ತಾಜ್ ಮಹಲ್ ನಲ್ಲಿ ನಿತ್ಯ ನಮಾಜ್ ಗಿಲ್ಲ ಅವಕಾಶ

0
57

ಆಗ್ರಾ:

      ತಾಜ್‌ಮಹಲ್‌ ಆವರಣದಲ್ಲಿರುವ ಮಸೀದಿಯಲ್ಲಿ ಪ್ರತಿನಿತ್ಯ ನಮಾಜ್ ಮಾಡುವುದನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿದೆ. 

      ಈ ಕುರಿತು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಆದೇಶ ಒಂದನ್ನು ಹೊರಡಿಸಿದ್ದು,  ಶುಕ್ರವಾರ ಮಾತ್ರ ಹೊರಗಿನವರು ನಮಾಜ್ ಲ್ಲಿ ಪಾಲ್ಗೊಳ್ಳಬಹುದು. ಉಳಿದ ದಿನ ಸ್ಥಳೀಯರನ್ನು ಹೊರತುಪಡಿಸಿ ಹೊರಗಿನವರಿಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದೆ.

       ಭದ್ರತಾ ಕಾರಣಗಳಿಗಾಗಿ ಸ್ಥಳೀಯರನ್ನು ಹೊರತುಪಡಿಸಿ ಉಳಿದವರನ್ನು ಮಸೀದಿ ಒಳಗೆ ತೆರಳಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದೆ. ಸುಪ್ರೀಂಕೋರ್ಟ್ ಈಗಾಗಲೇ ನೀಡಿರುವ ಆದೇಶಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

      ಸುಪ್ರೀಂಕೋರ್ಟ್ ಈಗಾಗಲೇ ನೀಡಿರುವ ಆದೇಶಕ್ಕೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

      ಈ ಹಿಂದೆ ಇತರೆ ದಿನಗಳಲ್ಲಿ ತಾಜ್ ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದವರು ಯಾರು ಬೇಕಾದರೂ ಮಸೀದಿಗೆ ಭೇಟಿ ನೀಡಿ ನಮಾಜ್ ಸಲ್ಲಿಸಲು ಅವಕಾಶವಿತ್ತು. ಇದೀಗ ಟಿಕೆಟ್ ಇದ್ದರೂ ಕೂಡ ಶುಕ್ರವಾರ ಹೊರತುಪಡಿಸಿ ಮಸೀದಿಗೆ ತೆರಳಲು ಅವಕಾಶವಿಲ್ಲ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here