65 ಕ್ಕೂ ಹಂದಿಗಳ ಸೆರೆ

0
16

ಬ್ಯಾಡಗಿ:

          ಪಟ್ಟಣದಲ್ಲಿ ಹಂದಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ಮತ್ತು ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಸ್ಥಳೀಯ ಪುರಸಭೆಯು ಪಟ್ಟಣದೆಲ್ಲೆಡೆ ಕಾರ್ಯಾಚರಣೆ ನಡೆಸುವ ಮೂಲಕ ಸುಮಾರು 65 ಕ್ಕೂ ಹಂದಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು.
          ಹಂದಿಗಳ ಹಾವಳಿ ಬಗ್ಗೆ ಪಟ್ಟಣದ ಸುತ್ತಲಿರುವ ರೈತರು ಸೇರಿದಂತೆ ಸಾರ್ವಜನಿಕರು ಪುರಸಭೆಗೆ ದೂರನ್ನು ಸಲ್ಲಿಸಿದ್ದರು, ಸದರಿ ದೂರನ್ನಾಧರಿಸಿ ಪಟ್ಟಣದ ವಿನಾಯಕ ನಗರ, ಸಂತೇ ಮೈದಾನ, ವಾಲ್ಮೀಕಿ ಸಂಘ, ಶಿವಪುರ ಬಡಾವಣೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುಮಾರು 65 ಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿದರು.
           ಹಾಸನದ ಪರಿಣಿತರ ತಂಡದಿಂದ ಕಾರ್ಯಾಚರಣೆ:ಹಂದಿಗಳನ್ನು ಓಡಿಸಬಹುದು ಆದರೆ ಅವುಗಳನ್ನು ಸೆರೆ ಹಿಡಿಯುವುದು ಕಷ್ಟ ಸಾಧ್ಯ, ಹೀಗಾಗಿ ಹಾಸನದಿಂದ ಸುಮಾರು 10 ಜನರಿರುವ ತಂಡವು ಪಟ್ಟಣಕ್ಕೆ ಆಗಮಿಸಿದ್ದು ಕಾರ್ಯಾಚರಣೆ ನಡೆಸುವ ಮೂಲಕ ಹಂದಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು..
           ನಿಟ್ಟುಸಿರು ಬಿಟ್ಟ ಸಾರ್ವಜನಿಕರು: ಹಂದಿಗಳ ಹಾವಳಿಗೆ ಪಟ್ಟಣದ ವಿನಾಯಕ ನಗರದಲ್ಲಂತೂ ಸಾರ್ವಜನಿಕರು ಬೇಸತ್ತು ಹೋಗಿದ್ದರು, ಪುರಸಭೆಯಿಂದ ಹಂದಿಗಳನ್ನು ಹಿಡಿದುಕೊಂಡು ಹೋಗುವಂತೆ ಸಾರ್ವಜನಿಕರು ಸಾಕಷ್ಟು ಒತ್ತಡವನ್ನು ಹೇರಿದ್ದರು, ಕೊನೆಗೂ ಜನರ ಒತ್ತಡಕ್ಕೆ ಮಣಿದ ಪುರಸಭೆಯು ಹಂದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿತು ಇದರಿಂದ ಇಲ್ಲಿನ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..
           ರೈತರಿಂದಲೂ ಬಂದಿತ್ತು ಒತ್ತಡ: ಹಂದಿಗಳನ್ನು ಸೆರೆಹಿಡಿಯುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಕೂಡ ಪಟ್ಟಣದಲ್ಲಿರುವ ಹಂದಿಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದರು, ಊರಿಗೆ ಹೊಂದಿಕೊಂಡಿರುವ ಗೋವಿನಜೋಳದ ಬೆಳಗಳಿಗೆ ಹಾನಿ ಪಡಿಸುತ್ತಿವೆ, ಇವುಗಳ ಕಾಟಕ್ಕೆ ರೈತ ಕಂಗಾಲಾಗಿದ್ದಾನೆ ಎಂಬ ಮೌಖಿಕ ಅಹವಾಲನ್ನು ಕೂಡ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here