ಯಾರ್ಥಿಗಳಿಗೆ ಹಿಂದೆ ಗುರುವಿರಬೇಕು ಮುಂದೆ ಗುರಿ ಇರಬೇಕು ಹಾಗಾದಾಗ ಮಾತ್ರ ಅವರು ಏನುಬೇಕಾದರೂ ಸಾಧಿಸುತ್ತಾರೆ. ಅದೇರೀತಿ ಸಮುದಾಯ ಸಂಘಟನೆಯಿಂದ ಮಾತ್ರ ಸಶಕ್ತವಾಗಬಲ್ಲದು ಎಂದರು.

      ಈ ಸಂದರ್ಭದಲ್ಲಿ ಜಿ.ಪಂ ಬಳ್ಳಾರಿ ಅಧ್ಯಕ್ಷ ಭಾರತಿ ತಿಮ್ಮಾರಡ್ಡಿ, ವಿವಿ ಸಂಘದ ನಿರ್ದೇಶಕರು ಸಿ.ಮೋಹನ ರಡ್ಡಿ ತಾ.ಪಂ ಅಧ್ಯಕ್ಷ ನಾಗರತ್ನಮ್ಮ ಗೋಣಿಬಸಪ್ಪ, ಪುರಸಭೆ ಅಧ್ಯಕ್ಷ ಟಿ.ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ಸದಸ್ಯರಾದ ಹಂಚಿನಮನಿ ಹನುಮಂತಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಅಳವಂಡಿ ವೀರಣ್ಣ, ಎ.ಪಿ.ಎಂ.ಸಿ ನಿರ್ದೇಶಕ ಬನ್ನಿಗೋಳ ವೆಂಕಣ್ಣ, ಬಸವರಾಜ ರಡ್ಡಿ, ಮಾಜಿ ಜಿ.ಪಂ ಸದಸ್ಯ ಅಕ್ಕಿತೋಟೇಶ್, ಮುಟುಗನಹಳ್ಳಿ ಕೊಟ್ರೇಶ್, ಹಾಲ್ದಾಳ್ ವಿಜಯಕುಮಾರ್, ಇ.ಒ ವಿಶ್ವನಾಥ, ತಾಹಸೀಲ್ದಾರ್ ವಿಜಯಕುಮಾರ್, ಅಜೀಜುಲ್ಲಾ, ಗಿರಿರಾಜ್ ರಡ್ಡಿ, ಹೇಮರಡ್ಡಿ, ಯಂಕಾರಡ್ಡಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here