ತುಮಕೂರು : ರಸ್ತೆಯಲ್ಲಿ ಬಸ್ ನಿಲ್ಲಿಸಿ ಚಾಲಕ ಪರಾರಿ!!

0
340

ತುಮಕೂರು:

       ಟ್ರಾವೆಲ್ಸ್ ಬಸ್ ನ ಚಾಲಕನೊಬ್ಬ ರಸ್ತೆಯ ಬದಿಯಲ್ಲಿ ಬಸ್ ಬಿಟ್ಟು ಪರಾರಿಯಾದ ಘಟನೆ ಬೆಳಗ್ಗೆ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ.

       ಆನ್‍ಲೈನ್ ಮುಖಾಂತರ ಮುಂಗಡ ಟಿಕೆಟ್‍ಗಳನ್ನು ಬುಕ್ ಮಾಡಿ ಜಿಪಿಆರ್ ಟ್ರಾವೆಲ್ಸ್ ನ ಖಾಸಗಿ ಬಸ್ ನಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಸುತ್ತಿದ್ದರು. ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನ ಚಾಲಕ ನಿದ್ದೆಯಲ್ಲಿದ್ದಿದ್ದಕ್ಕೆ ಪ್ರಯಾಣಿಕರು ಬೈದಿದ್ದರು. ಪ್ರಯಾಣಿಕರ ಸಿಟ್ಟಿನಿಂದ ಬೇಸತ್ತ ಚಾಲಕ ಎಪಿಎಂಸಿ ಬಳಿ ಬಸ್ ನಿಲ್ಲಿಸಿ ಪರಾರಿ ಆಗಿದ್ದಾನೆ.

      ಎಷ್ಟು ಸಮಯವಾದರೂ ಚಾಲಕ ಬಾರದಿದ್ದನ್ನು ಕಂಡು ಆಕ್ರೋಶಗೊಂಡ ಪ್ರಯಾಣಿಕರು ನಿರ್ವಾಹಕನ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ಪ್ರಯಾಣಿಕರು ದೂರವಾಣಿ ಕರೆ ಮಾಡಿದರೂ ಟ್ರಾವೆಲ್ಸ್ ಸಿಬ್ಬಂದಿ ಸ್ಪಂದಿಸಿಲ್ಲ. ನಂತರ ಕೆಲ ಪ್ರಯಾಣಿಕರು ಬೇರೆ ವಾಹನಗಳ ಮುಖಾಂತರ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

       ರಾತ್ರಿಯಿಂದ ವಾಹನ ಚಲಾಯಿಸಿದ ಚಾಲಕನಿಗೆ ನಿದ್ದೆ ಬಂದ ಕಾರಣ ಚಾಲಕ ಹಗಲು ವೇಳೆ ನಿದ್ರೆ ಮಂಪರಿನಲ್ಲಿದ್ದನು ಎಂದು ಹೇಳಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here