6 ಕ್ಷೇತ್ರಗಳಲ್ಲಿ ಕಾಂಗ್ರೆಸ್, 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು, ಜೆಡಿಎಸ್ ದೂಳಿಪಟ.

0
31

ಬಳ್ಳಾರಿ

ಜಿಲ್ಲೆಯಲ್ಲಿ ಒಟ್ಟು 9 ಕ್ಷೇತ್ರಗಳಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯಗಳಿಸುತ್ತೇವೆ ಎನ್ನವು ಹೇಳಿಕೆಯನ್ನು ನೀಡಿದ ಬಿಜೆಪಿಗೆ ತಕ್ಕ ಪಾಠವನ್ನು ಕಳಿಸಿ ಬಳ್ಳಾರಿ ಜಿಲ್ಲೆಯ ಜನರು. ಜಿಲ್ಲೆಯಲ್ಲಿ ಬಿಜೆಪಿಗೆ 3 ಕೇತ್ರಗಳು ಮಾತ್ರ, ಆದ್ರೇ ಕಾಂಗ್ರೇಸ್ ಪಕ್ಷವು 6 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.ಬಳ್ಳಾರಿ ನಗರದ ಜಿ. ಸೋಮಶೇಖರ್, ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ವೈ.ಎಂ ಗೋಪಾಲಕೃಷ್ಣ ಮತ್ತು ಸೋಮಲಿಂಗಪ್ಪ ಬಹಳ ಅಂತರದಲ್ಲಿ ಜಯಗಳಿಸಿದ್ದಾರೆ.

ಕಾಂಗ್ರೇಸ್ ಪಕ್ಷದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರ್ರದ ಬಿ.ನಾಗೇಂದ್ರ, ವಿಜಯನಗರ ಕ್ಷೇತ್ರದ ಆನಂದ್ ಸಿಂಗ್, ಸಂಡೂರು ಕ್ಷೇತ್ರದ ಈ ತುಕಾರಾಂ, ಹೂವಿನಹಡಗಲಿ ಕ್ಷೇತ್ರದ ಪಿಟಿ ಪರಮೇಶ್ವರ್ ನಾಯ್ಕ್, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಭೀಮಾನಾಯ್ಕ್, ಕಂಪ್ಲಿ ಕ್ಷೇತ್ರದ ಜೆಎನ್ ಗಣೇಶ್ ಜಯವನ್ನು ಗಳಿಸಿದ್ದಾರೆ. ಮತ್ತೆ ಕಾಂಗ್ರೇಸ್ ಹೆಚ್ಚು ಸ್ಥಾನವನ್ನು ಗಳಿಸಿದೆ.

 

ಗೆಲ್ಲುತ್ತೇನೆಂದು ಬಂದರು
ಸೋಲುತ್ತೇನೆಂದು ಹೋದರು
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಾನಾಯ್ಕ್ ಬೆಳಿಗ್ಗೆ 7.30ಕ್ಕೆ ಮತ ಎಣಿಕೆ ಕೇಂದ್ರಕ್ಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದರು. ಅವರಿಗೆ ತಮ್ಮ ಗೆಲುವಿನ ಖಚಿತತೆ ಇದ್ದಂತೆ ಬೆಳಿಗ್ಗೆಯೇ ಬಂದು ವಿಜಯದ ನಗೆ ಬೀರಿದರು.ಆದ್ರೇ ಕೊಂಚ ತಡವಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದ ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೇಮಿರಾಜ್ ನಾಯ್ಕ್ 12ನೇ ಸುತ್ತಿನ ಎಣಿಕೆ ಆಗುತ್ತಿದ್ದಂತೆ ಸೋಲು ಖಚಿತ ಪಡಿಸಿಕೊಂಡಂತೆ ಕ್ಷೇತ್ರದಿಂದ ಹೊರ ನಡೆದರು.

ಹ್ಯಾಟ್ರಿಕ್ ಗೆಲುವು ಸಾಧಿಸಿದವರು: ಅಂತೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಕನಸಲ್ಲಿದ್ದವರಿಗೆ ಕೆಲವರಿಗೆ ಮತದಾರ ಸಿಹಿ ನೀಡಿದರೆ ಮತ್ತೆ ಕೆಲವರಿಗೆ ಕಹಿ ಉಣಿಸಿದ್ದಾರೆ.ಕ್ಷೇತ್ರದಲ್ಲಿ ಎಷ್ಟೆ ವಿರೋಧವನ್ನು ಪ್ರಚಾರಕ್ಕೆ ಹೋದ ಸಮಯದಲ್ಲಿ ಹೋದಾಗ ಹಲವರು ವ್ಯಕ್ತಪಡಿಸಿದರೂ ಲಾಡ್ ಸಹೋದರರು ಮತ್ತು ಸ್ಮಯೋರ್ ಕಂಪನಿಯ ನೌಕರರು ಮತ್ತು ತಾವು 10 ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಈ.ತುಕರಾಂ ಸಂಡೂರಿನಲ್ಲಿ ಹ್ಯಾಟ್ರಿಕ್ ಗೆಲುವಿನ ಸಿಹಿ ಉಂಡರು.

ಇನ್ನು ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದ ಆನಂದ್ ಸಿಂಗ್ ತಮ್ಮ ಜಾತ್ಯಾತೀತ ಧೋರಣೆಗೆ ಆ ಪಕ್ಷದಲ್ಲಿ ಅವಕಾಶವಿಲ್ಲ ಮತ್ತು ಪಕ್ಷದ ಮೇಲ್ಪಂಕ್ತಿ ನಾಯಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದನ್ನು ಮನಗಂಡು ತಕ್ಷಣ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದು ತಮ್ಮ ಹ್ಯಾಟ್ರಿಕ್ ಗೆಲುವಿನ ಕನಸನ್ನು ನನಸು ಮಾಡಿಕೊಂಡರು. ಇದಕ್ಕೆ ಕ್ಷೇತ್ರದ ಮತದಾರರು ತಾವು ಎಲ್ಲಿದ್ದರೂ ತಮ್ಮನ್ನು ಕೈಬಿಡುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡರು.

ಸೋತು ಸುಣ್ಣವಾದ ಸುರೇಶ್ ಬಾಬು: ಇನ್ನು ಕಂಪ್ಲಿ ಕ್ಷೇತ್ರದಲ್ಲಿ ಟಿ.ಹೆಚ್.ಸುರೇಶ್ ಬಾಬು ಕೆಲ ಕಾಂಗ್ರೆಸ್ ಮುಖಂಡರ ಒಳ ಒಪ್ಪಂದದಿಂದಲೇ ಕಾಂಗ್ರೆಸ್ ನಿಂದ ವೀಕ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಕೊಂಡು ಭರ್ಜರಿ ಅಂತರದಿಂದ ಗೆಲುವು ಸಾಧಿಸುತ್ತಿದ್ದರು. ಅದರಿಂದಲೇ ಪಕ್ಷದ ಅನೇಕ ಹಿರಿಯ ಮುಖಂಡರನ್ನು ದೂರಮಾಡಿದ್ದಲ್ಲದೆ ತನ್ನ ಗೆಲುವು ಖಚಿತ ಎಂದು ಮತದಾರರ ಮನ ಮುಟ್ಟಲು ಮಾಡುವ ಪ್ರಯತ್ನದಲ್ಲಿ ಜಿಪುಣತನ ತೋರಿದರು. ಇದರಿಂದಾಗಿ ಮತ್ತು ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ, ಆನಂದ್ ಸಿಂಗ್ ಮತ್ತು ನಾಗೇಂದ್ರ ಸೇರಿ ಈ ಬಾರಿ ಹೇಗಾದರೂ ಮಾಡಿ ಕಂಪ್ಲಿ ಕ್ಷೇತ್ರ ಗೆಲ್ಲಲ್ಲೇಬೇಕೆಂದು ಮಾಡಿದ ತಂತ್ರ ಅಲ್ಲದೆ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಈ ಬಾರಿಯಾದರೂ ನಮ್ಮ ಅಭ್ಯರ್ಥಿ ಗೆಲುವು ಸಾಧಿಸದಿದ್ದರೆ ನಮಗೆ ಉಳಿಗಾಲ ಇಲ್ಲವೆಂದು ಪಕ್ಷ ನೀಡಿದ ಕಾಣಿಕೆಯನ್ನೇ ಈ ಬಾರಿ ಮನೆ ಮನೆಗೆ ಸರಿಯಾಗಿ ಮುಟ್ಟಿಸಿದ್ದು ಸುರೇಶ್ ಬಾಬು ಹ್ಯಾಟ್ರಿಕ್ ಕನಸಿಗೆ ಕಹಿಯಾಯಿತು.

ಇನ್ನು ಕೂಡ್ಲಿಗಿಯನ್ನು ಬಿಟ್ಟು ತಾನು ಈ ಮೊದಲು ಬಯಸಿದಂತೆ ಗ್ರಾಮೀಣದಲ್ಲಿ ತನ್ನ ರಾಜಕೀಯ ಭವಿಷ್ಯದಲ್ಲಿ ತನ್ನ ರಾಜಕೀಯ ಭವಿಷ್ಯ ಕಾಣಲು ಬಂದ ನಾಗೇಂದ್ರ ಇಲ್ಲಿ ತನ್ನದೇ ಕರಾಮತ್ ನಡೆಸಿ ಕೌಲ್ ಬಜಾರ್‍ನ ಮಹತ್ವದ ಬೆಂಬಲದಿಂದ ತಮ್ಮ ಹ್ಯಾಟ್ರಿಕ್ ಗೆಲುವಿನ ಸಿಹಿ ಉಂಡರು.

LEAVE A REPLY

Please enter your comment!
Please enter your name here