ಅರ್ಬನ್ ನಕ್ಸಲರಿಗೆ ಕಾಂಗ್ರೆಸ್ ನಿಂದ ಬೆಂಬಲ : ಪ್ರಧಾನಿ ಆರೋಪ

0
47

ನವದೆಹಲಿ: 

PM Modi Questions Congress' Support For 'Urban Maoists' In Chhattisgarh: Live Updates

      ಅರ್ಬನ್​ ನಕ್ಸಲರಿಗೆ ಕಾಂಗ್ರೆಸ್​ ಸಹಾಯ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಆರೋಪಿಸಿದ್ದಾರೆ. 

      ಬಸ್ತಾರ್ ಜಿಲ್ಲೆಯ ಕೇಂದ್ರ ಸ್ಥಾನ ಜಗದಾಲ್‌ಪುರದಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅರ್ಬನ್​ ನಕ್ಸಲರು ಎಸಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಿದವರು. ಐಷಾರಾಮಿ ಕಾರುಗಳಲ್ಲಿ ಎಲ್ಲ ಕಡೆ ಸುತ್ತುತ್ತಾರೆ. ಆದರೆ, ಬುಡಕಟ್ಟು, ಸಾಮಾನ್ಯ ಯುವಕರ ಜೀವನ ನಾಶ ಮಾಡುತ್ತಿದ್ದಾರೆ. ಅಂಥವರಿಗೆ ಕಾಂಗ್ರೆಸ್​ ಬೆಂಬಲ ನೀಡುತ್ತಿದೆ ಎಂದು ದಶಕಗಳಿಂದ ನಕ್ಸಲ್​ ಚಟುವಟಿಕೆಗಳ ಮುಖ್ಯಕೇಂದ್ರವಾದ ಛತ್ತೀಸ್​ಗಢದಲ್ಲಿ ಸಾರ್ವಜನಿಕ ಸಭೆಯಲ್ಲೇ ಹೇಳಿದರು.

      ಇಲ್ಲಿನ ಜನರ ಬದುಕನ್ನು ಜಗತ್ತಿನ ಎದುರು ತೆರೆದಿಡಲೆಂದು ಬಂದಿದ್ದ ದೂರದರ್ಶನದ ಪತ್ರಕರ್ತನನ್ನು ನಕ್ಸಲರು ಕೊಂದು ಹಾಕಿದರು. ಆತ ಮಾಡಿದ್ದ ತಪ್ಪಾದರೂ ಏನು? ಅವನೇನು ಹೆಗಲ ಮೇಲೆ ಬಂದೂಕು ಹೊತ್ತು ಬಂದಿರಲಿಲ್ಲ. ಅವನು ತಂದಿದ್ದುದು ಕ್ಯಾಮೆರಾ ಮಾತ್ರ. ನಿರ್ದೋಷಿಗಳ ಹತ್ಯೆ ಮಾಡುವ ಮಾವೋವಾದಿಗಳನ್ನು ಕಾಂಗ್ರೆಸ್‌ ನಾಯಕರು ಅಮಾಯಕರು ಎನ್ನುತ್ತಾರೆ. ಒಬ್ಬ ನಿರ್ದೋಷಿ ಪತ್ರಕರ್ತನ ಹತ್ಯೆ ಮಾಡಿದವರನ್ನು ಕ್ರಾಂತಿಕಾರಿ ಎಂದರೆ ಈ ದೇಶ ನಿಮ್ಮನ್ನು ಕ್ಷಮಿಸುವುದು ಅಂದುಕೊಂಡಿದ್ದೀರಾ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು.

      ಬಸ್ತಾರ್ ಜಿಲ್ಲೆಯ ಕೇಂದ್ರ ಸ್ಥಾನ ಜಗದಾಲ್‌ಪುರದಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಶಾಂತಿಯ ದಾರಿಯಲ್ಲಿ ನಡೆಯುವುದು ನಮ್ಮ ಉದ್ದೇಶ. ನಿಮ್ಮ ಕನಸನ್ನು ನನಸು ಮಾಡಲು ನಮ್ಮ ಬೆವರು ಹರಿಸುತ್ತೇವೆ. ಅದೇ  ನಮ್ಮ ಪುರುಷಾರ್ಥ, ನಮ್ಮ ಸಂಕಲ್ಪ. ಬನ್ನಿ ಹೊಸ ಬಸ್ತಾರ್ ಕಟ್ಟೋಣ, ಛತ್ತೀಸಗಡ ಸುಧಾರಿಸೋಣ ಎಂದು ಭಾವುಕರಾಗಿ ನುಡಿದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here